ಕೆಂಪು ಸಮುದ್ರದ ಮೇಲೆ ರಕ್ತದೋಕುಳಿ! ಇರಾನ್ ಹಡಗಿನ ಮೇಲೆ ಭೀಕರ ದಾಳಿ..!

ಇರಾನ್ ಹಾಗೂ ಇಸ್ರೇಲ್ ನಡುವಿನ ಮುಸುಕಿನ ಗುದ್ದಾಟ ಭಯಾನಕ ರೂಪ ಪಡೆಯುತ್ತಿದೆ. ಇದೀಗ ಕೆಂಪು ಸಮುದ್ರದಲ್ಲಿ ಅಂದರೆ ಸೂಯೆಜ್ ಕಾಲುವೆ ಕೂಡುವ ಸಮುದ್ರ ಭಾಗದಲ್ಲಿ ಇರಾನ್ ಹಡಗಿನ ಮೇಲೆ ಭೀಕರ ದಾಳಿ ನಡೆದಿದೆ. ತನ್ನ ಸರಕು ಸಾಗಾಣಿಕೆ ಹಡಗಿನ ಮೇಲೆ ದಾಳಿ ನಡೆದಿರುವುದನ್ನು ಇರಾನ್ ಸ್ಪಷ್ಟಪಡಿಸಿದ್ದು, ಇಸ್ರೇಲ್ ಹಡಗುಗಳ ಮೇಲೆ ಹಿಂದಿನ ದಾಳಿಗೆ ಇದು ಪ್ರತೀಕಾರವಾಗಿದೆ ಎಂಬ ಅನುಮಾನವನ್ನೂ ಇರಾನ್ ವ್ಯಕ್ತಪಡಿಸಿದೆ.

ಇರಾನ್ ಹಾಗೂ ಇಸ್ರೇಲ್ ನಡುವಿನ ಜಗಳ ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದಲೂ ಎರಡೂ ರಾಷ್ಟ್ರಗಳ ಮಧ್ಯೆ ತಿಕ್ಕಾಟ ನಡೆಯುತ್ತಿದೆ. ನವೆಂಬರ್ 27ರಂದು ಇರಾನ್ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರ್‌ನಲ್ಲಿ ತೆರಳುತ್ತಿದ್ದಾಗ ಹಂತಕರು ದಾಳಿ ನಡೆಸಿದ್ದರು.

ಸೇನಾ ಪರಮಾಣು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರನ್ನ ಅಡ್ಡಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಮಾಸುವ ಮೊದಲೇ ಇರಾನ್‌ ಹಡಗುಗಳ ಮೇಲೆ ಪದೇಪದೆ ದಾಳಿ ನಡೆಯುತ್ತಿರುವುದು ಮಧ್ಯಪ್ರಾಚ್ಯ ಶಾಂತಿಗೆ ಭಂಗ ತಂದಿದೆ. ತನ್ನ ಹಡಗಿನ ಮೇಲಿನ ದಾಳಿಗೆ ಪ್ರತಿಕಾರಕ್ಕಾಗಿ ಇರಾನ್ ಕಾದು ಕುಳಿತಿದೆ.

Iran freighter ship suspiciously blasts in Red Sea

ಸೈಲೆಂಟ್ ಆಗಿದೆ ಇಸ್ರೇಲ್..!
ಮಾರ್ಚ್ ಆರಂಭದಿಂದಲೂ ಇರಾನ್ ಹಾಗೂ ಇಸ್ರೇಲ್ ನಡುವೆ ತಿಕ್ಕಾಟ ಹೆಚ್ಚಾಗಿತ್ತು. ಪರಸ್ಪರ ಹಡಗುಗಳ ಮೇಲೆ ದಾಳಿ ನಡೆಸುತ್ತಿವೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಇದೀಗ ಇರಾನ್‌ನ ಸರಕು ಸಾಗಾಣಿಕೆ ಹಡಗಿನ ಮೇಲೆ ದಾಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಆರೋಪಗಳಿಗೆ ಇಸ್ರೇಲ್ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಅಮೆರಿಕ ಕೂಡ ಇರಾನ್ ಹಡಗಿನ ಮೇಲಿನ ದಾಳಿಗೆ ಪ್ರತಿಕ್ರಿಯಿಸಿಲ್ಲ.

ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್
ಕೆಲ ತಿಂಗಳ ಹಿಂದೆ ಇರಾನ್ ಮೂಲದ ಹ್ಯಾಕರ್ಸ್ ಗ್ಯಾಂಗ್ ಇಸ್ರೇಲ್‌ನ ಅಣುಸ್ಥಾವರದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತು. ಆದರೆ ದಾಳಿಯಲ್ಲಿ ವಿಫಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಇಸ್ರೇಲ್‌ ಕೌಂಟರ್ ಕೊಟ್ಟಿತ್ತು. ಆದರೆ ಇಸ್ರೇಲ್‌ ಹ್ಯಾಕರ್ಸ್ ನಡೆಸಿದ ದಾಳಿ ಫಲ ನೀಡಿ, ಇರಾನ್‌ನ ಪರಮಾಣು ಸ್ಥಾವರಗಳಲ್ಲಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡು ಇರಾನ್ ಬೆಚ್ಚಿಬಿದ್ದಿತ್ತು. ಈ ದಾಳಿಯನ್ನು ನಡೆಸಿದ್ದು ಇಸ್ರೇಲ್ ಎಂಬ ಆರೋಪವನ್ನ ಅಂದಿನಿಂದಲೂ ಇರಾನ್ ಮಾಡುತ್ತಾ ಬಂದಿದೆ. ಆದರೆ ಈವರೆಗೂ ಅದಕ್ಕೆ ಸಾಕ್ಷಿಗಳು ಸಿಕ್ಕಿಲ್ಲ.

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳ ಕೊಲೆ
ಅಂದಹಾಗೆ ದಶಕದ ಹಿಂದೆ ಇರಾನ್‌ ಪರಮಾಣು ಯೋಜನೆ ಪ್ರಾರಂಭಿಸಿದ ನಂತರ ಫಖ್ರಿಜಾದೆಹ್‌ ರೀತಿ ಹಲವು ವಿಜ್ಞಾನಿಗಳನ್ನ ಕೊಂದು ಹಾಕಲಾಗಿದೆ. ಎಲ್ಲಾ ಕೊಲೆಗಳ ಹಿಂದೆ ಇಸ್ರೇಲ್‌ ಕೈವಾಡವಿದೆ ಎಂಬುದು ಇರಾನ್‌ ಆರೋಪ. ಒಂದು ಕಡೆ ಅರಬ್ ರಾಷ್ಟ್ರಗಳು ಒಂದೊಂದಾಗಿ ಇಸ್ರೇಲ್ ಜೊತೆಗಿನ ದ್ವೇಷ ಮರೆತು ಸ್ನೇಹ ಸಾಧಿಸುತ್ತಿವೆ. ಆದರೆ ಇರಾನ್ ಮಾತ್ರ ಇಸ್ರೇಲ್ ಜೊತೆಗೆ ಸ್ನೇಹ ಮಾಡಲು ಬಿಲ್‌ಕುಲ್ ಸಿದ್ಧವಿಲ್ಲ. ಇದು ಉರಿವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ದಿನದಿಂದ ದಿನಕ್ಕೆ ಎರಡೂ ರಾಷ್ಟ್ರಗಳ ಸಂಬಂಧ ಹಳಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+