Iran President: ಅಧ್ಯಕ್ಷನ ಸಾವು, ದೇಶಾದ್ಯಂತ ಹೈಅಲರ್ಟ್!
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು ಈಗ ಆ ದೇಶದಲ್ಲಿ ಸೂಕ್ಷ್ಮ ಪರಿಸ್ಥಿತಿ ಹುಟ್ಟುಹಾಕಿದೆ. ಕಳೆದ 2 ದಿನದಿಂದ ಇರಾನ್ ವಾತಾವರಣ ಸರಿಯಾಗಿಲ್ಲ. ಹೀಗಾಗಿ ಅಲರ್ಟ್ ಘೋಷಿಸಿರುವ ಇರಾನ್ ಅಧಿಕಾರಿಗಳು, ಎಲ್ಲೆಲ್ಲೂ ಹದ್ದಿನ ಕಣ್ಣು ಇಟ್ಟಿದ್ದಾರೆ. ಇದರ ಜೊತೆಗೆ ಹಿಂಸಾಚಾರ ಭುಗಿಲೇಳದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಇರಾನ್ ಅಧ್ಯಕ್ಷರ ಸಾವು ಆ ದೇಶವನ್ನು ಬೆಂಕಿಯ ಬಲೆಗೆ ನೂಕಿದೆ. ಯಾಕಂದ್ರೆ ಇಸ್ರೇಲ್‌ನ ವಿರುದ್ಧ ಯುದ್ಧ ಸಾರಲು ಸಜ್ಜಾಗಿದ್ದ ಇರಾನ್ ದೇಶಕ್ಕೆ ಅಧ್ಯಕ್ಷರ ಸಾವು ನೋವು ತಂದಿದೆ. ಈ ಮೂಲಕ ಇರಾನ್ ಜನ ಈಗ ಇಸ್ರೇಲ್ & ಅಮೆರಿಕ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹಾಗೆಯೇ ದೊಡ್ಡ ಮಟ್ಟದಲ್ಲಿ ಹೋರಾಟಗಳು ಆರಂಭವಾಗುವ ಭಯ ಕೂಡ ಕಾಡುತ್ತಿದೆ. ಮತ್ತೊಂದು ಕಡೆ ಒಂದು ಚೂರು ಎಡವಟ್ಟು ನಡೆದರೂ ಇಡೀ ಇರಾನ್ ಬೆಂಕಿಯಲ್ಲಿ ಬೆಂದು ಹೋಗಲಿದೆ. ಈ ಎಲ್ಲಾ ಕಾರಣಕ್ಕೆ ಇಸ್ರೇಲ್ ಸೇನೆ ಮತ್ತು ಅಲ್ಲಿನ ಸರ್ಕಾರ ಈಗ ಅಲರ್ಟ್ ಆಗಿ ಇರಾನ್‌ನ ಗಲ್ಲಿ ಗಲ್ಲಿಗಳ ಮೇಲೂ ಕಣ್ಣಿಟ್ಟಿದೆ.

ಅಮೆರಿಕ ವಿರುದ್ಧ ಆಕ್ರೋಶ!
ಇರಾನ್ ಹಾಗೂ ಅಮೆರಿಕ ನಡುವೆ ಎಲ್ಲವೂ ಸರಿಯಾಗಿಲ್ಲ, ಮೊದಲಿನಿಂದ ಕೂಡ ಎರಡು ದೇಶಗಳ ನಡುವೆ ಕಿರಿಕ್ ನಡೆಯುತ್ತಲೇ ಇದೆ. ಹೀಗಿದ್ದಾಗಲೇ ಮೇ ಆರಂಭದಲ್ಲಿ ಇರಾನ್ & ಇಸ್ರೇಲ್ ನಡುವೆ ಯುದ್ಧ ನಡೆಯುತ್ತೆ ಎಂಬ ಭಯ ಆವರಿಸಿತ್ತು. ಆದರೆ ಹಾಗೆ ನಡೆಯಲಿಲ್ಲ, ಈ ವಿಚಾರದಲ್ಲಿ ಅಮೆರಿಕ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಯಾಕಂದ್ರೆ ಇರಾನ್‌ನ ಬಳಿ ನ್ಯೂಕ್ಲಿಯರ್ ವೆಪನ್ಸ್ ಇವೆ. ಅಕಸ್ಮಾತ್ ಇರಾನ್ ದಾಳಿ ಮಾಡಿದರೆ ಇಸ್ರೇಲ್ & ಅಮೆರಿಕ ಪರಮಾಣು ಸಂಕಷ್ಟಕ್ಕೆ ಸಿಲುಕುವ ಅಪಾಯ ಇತ್ತು. ಇಷ್ಟೆಲ್ಲದರ ನಡುವೆ ಕೂಡ ಇರಾನ್‌ನ ಅಧ್ಯಕ್ಷ ಮೃತಪಟ್ಟಿರುವುದು ಭಾರಿ ಆತಂಕ ಸೃಷ್ಟಿ ಮಾಡಿದೆ.
ಇಸ್ರೇಲ್ ಮುಟ್ಟಿದರೆ ಅಮೆರಿಕ ಎಂಟ್ರಿ?
ದೊಡ್ಡಣ್ಣ ಅಮೆರಿಕ ನರಳುತ್ತಿದೆ ಯಾಕಂದ್ರೆ ಅಮೆರಿಕ ಬಿಸಿ ತುಪ್ಪ ಗಂಟಲಿಗೆ ಸುರಿದುಕೊಂಡಿದೆ ಒಂದು ಕಡೆ ಇಸ್ರೇಲ್ ಮಾಡುತ್ತಿರುವ ತಪ್ಪು ಒಪ್ಪಿಕೊಳ್ಳಲು ಅಮೆರಿಕಗೆ ಆಗುತ್ತಿಲ್ಲ, ಮತ್ತೊಂದು ಕಡೆ ಇಸ್ರೇಲ್ ವಿರುದ್ಧ ಹೋಗಲು ಅಮೆರಿಕ ನಾಯಕರಿಗೆ ಆತಂಕ. ಇದು ಭಯ ಹೆಚ್ಚಿಸುತ್ತಿದ್ದು, ಯಾವ ಕ್ಷಣದಲ್ಲಿ ಇಸ್ರೇಲ್ ವಿರುದ್ಧ ಇರಾನ್ ಯುದ್ಧ ಘೋಷಣೆ ಮಾಡುತ್ತೆ? ಅಂತಾ ಚರ್ಚೆಯ ಸುನಾಮಿ ಶುರುವಾಗಿದೆ. ಅಕಸ್ಮಾತ್ ಇಸ್ರೇಲ್ ವಿರುದ್ಧ ಇರಾನ್ ಯುದ್ಧ ಘೋಷಣೆ ಮಾಡಿದರೆ ಆಗ ಅನಿವಾರ್ಯವಾಗಿ ಅಮೆರಿಕ ಕೂಡ ಇಸ್ರೇಲ್ ಪರ ನಿಲ್ಲಬೇಕಾಗುತ್ತದೆ.












Click it and Unblock the Notifications