ಇಸ್ರೇಲ್ ಮೇಲೆ ಸೇಡು, ಹಮಾಸ್ ಮುಖ್ಯಸ್ಥನ ಸಾವು: ರೊಚ್ಚಿಗೆದ್ದ ಇರಾನ್ ಈಗ ಮಾಡಿದ್ದೇನು?

ಇಸ್ರೇಲ್ ಈಗ ಸುತ್ತಲೂ ಶತ್ರುಗಳ ಕುಲುಮೆಯಲ್ಲಿ ಬೇಯುವ ಪರಿಸ್ಥಿತಿ ಬಂದಿದ್ದು, ಇರಾನ್ ಜೊತೆಗೆ ಕಿರಿಕ್ ಮಾಡಿಕೊಂಡು ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಅದ್ರಲ್ಲೂ ಹಮಾಸ್ ಮುಖ್ಯಸ್ಥನನ್ನ ಇಸ್ರೇಲ್ ಅಧಿಕಾರಿಗಳು ಇರಾನ್‌ಗೆ ನುಗ್ಗಿ ಕೊಲೆ ಮಾಡಿದ್ದಾರೆಂಬ ಆರೋಪ ದೊಡ್ಡ ಕಿಚ್ಚು ಹೊತ್ತಿಸಿದೆ. ಹೀಗಿದ್ದಾಗಲೇ ರೊಚ್ಚಿಗೆದ್ದ ಇರಾನ್ ಏನು ಮಾಡಿದೆ ಗೊತ್ತಾ? ಮಧ್ಯಪ್ರಾಚ್ಯ ಮತ್ತೊಂದು ಯುದ್ಧಕ್ಕೆ ಸಿದ್ಧವಾಗುತ್ತಿದೆಯಾ?

ಹಮಾಸ್ ಸಂಘಟನೆ ಮುಖ್ಯಸ್ಥ ಹಾಗೂ ಪ್ಯಾಲೆಸ್ತೀನ್ ರಾಜಕೀಯ ನಾಯಕನ ಹತ್ಯೆ ಇದೀಗ ದೊಡ್ಡ ಬೆಂಕಿ ಕಿಚ್ಚನ್ನೇ ಹೊತ್ತಿಸಿದೆ. ಯಾಕಂದ್ರೆ ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡಿರುವ ಇಸ್ರೇಲ್ ಈಗ ಮತ್ತೊಂದು ದೇಶದ ಜೊತೆಗೆ ಯುದ್ಧ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದೆ ಎಂಬ ಆರೋಪ ಕೇಳಿಬಂದಿದೆ. ಇಂಥ ಸಮಯದಲ್ಲೇ ಹಮಾಸ್ ಮುಖ್ಯಸ್ಥನ ಕೊಲೆಗೆ ಸಂಬಂಧಿಸಿದಂತೆ ಇರಾನ್ ಈಗ ಮಹತ್ವದ ಹೆಜ್ಜೆ ಇಟ್ಟಿದ್ದು ಭಯಾನಕ ನಿರ್ಧಾರ ಕೈಗೊಂಡಿದೆ. ಇದು ಮುಂದೆ ಇಸ್ರೇಲ್ ಜೊತೆಗೆ ಇರಾನ್ ಯುದ್ಧ ಸಾರುವ ಮುನ್ಸೂಚನೆ ನೀಡಿದೆ.

Iran Arrested Several Security And Military Officers After The Hamas Leader Ismail Haniyeh Death

25 ಅಧಿಕಾರಿಗಳು ಕಂಬಿ ಹಿಂದೆ!

ಇರಾನ್ ದೇಶದಲ್ಲಿ ಸಾಲು ಸಾಲು ರಾಜಕೀಯ ನಾಯಕರ ಸಾವು ಆ ದೇಶವನ್ನ ರೊಚ್ಚಿಗೆದ್ದು ಯುದ್ಧ ಮಾಡಲು ಸಿದ್ಧವಾಗುವಂತೆ ಪ್ರೇರೇಪಿಸುತ್ತಿದೆ. ಇತ್ತೀಚೆಗೆ ಹತ್ಯೆಯಾಗಿರುವ ಹಮಾಸ್‌ ನಾಯಕ ಇಸ್ಮಾಯಿಲ್‌ ಹನಿಯೆ ಅವರ ಭದ್ರತೆಯಲ್ಲಿ ಉದ್ದೇಶಪೂರ್ವಕ ಲೋಪ ಎಸಗಿರುವ & ಶತ್ರು ಪಾಳಯಕ್ಕೆ ಪರೋಕ್ಷವಾಗಿ ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ, ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು, ಸೇನಾಧಿಕಾರಿಗಳು & ಇರಾನ್ ರಾಜಧಾನಿಯ ಸೇನಾ ಅತಿಥಿ ಗೃಹದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸೇರಿದಂತೆ 25 ಜನರನ್ನು ಅರೆಸ್ಟ್ ಮಾಡ್ಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇರಾನ್ & ಇಸ್ರೇಲ್ ಯುದ್ಧ ಗ್ಯಾರಂಟಿ?

ಇಸ್ರೇಲ್ & ಹಮಾಸ್ ನಡುವೆ 10 ತಿಂಗಳಿಂದ ಭೀಕರ ಕದನ ನಡೆಯುತ್ತಿದ್ದು, ಈ ತಿಕ್ಕಾಟದಲ್ಲಿ ಗಾಜಾಪಟ್ಟಿ ನಗರ ನರಳಿ ಹೋಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಇಸ್ರೇಲ್ ಮಾತ್ರ ಸುಮ್ಮನೆ ಕೂರದೆ ಈಗ ಹಮಾಸ್ ಮುಖ್ಯಸ್ಥನನ್ನೇ ಕೊಲೆ ಮಾಡಿದೆ ಎಂಬುದು ಇರಾನ್ ಆರೋಪ. ಹಮಾಸ್ ಮುಖ್ಯಸ್ಥ ಉಳಿದುಕೊಂಡಿದ್ದ ಹೋಟೆಲ್ ರೂಮ್‌ಗೆ ನುಗ್ಗಿ ಹತ್ಯೆ ಮಾಡಲಾಗಿದ್ದು, ಹಮಾಸ್ ಮುಖ್ಯಸ್ಥನ ಅಂಗರಕ್ಷಕನನ್ನು ಕೂಡ ಹತ್ಯೆ ಮಾಡಲಾಗಿದೆ. ಇದೇ ವಿಚಾರ ದೊಡ್ಡ ಗಲಾಟೆಗೂ ಕಾರಣವಾಗಿದೆ. ಹಾಗೇ ಇಸ್ರೇಲ್ ಮೇಲೆ ನೇರವಾಗಿ ದಾಳಿ ಮಾಡುವಂತೆ ಕೂಡ ಈಗಾಗಲೇ ಇರಾನ್ ಆದೇಶ ನೀಡಿದೆ. ಹೀಗಾಗಿ ಅಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+