ಇಸ್ರೇಲ್ ವಿರುದ್ಧ ಸೇಡು ಗ್ಯಾರಂಟಿ ಅಂತಿದೆ ಇರಾನ್!

ಇರಾನ್ & ಇಸ್ರೇಲ್ ಮಧ್ಯೆ ಎಲ್ಲಾ ತಣ್ಣಗಾಗಿ ಹೋಯ್ತು ಅಂತಾ ಅಂದುಕೊಳ್ಳುವ ಒಳಗಾಗಿ, ಮತ್ತೊಮ್ಮೆ ದಿಢೀರ್ ಕಿಚ್ಚು ಹೊತ್ತಿಕೊಂಡಿದೆ. ಅದರಲ್ಲೂ ಹಮಾಸ್ ನಾಯಕನನ್ನು ಹತ್ಯೆ ಮಾಡಿದ ನಂತರ, ಇಸ್ರೇಲ್ & ಇರಾನ್ ಮಧ್ಯೆ ಘೋರ ಕಾಳಗ ನಡೆಯುತ್ತೆ ಎಂಬ ಆತಂಕ ಮನೆ ಮಾಡಿದೆ. ಇದೇ ಸಮಯದಲ್ಲಿ ಇರಾನ್ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಯು ಸಂಚಲನವನ್ನೇ ಸೃಷ್ಟಿ ಮಾಡಿದೆ. ಹಾಗಾದ್ರೆ ಇರಾನ್ ಯಾವಾಗ ಇಸ್ರೇಲ್ ವಿರುದ್ಧ ಯುದ್ಧ ಸಾರುತ್ತದೆ? ಇರಾನ್ ಸೇನೆಯ ಪ್ಲಾನ್ ಆದರೂ ಏನು?

ಜಗತ್ತು ನೆಮ್ಮದಿಯಾಗಿ ಇರುವುದು ಯಾರಿಗೂ ಇಷ್ಟ ಇಲ್ಲ ಅಂತಾನೇ ಕಾಣುತ್ತೆ, ಯಾಕಂದ್ರೆ ಪದೇ ಪದೇ ಯುದ್ಧದ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಈಗಾಗಲೇ ಜಗತ್ತಿನಾದ್ಯಂತ ಹಲವು ಯುದ್ಧಗಳು ನಡೆಯುತ್ತಿವೆ. ಈ ಯುದ್ಧಗಳ ಪರಿಣಾಮ, ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಜಾಗತಿಕವಾಗಿ ಮತ್ತೊಂದು ಮಹಾಯುದ್ಧ ನಡೆಯಲಿದೆ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿವೆ. ಇಂತಹ ಸಮಯದಲ್ಲೇ ಇಸ್ರೇಲ್ ವಿರುದ್ಧ ತಾನು ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಮತ್ತೊಮ್ಮೆ ಇರಾನ್ ಹೇಳಿದೆ!

Iran Foreign Minister Said This About The Israel

ಸೇಡಿಗೆ ಸೇಡು ಗ್ಯಾರಂಟಿ?

ಅಂದಹಾಗೆ ಕೆಲವು ದಿನಗಳ ಹಿಂದೆ ಇರಾನ್ ದೇಶದಲ್ಲಿ ಭೀಕರ ಘಟನೆ ಒಂದು ನಡೆದಿತ್ತು. ಆ ಘಟನೆ ನಂತರ ಇರಾನ್ ಕೊತ ಕೊತ ಕುದ್ದು ಹೋಗಿದ್ದು, ಇಸ್ರೇಲ್ ಹೆಸರು ಕೇಳಿದರೂ ಯುದ್ಧಕ್ಕೆ ಸಿದ್ಧ ಎಂದು ಗುಟುರು ಹಾಕುತ್ತಿದೆ. ಯಾಕಂದ್ರೆ ಇರಾನ್ ದೇಶದ ರಾಜಧಾನಿಯಾದ ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ಆಗಿತ್ತು, ಆದರೆ ಈ ಕೊಲೆಯ ಹಿಂದೆ ಇಸ್ರೇಲ್ ಕೈವಾಡ ಇದೆ ಎಂಬುದು ಇರಾನ್ ಆರೋಪ. ಇದೇ ಕಾರಣಕ್ಕೆ ಹಮಾಸ್‌ನ ಲೀಡರ್ ಹತ್ಯೆಗೆ ಸೇಡಿಗೆ ಸೇಡು ಗ್ಯಾರಂಟಿ ಅಂತಿದೆ ಇರಾನ್. ಈ ಬಗ್ಗೆ ಇರಾನ್‌ ವಿದೇಶಾಂಗ ಸಚಿವ ಅಬ್ಬರಿಸಿದ್ದಾರೆ.

3ನೇ ಮಹಾಯುದ್ಧಕ್ಕೆ ಸಿದ್ಧತೆ?

ಒಟ್ನಲ್ಲಿ ಮತ್ತೊಂದು ಮಹಾಯುದ್ಧ ಗ್ಯಾರಂಟಿ, ಈ ಮೂಲಕ ಮನುಷ್ಯ 1ನೇ ಮಹಾಯುದ್ಧ ಮತ್ತು 2ನೇ ಮಹಾಯುದ್ಧದಿಂದ ಪಾಠ ಕಲಿತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಹೀಗಿದ್ದಾಗ 3ನೇ ಮಹಾಯುದ್ಧಕ್ಕೆ ಆಧುನಿಕ ಮಾನವ ಸಜ್ಜಾದಂತೆ ಕಾಣುತ್ತಿದ್ದು, ಇದೇ ಮನುಷ್ಯರಿಂದ ನಡೆಯುವ ಕೊನೆಯ ಯುದ್ಧವೂ ಆಗುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಈಗ ಜಗತ್ತಿನ ಪ್ರತಿಯೊಂದು ದೇಶದ ಬಳಿಯೂ ಅತ್ಯಾಧುನಿಕ ಆಯುಧ ಅಂದ್ರೆ, ಬಾಂಬ್ & ಕ್ಷಿಪಣಿ ಲಭ್ಯ ಇವೆ. ಇದನ್ನೆಲ್ಲಾ ಬಳಸಿ ದಾಳಿ ಮಾಡಿದರೆ ಇಡೀ ಭೂಮಿಯೇ ನಾಶವಾಗಿ ಹೋಗುತ್ತೆ. ಹೀಗಾಗಿ ಅಕಸ್ಮಾತ್ 3ನೇ ಮಹಾಯುದ್ಧ ನಡೆದರೆ, ಅದೇ ಮನುಷ್ಯರ ವಿನಾಶ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+