ಅಧ್ಯಕ್ಷರ ಹುದ್ದೆ ಖಾಲಿ ಇದೆ, ಅರ್ಜಿ ಹಾಕಿ!

ಇರಾನ್ ಕೊತ ಕೊತ ಕುದಿಯುತ್ತಿದೆ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು ದೊಡ್ಡ ಗೊಂದಲ ಸೃಷ್ಟಿ ಮಾಡಿದೆ. ಪರಿಸ್ಥಿತಿ ಕೈಮೀರಿ ಹೋಗಿ, ಇಸ್ರೇಲ್ ವಿರುದ್ದ ಇರಾನ್ ಯುದ್ಧ ಸಾರುವ ಸಾಧ್ಯತೆ ಇದೆ ಎನ್ನುವಾಗಲೇ ಹೊಸ ಹೆಜ್ಜೆ ಇಟ್ಟಿದೆ ಇರಾನ್. ಅದು ಏನೆಂದರೆ ಮೊದಲಿಗೆ, ಇರಾನ್ ದೇಶಕ್ಕೆ ಹೊಸ ಅಧ್ಯಕ್ಷರ ಆಯ್ಕೆ ಮಾಡಲು ಇರಾನ್ ಈಗ ಮುಂದೆ ಬಂದಿದೆ. ಈ ಪ್ರಕ್ರಿಯೆ ನಂತರ ಇಸ್ರೇಲ್ ವಿರುದ್ಧ ಇರಾನ್ ರೊಚ್ಚಿಗೇಳುವ ಸಾಧ್ಯತೆ ದಟ್ಟವಾಗಿದೆ.

ಕೆಲ ದಿನಗಳ ಹಿಂದಷ್ಟೇ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ದುರಂತದಲ್ಲಿ ಜೀವ ಬಿಟ್ಟಿದ್ದರು. ಹೆಲಿಕಾಪ್ಟರ್ ದುರಂತದಲ್ಲಿ 7 ಜನರ ಜೊತೆಗೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೂಡ ಜೀವ ಬಿಟ್ಟಿದ್ದರು. ಹೀಗಾಗಿ ರೈಸಿ ಸಾವಿನಿಂದ ತೆರವಾಗಿದ್ದ ಸ್ಥಾನಕ್ಕೆ ಜೂನ್ 28 ರಂದು ಚುನಾವಣೆ ನಡೆಯಲಿದೆ. ಇದೀಗ ಅಧ್ಯಕ್ಷೀಯ ಚುನಾವಣೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಯಾರೆಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಅರ್ಹರೋ, ಅವರೆಲ್ಲಾ ಅರ್ಜಿ ಸಲ್ಲಿಸೋಕೆ ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ ಇರಾನ್ ಅಧ್ಯಕ್ಷರಾಗಲು ಏನೆಲ್ಲಾ ಅರ್ಹತೆ ಬೇಕಾಗಿದೆ? ಬನ್ನಿ ತಿಳಿಯೋಣ.

Iran Has Been Started Accepting The Applications For President Election

40ರಿಂದ 75 ವರ್ಷ ವಯಸ್ಸು!

ಇರಾನ್ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಮಾಡಲು ನೋಂದಣಿ ಮಾಡಿಕೊಳ್ಳಲು ಇಚ್ಛಿಸುವ ವ್ಯಕ್ತಿಗೆ 40 ರಿಂದ 75 ವರ್ಷ ವಯಸ್ಸಾಗಿರಬೇಕು. ವಿದ್ಯಾರ್ಹತೆಗೆ ಬಂದ್ರೆ ಕನಿಷ್ಠ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿ ಅರ್ಹರಾಗಿರುತ್ತಾರೆ. ಈ ಅಭ್ಯರ್ಥಿಗಳನ್ನ 12 ಸದಸ್ಯರ 'ಗಾರ್ಡಿಯನ್ ಕೌನ್ಸಿಲ್‌' ಅನುಮೋದಿಸಬೇಕು. ಮೌಲ್ವಿಗಳು & ನ್ಯಾಯಶಾಸ್ತ್ರಜ್ಞರ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಇರಾನ್ ನಾಯಕ ಅಯಾತೊಲ್ಲಾ ಅಲಿ ಖಮೇನಿ 'ಗಾರ್ಡಿಯನ್ ಕೌನ್ಸಿಲ್‌' ಉಸ್ತುವಾರಿ ವಹಿಸಿ ನಿರ್ಧಾರ ಪ್ರಕಟಿಸುವರು. 5 ದಿನಗಳ ತನಕ ನೋಂದಣಿ ಪ್ರಕ್ರಿಯೆಯನ್ನ ನಡೆಸಲಾಗುತ್ತದೆ.

ಹೆಲಿಕಾಪ್ಟರ್ ದುರಂತದಲ್ಲಿ ಭೀಕರ ಸಾವು

ಅಜೆರ್‌ಬೈಜಾನ್‌ ಅರಾಸ್ ನದಿಗೆ ನಿರ್ಮಿಸಿದ ಡ್ಯಾಂ ಉದ್ಘಾಟನೆಗೆ ರೈಸಿ ಅತಿಥಿಯಾಗಿ ಹೋಗಿದ್ರು ಆದರೆ ಈ ಸಮಯದಲ್ಲಿ ಭೀಕರ ದುರಂತ ನಡೆದಿರುವುದು ಪರಿಸ್ಥಿತಿ ಆತಂಕಕ್ಕೆ ದೂಡಿದೆ. ಹಾಗೇ ಇರಾನ್ ಸೇನೆ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುತ್ತಾ ಎಂಬ ಪ್ರಶ್ನೆ ಕೂಡ ಮೂಡಿದೆ. ಈ ಬೆನ್ನಲ್ಲೇ ಇರಾನ್ ಈಗ ಇಬ್ರಾಹಿಂ ರೈಸಿ ಜಾಗಕ್ಕೆ ಹಂಗಾಮಿ ಅಧ್ಯಕ್ಷನ ಆಯ್ಕೆ ಮಾಡಿತ್ತು. ಆ ನಂತರ ಅಧ್ಯಕ್ಷೀಯ ಚುನಾವಣೆ ನಡೆಸುವ ಘೋಷಣೆ ಕೂಡ ಮಾಡಿತ್ತು. ಇದೀಗ ಅರ್ಜಿಗಳ ಆಹ್ವಾನ ಪ್ರಕ್ರಿಯೆ ನಡೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಕೂಡ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+