Israel war: ಹಮಾಸ್ ಕಾರ್ಯಾಚರಣೆಗೆ ಇರಾನ್ ಧನಸಹಾಯ: ಯುಎನ್‌ನಲ್ಲಿ ಇಸ್ರೇಲ್ ಪ್ರತಿನಿಧಿ ಆರೋಪ
ಇಸ್ರೇಲ್ ಮೇಲಿನ ಹಮಾಸ್ ಗುಂಪಿನ ಕಾರ್ಯಾಚರಣೆಗಳಿಗೆ ಇರಾನ್ ಧನಸಹಾಯ ನೀಡುತ್ತಿದೆ ಎಂದು ಯುಎನ್‌ನ ಇಸ್ರೇಲ್‌ನ ರಾಯಭಾರಿ ಆರೋಪಿಸಿದ್ದಾರೆ. ಪ್ಯಾಲೆಸ್ಟೀನ್‌ನೊಂದಿಗಿನ ಯುದ್ಧದ ನಡುವೆಯೇ ಇಸ್ರೇಲ್‌ನ ಮೇಲೆ ಹಮಾಸ್ ಗಾಝಾಪಟ್ಟಿಯಿಂದ ದಾಳಿ ಮಾಡಿನ ನಂತರ ಈ ಹೇಳಿಕೆ ನೀಡಿದ್ದಾರೆ.
ಯುಎನ್‌ನ ಇಸ್ರೇಲ್ ಪ್ರತಿನಿಧಿ ಗಿಲಾಡ್ ಎರ್ಡಾನ್ ಅವರು, ಇರಾನ್ ಹಮಾಸ್‌ನ ಕಾರ್ಯಾಚರಣೆಯನ್ನು ಬೆಂಬಲಿಸುತ್ತಿದೆ ಮತ್ತು ಸಂಘರ್ಷದಲ್ಲಿ ಈವರೆಗೆ 600 ಕ್ಕೂ ಹೆಚ್ಚು ಇಸ್ರೇಲಿ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮಂದಿ ಗಾಯಗೊಂಡರು, ಹಮಾಸ್ ಉಗ್ರರು ಭಯೋತ್ಪಾದಕ ದಾಳಿಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಎರ್ಡಾನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು, ಇರಾನ್ ಪ್ಯಾಲೇಸ್ಟಿನಿಯನ್ನರ ಆತ್ಮರಕ್ಷಣೆ ಹಕ್ಕನ್ನು ಬೆಂಬಲಿಸುತ್ತದೆ ಮತ್ತು ಈ ಪ್ರದೇಶವನ್ನು ಅಪಾಯಕ್ಕೆ ಸಿಲುಕಿಸಿದ್ದಕ್ಕೆ ಇಸ್ರೇಲ್ ಜವಾಬ್ದಾರರಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಜವಾಬ್ದಾರಿ ಹೊರಬೇಕಾಗುತ್ತದೆ
"ಇರಾನ್ ಪ್ಯಾಲೇಸ್ಟಿನಿಯನ್ ರಾಷ್ಟ್ರದ ಕಾನೂನುಬದ್ಧ ರಕ್ಷಣೆಯನ್ನು ಬೆಂಬಲಿಸುತ್ತದೆ. ಜಿಯೋನಿಸ್ಟ್ ಆಡಳಿತ (ಇಸ್ರೇಲ್) ಮತ್ತು ಅದರ ಬೆಂಬಲಿಗರು ಈ ಪ್ರದೇಶದಲ್ಲಿ ರಾಷ್ಟ್ರಗಳ ಭದ್ರತೆಗೆ ಅಪಾಯವನ್ನುಂಟುಮಾಡಲು ಜವಾಬ್ದಾರರಾಗಿರುತ್ತಾರೆ ಎಂದರು.
ಸಿರಿಯಾ, ಲೆಬನಾನ್ ಮತ್ತು ಇರಾಕ್ ಸೇರಿದಂತೆ ಹಲವು ದೇಶಗಳಲ್ಲಿ ಹಮಾಸ್ ಮತ್ತು ಇತರ ಗುಂಪುಗಳ ಪ್ರತಿರೋಧ ಹೋರಾಟಗಳನ್ನು ಹೊಗಳಿದ ಅವರು, ಪ್ಯಾಲೆಸ್ತೀನ್ ರಾಷ್ಟ್ರವನ್ನು ಬೆಂಬಲಿಸುವಂತೆ ಮುಸ್ಲಿಂ ರಾಷ್ಟ್ರಗಳಿಗೆ ಕರೆ ನೀಡಿದರು.
ಇರಾನ್ ಜೂನ್‌ನಲ್ಲಿ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ನಾಯಕರೊಂದಿಗೆ ಮಾತುಕತೆ ನಡೆಸಿತ್ತು. ಇಸ್ರೇಲ್‌ನಿಂದ ಆಕ್ರಮಿತವಾಗಿರುವ ಪ್ಯಾಲೆಸ್ಟೀನಿಯನ್ನರ ಪ್ರದೇಶಗಳನ್ನು ವಿಮೋಚನೆಗೊಳಿಸುವ ಪ್ರಯತ್ನ ವಿಫಲವಾಗಿಸಲು ಇಸ್ರೇಲ್ ಹೆಚ್ಚು ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಪ್ರಯತ್ನಿಸುತ್ತಿದೆ ಎಂದು ಇಬ್ರಹಾಂ ರೈಸಿ ಹೇಳಿದ್ದಾರೆ.
1000ಕ್ಕೂ ಹೆಚ್ಚು ಮಂದಿ ಸಾವು
ಇಸ್ರೇಲ್ ಮೇಲೆ ಹಮಾಸ್ ದಾಳಿಯನ್ನು ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ನಡೆದ 9/11 ಭಯೋತ್ಪಾದಕರ ದಾಳಿಗೆ ಹೋಲಿಕೆ ಮಾಡಲಾಗಿದೆ. ಇಸ್ರೇಲ್ ಸೇನೆಯ ವಕ್ತಾರ ಇದು ನಮ್ಮ ಮೇಲಿನ 9/11 ಅದಕ್ಕಿಂತ ಹೆಚ್ಚಿನದ್ದಾಗಿದೆ. ಹಮಾಸ್ ಉಗ್ರರು ದೇಶದ ನಾಗರಿಕರು, ವೃದ್ಧರು ಮತ್ತು ಶಿಶುಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈವರೆಗೆ ಇಸ್ರೇಲ್ - ಹಮಾಸ್ ನಡುವಿನ ಸಂಘರ್ಷದಲ್ಲಿ 1000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ಹಠಾತ್ ದಾಳಿಯಲ್ಲಿ ಹಲವಾರು ಅಮೆರಿಕನ್ನರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
"ನಾವು ಹಲವಾರು ಅಮೆರಿಕ ನಾಗರಿಕರ ಸಾವನ್ನು ದೃಢೀಕರಿಸಬಹುದು" ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ತಿಳಿಸಿದ್ದಾರೆ. "ನಾವು ಸಂತ್ರಸ್ತರಿಗೆ ಮತ್ತು ಎಲ್ಲಾ ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ." ಎಂದು ಹೇಳಿದ್ದಾರೆ.












Click it and Unblock the Notifications