Iran President: ಇರಾನ್ ದೇಶಕ್ಕೆ ಹೊಸ ಅಧ್ಯಕ್ಷರ ನೇಮಕ!
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವಿನ ಸುದ್ದಿ ಸುನಾಮಿ ಸೃಷ್ಟಿ ಮಾಡಿದೆ. ಒಂದ್ಕಡೆ ಹೀಗೆ ಇರಾನ್ ಅಧ್ಯಕ್ಷರ ಸಾವು ಪಾಶ್ಚಿಮಾತ್ಯ ದೇಶಗಳಿಗೆ ಖುಷಿ ಕೊಟ್ಟಿದೆ ಎಂಬ ಆರೋಪ ಇದ್ದು, ಇನ್ನೊಂದು ಕಡೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವಿನ ಹಿಂದೆ ಇಸ್ರೇಲ್ ಕೈವಾಡವು ಇದೆ ಅನ್ನೋ ಮತ್ತೊಂದು ಗಂಭೀರ ಆರೋಪ ಇದೆ. ಹೀಗಿದ್ದಾಗಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.
ಅಜೆರ್‌ಬೈಜಾನ್ ಅರಾಸ್ ನದಿಗೆ ನಿರ್ಮಿಸಿದ ಡ್ಯಾಂ ಉದ್ಘಾಟನೆಗೆ ರೈಸಿ ಅತಿಥಿಯಾಗಿ ಹೋಗಿದ್ರು ಆದರೆ ಈ ಸಮಯದಲ್ಲಿ ಭೀಕರ ದುರಂತ ನಡೆದಿರುವುದು ಪರಿಸ್ಥಿತಿ ಆತಂಕಕ್ಕೆ ದೂಡಿದೆ. ಹಾಗೇ ಇರಾನ್ ಸೇನೆ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುತ್ತಾ ಎಂಬ ಪ್ರಶ್ನೆ ಕೂಡ ಮೂಡಿದೆ. ಈ ಬೆನ್ನಲ್ಲೇ ಇರಾನ್ ಈಗ ಇಬ್ರಾಹಿಂ ರೈಸಿ ಜಾಗಕ್ಕೆ ಹಂಗಾಮಿ ಅಧ್ಯಕ್ಷನ ಆಯ್ಕೆ ಮಾಡಿದೆ. ಹಾಗಾದ್ರೆ ಇರಾನ್ ದೇಶದ ಹಂಗಾಮಿ ಅಧ್ಯಕ್ಷ ಯಾರು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಉಪಾಧ್ಯಕ್ಷನಿಗೆ ಹಂಗಾಮಿ ಪಟ್ಟ!
ಇರಾನ್ ಈಗ ಬೆಂಕಿ ಕುಲುಮೆಯಲ್ಲಿ ಕೂತಂತೆ ಆಗಿದೆ. ಯಾಕಂದ್ರೆ ಅಧ್ಯಕ್ಷರ ಸಾವಿನಿಂದಾಗಿ ಇರಾನ್ ಒಳಗೆ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಸೇಡಿಗೆ ಸೇಡು ಅಂತಾ ಕಾಯುತ್ತಿದ್ದಾರೆ ಇರಾನ್ ನಾಯಕರು & ಇರಾನ್ ಪ್ರಜೆಗಳು. ಇಂತಹ ಪರಿಸ್ಥಿತಿಯಲ್ಲಿ ಇರಾನ್ ದೇಶಕ್ಕೆ ಈಗ, ಹಂಗಾಮಿ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ಈ ಮೂಲಕ ಹೊಸ ಅಸ್ತ್ರ ಪ್ರಯೋಗಕ್ಕೆ ಈಗ ಇರಾನ್ ಮುಂದಾದಂತೆ ಕಾಣುತ್ತಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತಪಟ್ಟಿದ್ದಕ್ಕೆ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಇರಾನ್ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇರಾನ್ ಹಂಗಾಮಿ ಅಧ್ಯಕ್ಷರ ಹೆಸರನ್ನ ಘೋಷಿಸಿದ್ದು ಮುಂದಿನ ಸಿದ್ಧತೆಗಳು ಆರಂಭವಾಗಿವೆ. ಈ ಮೂಲಕ ಇರಾನ್ ಮುಂದಿನ ಹೆಜ್ಜೆ ಕುತೂಹಲ ಕೆರಳಿಸಿದೆ.
ಅಮೆರಿಕ ವಿರುದ್ಧ ಆಕ್ರೋಶ!
ಇರಾನ್ ಹಾಗೂ ಅಮೆರಿಕ ನಡುವೆ ಎಲ್ಲವೂ ಸರಿಯಾಗಿಲ್ಲ, ಮೊದಲಿನಿಂದ ಕೂಡ ಎರಡು ದೇಶಗಳ ನಡುವೆ ಕಿರಿಕ್ ನಡೆಯುತ್ತಲೇ ಇದೆ. ಹೀಗಿದ್ದಾಗಲೇ ಮೇ ಆರಂಭದಲ್ಲಿ ಇರಾನ್ & ಇಸ್ರೇಲ್ ನಡುವೆ ಯುದ್ಧ ನಡೆಯುತ್ತೆ ಎಂಬ ಭಯ ಆವರಿಸಿತ್ತು. ಆದರೆ ಹಾಗೆ ನಡೆಯಲಿಲ್ಲ, ಈ ವಿಚಾರದಲ್ಲಿ ಅಮೆರಿಕ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಯಾಕಂದ್ರೆ ಇರಾನ್‌ನ ಬಳಿ ನ್ಯೂಕ್ಲಿಯರ್ ವೆಪನ್ಸ್ ಇವೆ. ಅಕಸ್ಮಾತ್ ಇರಾನ್ ದಾಳಿ ಮಾಡಿದರೆ ಇಸ್ರೇಲ್ & ಅಮೆರಿಕ ಪರಮಾಣು ಸಂಕಷ್ಟಕ್ಕೆ ಸಿಲುಕುವ ಅಪಾಯ ಇತ್ತು. ಇಷ್ಟೆಲ್ಲದರ ನಡುವೆ ಕೂಡ ಇರಾನ್‌ನ ಅಧ್ಯಕ್ಷ ಮೃತಪಟ್ಟಿರುವುದು ಭಾರಿ ಆತಂಕ ಸೃಷ್ಟಿ ಮಾಡಿದೆ.












Click it and Unblock the Notifications