ಇರಾನ್ ವಿರುದ್ಧ ಅಮೆರಿಕ ಯುದ್ಧ ಘೋಷಣೆ ಮಾಡಿದರೆ ರಷ್ಯಾ ಮತ್ತು ಚೀನಾ ಎಂಟ್ರಿ?
ಇರಾನ್ ವಿರುದ್ಧ ಅಮೆರಿಕ ನೇರವಾಗಿ ದಾಳಿ ಮಾಡಿ, ಸೇನಾ ಕಾರ್ಯಾಚರಣೆ ನಡೆಸಲು ಎಲ್ಲಾ ರೀತಿ ಸಿದ್ಧತೆ ಮಾಡಿಕೊಂಡಿದೆ. ಪರಿಸ್ಥಿತಿ ಭೀಕರವಾಗಿದ್ದು ಘೋರ ಯುದ್ಧ ಆರಂಭವಾಗಿ ಇಡೀ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ತಲೆನೋವು ಎದುರಾಗುವ ಆತಂಕ ಕೂಡ ಕಾಡುತ್ತಿದೆ. ಹೀಗಿದ್ದಾಗ ಇರಾನ್ ಕೂಡ ನಾವು ಯುದ್ಧ ಮಾಡಲು ಸಿದ್ಧ ಎಂದು ಮೊಂಡುತನದ ಹೇಳಿಕೆ ಕೊಡುತ್ತಿದೆ. ಕ್ಷಣಕ್ಷಣಕ್ಕೂ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಯಾವುದೇ ಹಂತದಲ್ಲಿ ಮಿಸೈಲ್ & ಬಾಂಬ್ ಹಾರಾಡಬಹುದು ಎನ್ನುತ್ತಾ ಸಾಮಾನ್ಯ ಜನ ಚಿಂತೆ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆಯೇ ಇರಾನ್ ವಿರುದ್ಧ ಅಮೆರಿಕ ಯುದ್ಧ ಘೋಷಣೆ ಮಾಡಿದರೆ ರಷ್ಯಾ ಮತ್ತು ಚೀನಾ ಎಂಟ್ರಿ?
ಜಗತ್ತಿನಲ್ಲಿ ಇರಾನ್ ಸ್ನೇಹ ಇಟ್ಟುಕೊಂಡಿರುವ ಕೆಲವೇ ಕೆಲವು ದೇಶಗಳ ಪೈಕಿ ರಷ್ಯಾ ಮತ್ತು ಚೀನಾ ಮುಂಚೂಣಿ ರಾಷ್ಟ್ರಗಳು. ಅದರಲ್ಲೂ ಚೀನಾ ದೇಶ ಇರಾನ್‌ಗೆ ಸಾಕಷ್ಟು ಸಹಾಯ ಮಾಡಿದ್ದು, ಈ ಕಾರಣಕ್ಕೆ ಚೀನಾ ಸಹಾಯಕ್ಕೆ ಇರಾನ್ ಋಣಿಯಾಗಿದೆ. ಮತ್ತೊಂದು ಕಡೆ ರಷ್ಯಾ ಕೂಡ ನೇರವಾಗಿಯೇ ಇರಾನ್ ಬೆಂಬಲಕ್ಕೆ ನಿಲ್ಲುತ್ತಿದ್ದು, ಯಾವುದೇ ರೀತಿಯ ಸಹಾಯಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿ ಖಡಕ್ ಎಚ್ಚರಿಕೆ ಕೊಡುತ್ತಿದೆ. ಇಷ್ಟೆಲ್ಲದರ ನಡುವೆ ಕೂಡ ಇರಾನ್ ಮೇಲೆ ನೇರವಾಗಿ ದಾಳಿ ಮಾಡಿ ಸೇನಾ ಕಾರ್ಯಾಚರಣೆ ಕೈಗೊಳ್ಳಲು ಅಮೆರಿಕ ಎಂಟ್ರಿ ಕೊಟ್ಟಿದೆ. ಹೀಗಾಗಿ ಈ ಯುದ್ಧದಲ್ಲಿ ಸಂಚಲನ ಸೃಷ್ಟಿ ಮಾಡುವ ಸುದ್ದಿಯೊಂದು ಈಗ ಹಬ್ಬಿದೆ. ಅದು ರಷ್ಯಾ ಮತ್ತು ಚೀನಾ ಎಂಟ್ರಿಯ ಬಗ್ಗೆ.

ಪರಮಾಣು ಬಾಂಬ್ ಬಳಕೆಯ ಆತಂಕ?
ಇರಾನ್ ಈಗಾಗಲೇ ತನ್ನ ನೆಲದಲ್ಲಿ ಪರಮಾಣು ಕಾರ್ಯಕ್ರಮ ಶುರು ಮಾಡಿ ಹಲವು ವರ್ಷ ಕಳೆದು ಹೋಗಿದೆ. ಆದರೆ ಇರಾನ್ ಈವರೆಗೂ ಪರಮಾಣು ಬಾಂಬ್ ಸಿದ್ಧಪಡಿಸಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಹೀಗಿದ್ದರೂ ರಷ್ಯಾ ಮತ್ತು ಚೀನಾ ನಾಯಕರು ಮೊದಲಿನಿಂದ ಕೂಡ ಇರಾನ್ ಪರಮಾಣು ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅದರಲ್ಲೂ ರಷ್ಯಾ ಅಧ್ಯಕ್ಷ ಪುಟಿನ್ ನೇರವಾಗಿ ಇರಾನ್ ಸರ್ವಾಧಿಕಾರಿ ಖಮೇನಿ ಜೊತೆ ಸಭೆಗಳನ್ನು ಕೂಡ ನಡೆಸಿದ್ದಾರೆ.
ಅಲ್ಲದೆ ರಷ್ಯಾ ಮೂಲದ ಹಲವು ಪರಮಾಣು ವಿಜ್ಞಾನಿಗಳು ಈಗಲು ಇರಾನ್ ಪರಮಾಣು ಕಾರ್ಯಕ್ರಮ ಯಶಸ್ಸಿಗಾಗಿ ದುಡಿಯುತ್ತಾ ಇದ್ದಾರೆ. ಇದರ ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ಇರಾನ್ ಮತ್ತು ರಷ್ಯಾ ದೊಡ್ಡ ಪಾಲುದಾರ ದೇಶಗಳೇ ಆಗಿವೆ. ಹೀಗಿದ್ದಾಗ ಅಮೆರಿಕ ನೇರವಾಗಿ ಇರಾನ್‌ನ ಮುಟ್ಟಿದರೆ ರಷ್ಯಾ ಸುಮ್ಮನೆ ಕೂರಲು ಆಗದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಪರಿಣಾಮ ರಷ್ಯಾ ಕೂಡ ಆಗ ಅನಿವಾರ್ಯ ಪರಿಸ್ಥಿತಿಯಲ್ಲಿ ಯುದ್ಧದ ಅಖಾಡಕ್ಕೆ ಎಂಟ್ರಿ ಕೊಡುವ ಸಾಧ್ಯತೆ ದಟ್ಟವಾಗಿ ಇರಲಿದೆ.
ಚೀನಾ ಕೂಡ ಎಂಟ್ರಿ ಕೊಡಬಹುದು
ರಷ್ಯಾ ಯಾಕೆ ಎಂಟ್ರಿ ಕೊಡಬಹುದು ಎಂಬ ಚರ್ಚೆಗಳ ಜೊತೆಗೆ, ಚೀನಾ ಯಾಕೆ ಇರಾನ್ ಬೆನ್ನಿಗೆ ನಿಂತು ಹೋರಾಡಬಹುದು? ಎಂಬ ಚರ್ಚೆ ಕೂಡ ನಡೆಯುತ್ತಿದೆ. ಆದರೆ ಇದಕ್ಕೆ ಸ್ಪಷ್ಟವಾದ ಉತ್ತರ ಏನು ಎಂದರೆ, ಚೀನಾ ಜೊತೆ ಬಿಗಿಯಾಗಿ ನಿಂತು ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ಪಾಲುದಾರ ದೇಶವಾಗಿದೆ ಇರಾನ್. ಚೀನಾ ಮೂಲಕವೇ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಶಸ್ತ್ರಾಸ್ತ್ರ ಖರೀದಿ ಕೂಡ ಮಾಡುತ್ತಿದೆ ಇರಾನ್. ಅಲ್ಲದೆ ಮಧ್ಯಪ್ರಾಚ್ಯ ಭಾಗದಲ್ಲಿ ಚೀನಾ ಹಿಡಿತ ಬಿಗಿಗೊಳಿಸಲು ಇದೇ ಇರಾನ್ ಅತ್ಯಗತ್ಯ, ಹೀಗಿದ್ದಾಗ ಅಮೆರಿಕ ಅಕಸ್ಮಾತ್ ಇರಾನ್ ಮೇಲೆ ದಾಳಿ ಮಾಡಿದರೆ ಆಗ ಚೀನಾ ಕೂಡ ಭರ್ಜರಿ ಎಂಟ್ರಿ ಕೊಡುವ ಸಾಧ್ಯತೆ ದಟ್ಟವಾಗಿದೆ.
ಒಟ್ನಲ್ಲಿ ಇರಾನ್ ಯುದ್ಧ ಹಲವು ಸಂಕಷ್ಟಗಳನ್ನು ಒಟ್ಟೊಟ್ಟಿಗೆ ಸೃಷ್ಟಿ ಮಾಡುವ ಆತಂಕ ಇದ್ದು, ಈ ಕಾರಣಗಳಿಗೆ ಇರಾನ್ ಮೇಲೆ ಅಮೆರಿಕ ದಾಳಿ ಮಾಡುವುದು ಬೇಡ ಅಂತಿದ್ದಾರೆ ಸ್ನೇಹಿತ ದೇಶಗಳು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತ್ರ ಈ ವಿಚಾರದಲ್ಲಿ ಗಟ್ಟಿಯಾಗಿ ನಿಂತಿದ್ದು, ಇರಾನ್ ಒಂದೋ ನಮ್ಮ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿ ಅಥವಾ ಇರಾನ್ ಮೇಲೆ ನಾವೇ ದಾಳಿ ಮಾಡುತ್ತೇವೆ ಅಂತಿದ್ದಾರೆ. ಹೀಗಿದ್ದಾಗ ಇರಾನ್ ಮೇಲೆ ದಾಳಿ ನಡೆದರೆ ಆಗ ಚೀನಾ & ರಷ್ಯಾ ಕೂಡ ಎಂಟ್ರಿ ಕೊಡುವುದು ಬಹುತೇಕ ಗ್ಯಾರಂಟಿ.












Click it and Unblock the Notifications