Iran War: ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಮತ್ತೊಂದು ಮುಖಭಂಗ, ಹಿಂಗಾ ಹೇಳೋದು ಇರಾನ್?
ಅಮೆರಿಕ ಮತ್ತು ಇರಾನ್ ನಡುವೆ ಎಲ್ಲವೂ ಹಾಳಾಗಿ ಹೋಗಿದ್ದು, ಸಂಬಂಧ ಸರಿ ಮಾಡಲು ಇನ್ನೂ 100 ವರ್ಷ ಕಳೆದರೂ ಸಾಲುವುದಿಲ್ಲ ಅಂತಾ ಕಾಣುತ್ತದೆ. ಅಮೆರಿಕ ಮತ್ತು ಇರಾನ್ ಪದೇ ಪದೇ ಬಡಿದಾಡುತ್ತಾ ಇದ್ದು, ಇಸ್ರೇಲ್ ಜೊತೆಗೆ ಕೈಜೋಡಿಸಿ ಅಮೆರಿಕ ಕೂಡ ಪರೋಕ್ಷವಾಗಿ ಯುದ್ಧ ಮಾಡುತ್ತಿದೆ. ಯಾಕಂದ್ರೆ ಇರಾನ್ ಪರಮಾಣು ಬಾಂಬ್ ತಯಾರಿಸಬಾರದು ಎಂಬ ಒತ್ತಡ ಇದ್ದು, ಇಂತಹ ಸಮಯದಲ್ಲೇ ಅಮೆರಿಕ ಜೊತೆಗೆ ಇರಾನ್ ಮತ್ತೊಮ್ಮೆ ಕಿರಿಕ್ ಮಾಡಿಕೊಂಡಿದೆ.
ಜಗತ್ತಿನ ಶಕ್ತಿಶಾಲಿ ಸೇನೆ ಹೊಂದಿರುವ ಅಮೆರಿಕ ಇಡೀ ಪ್ರಪಂಚವನ್ನ ನಿಯಂತ್ರಿಸಲು ಯತ್ನಿಸುತ್ತದೆ ಎಂಬ ಆರೋಪ ಇದೆ. ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ ತನ್ನದೇ ಹಿಡಿತ ಹೊಂದಿರುವ ಅಮೆರಿಕ ಅದನ್ನು ಬಿಟ್ಟು ಕೊಡಲು ಬಿಲ್‌ಕುಲ್ ತಯಾರಿಲ್ಲ. ಇದೇ ಕಾರಣಕ್ಕೆ, ಎಂತಹ ಗಟ್ಟಿ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಲು ಅಮೆರಿಕ ಸಿದ್ಧವಾಗಿರುತ್ತದೆ. ಅದೇ ರೀತಿ ಇರಾನ್ ವಿಚಾರದಲ್ಲಿ ಕೂಡ ಭಾರಿ ಗಟ್ಟಿಯಾದ ನಿಲುವು ತೆಗೆದುಕೊಂಡಿದೆ ಅಮೆರಿಕ. ಆದರೆ ಅಮೆರಿಕದ ಮಾತಿಗೆ ಇರಾನ್ ಮಾತ್ರ ಬೆಲೆಯನ್ನೇ ಕೊಡ್ತಿಲ್ಲ, ಈಗಲೂ ಮತ್ತೊಮ್ಮೆ ಮಾತುಕತೆಗೆ ನಾವು ಬರಲ್ಲ ಅಂತಾ ಹಠ ಹಿಡಿದಿದೆ ಇರಾನ್ ದೇಶ.

ಇರಾನ್ ಜೊತೆಗೆ ಅಮೆರಿಕ ಫೈಟಿಂಗ್!
ಹೌದು, ಇರಾನ್ ಜೊತೆಗೆ ಅಮೆರಿಕ ಈಗಲೂ ತಿಕ್ಕಾಟ ಮುಂದುವರಿಸಿದೆ. ಮೊನ್ನೆ, ಮೊನ್ನೆ ಪರಮಾಣು ಸ್ಥಾವರದ ಮೇಲೆ ಬಾಂಬ್ ದಾಳಿ ಮಾಡಿ ಇರಾನ್‌ಗೆ ಆಘಾತ ನೀಡಿತ್ತು ಅಮೆರಿಕ. ನಂತರ ಇರಾನ್ ಕೂಡ ಭಾರಿ ಘೋರವಾಗಿ ದಾಳಿ ಮಾಡಿ ಇಸ್ರೇಲ್ ನೆಲದಲ್ಲಿ ದೊಡ್ಡ ಗಲಭೆ ಎಬ್ಬಿಸಿತ್ತು. ಕೊನೆಗೆ ಹಂಗೋ, ಹಿಂಗೋ ಮಾಡಿ ಯುದ್ಧ ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೆ ಫೈಟಿಂಗ್ ಜೋರಾಗಿದ್ದು, ಎರಡೂ ದೇಶಗಳ ಮಧ್ಯೆ ಈಗ ರಾಜತಾಂತ್ರಿಕ ತಿಕ್ಕಾಟ ಶುರುವಾಗಿದೆ.
ಮಾತುಕತೆಗೆ ನಾವು ಬರಲ್ಲ ಎಂದ ಇರಾನ್
ಈಗಿನ ಪರಿಸ್ಥಿತಿಯಲ್ಲಿ ಅಮೆರಿಕದ ವಿರುದ್ಧ ಇರಾನ್ ಎಷ್ಟು ರೊಚ್ಚಿಗೆದ್ದಿದೆ ಅಂದ್ರೆ, ಯಾವುದೇ ಕಾರಣಕ್ಕೂ ಅಮೆರಿಕದ ಜೊತೆಗೆ ಮಾತುಕತೆ ಮಾಡಲ್ಲ ಅಂತಿದೆ. ಪರಮಾಣು ಶಕ್ತಿ ಬಳಕೆ ವಿಚಾರದಲ್ಲಿ ಮಾತುಕತೆಯ ಬಗ್ಗೆ ಚಿಂತೆ ಮಾಡಿಲ್ಲ. ನಾವು ಯಾವುದೇ ಕಾರಣಕ್ಕೂ ಅಮೆರಿಕ ಜೊತೆಗೆ ಕೂತು ಪರಮಾಣು ವಿಚಾರದ ಬಗ್ಗೆ ಚರ್ಚಿಸಲ್ಲ ಎಂದಿದೆ ಇರಾನ್. ಈ ಮೂಲಕ ಮತ್ತೊಮ್ಮೆ ಅಮೆರಿಕ ವಿರುದ್ಧ ಇರಾನ್ ನಿರ್ಧಾರವನ್ನ ತೆಗೆದುಕೊಂಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ಇದನ್ನೇ ನೆಪ ಮಾಡಿಕೊಂಡು ಮತ್ತೊಮ್ಮೆ ಇರಾನ್ & ಇಸ್ರೇಲ್ ಯುದ್ಧ ಶುರುವಾಗದೇ ಇರಲಿ ಅಂತಿದ್ದಾರೆ ಜಗತ್ತಿನ ದೊಡ್ಡ ದೊಡ್ಡ ದೇಶಗಳ ಲೀಡರ್ಸ್.












Click it and Unblock the Notifications