Iran War: ಅಮೆರಿಕದ ದಾಳಿಯಲ್ಲಿ ಪರಮಾಣು ಸ್ಥಾವರಕ್ಕೆ ಹಾನಿ ಆಗಿರುವುದನ್ನು ಒಪ್ಪಿಕೊಂಡ ಇರಾನ್!
ಅಮೆರಿಕ ಮತ್ತು ಇರಾನ್ ನಡುವೆ ಇರುವ ದ್ವೇಷ ಮತ್ತಷ್ಟು ಹೆಚ್ಚಾಗಿದೆ, ಯಾಕಂದ್ರೆ ಇಸ್ರೇಲ್ ಜೊತೆಯಲ್ಲಿ ಯುದ್ಧ ಮಾಡುತ್ತಿದ್ದ ಇರಾನ್ ವಿರುದ್ಧ ಅಮೆರಿಕ ನೇರವಾಗಿ ದಾಳಿ ಮಾಡಿ ತಿಕ್ಕಾಟ ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ಯುದ್ಧ ನಿಂತಿದ್ದರೂ ಅಸಮಾಧಾನದ ಹೊಗೆ ಹಾಗೇ ಇದೆ. ಅದರಲ್ಲೂ ಅಮೆರಿಕ ವಿರೋಧಿ ಹೋರಾಟ ಇನ್ನಷ್ಟು ಹೆಚ್ಚಾಗುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಬೆಂಕಿಯ ಕಿಡಿ ಹೊತ್ತಿದೆ. ಇಂತಹ ಸಮಯದಲ್ಲಿ ಇರಾನ್ ಮಹತ್ವದ ಹೇಳಿಕೆ ನೀಡಿದ್ದು, ಅಮೆರಿಕ ದಾಳಿ ಬಗ್ಗೆ ಮಾತನಾಡಿದೆ!
ಹೌದು, ಅಮೆರಿಕ & ಇರಾನ್ ನಡುವೆ ದ್ವೇಷ ಶುರುವಾಗಿ ಹಲವು ದಶಕ ಕಳೆದು ಹೋಗಿದೆ. ಆದರೆ ಈ ದ್ವೇಷ ಕಡಿಮೆ ಆಗುವ ಬದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗಿತ್ತಿದೆ ಎಂಬ ಆರೋಪದ ನಡುವೆ ಇರಾನ್ ವಿರುದ್ಧ ಅಮೆರಿಕ ಘೋರ ದಾಳಿ ಮಾಡಿತ್ತು. ಅದರಲ್ಲೂ ಇರಾನ್ ಪರಮಾಣು ಬಾಂಬ್ ಪರೀಕ್ಷೆ ಮಾಡಲು ಮುಂದಾಗಿದೆ ಅನ್ನೋ ಸುದ್ದಿ ಅಮೆರಿಕದ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಇಷ್ಟೆಲ್ಲದರ ನಡುವೆ ಭಾರಿ, ಭರ್ಜರಿ ದಾಳಿ ನಡೆಸಿ ಇರಾನ್ ಪರಮಾಣು ಸ್ಥಾವರಗಳನ್ನು ಬ್ಲಾಸ್ಟ್ ಮಾಡಲು ಅಮೆರಿಕ ಪ್ರಯತ್ನಿಸಿತ್ತು. ಆದರೆ ಇದು ಸಕ್ಸಸ್ ಆಗಿಲ್ಲ, ಹೀಗಿದ್ದಾಗಲೇ ಇರಾನ್ ಕೂಡ ಈ ಬಗ್ಗೆ ಸ್ಫೋಟಕ ಮಾಹಿತಿ ನೀಡಿದೆ.

ದೊಡ್ಡ ಹಾನಿ ಆಗಿರುವುದು ನಿಜ!
ಅಮೆರಿಕ ಸೇನೆ ಅತ್ಯಾಧುನಿಕ ಬಾಂಬರ್ ಫೈಟರ್ ಜೆಟ್ ಬಳಕೆ ಮಾಡಿ ಇರಾನ್ ವಿರುದ್ಧ ದಾಳಿ ಮಾಡಿ, ಭಯದ ವಾತಾವರಣ ಸೃಷ್ಟಿ ಮಾಡಿತ್ತು. ಅದರಲ್ಲೂ ಪರಮಾಣು ಸ್ಥಾವರದ ಮೇಲೆ ಈ ರೀತಿ ಅಟ್ಯಾಕ್ ಆಗಿದ್ದು ನೋಡಿ ಇಡೀ ಜಗತ್ತು ಹೆದರುವ ವಾತಾವರಣ ಕೂಡ ನಿರ್ಮಾಣ ಆಗಿತ್ತು. ಇಷ್ಟೆಲ್ಲದರ ನಡುವೆ ಈಗ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಅಮೆರಿಕದ ದಾಳಿ ಬಗ್ಗೆ ಮಾತನಾಡಿ, ಅಟ್ಯಾಕ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇರಾನ್ ನೆಲದಲ್ಲಿ ಈಗಿನ ಪರಿಸ್ಥಿತಿ ಹೇಗಿದೆ?
ಅಂದಹಾಗೆ ಇಸ್ಮಾಯಿಲ್ ಬಘೈ ನೀಡಿರುವ ಮಾಹಿತಿ ಪ್ರಕಾರ, ಇರಾನ್ ದೇಶದ ಪರಮಾಣು ಸ್ಥಾವರಗಳು ಅಮೆರಿಕದ ಭೀಕರ ದಾಳಿ ನಂತರ ಘೋರವಾಗಿ ಹಾನಿಗೀಡಾಗಿವೆ ಎಂದಿದ್ದಾರೆ. ಈ ಬಗ್ಗೆ ಇಸ್ಮಾಯಿಲ್ ಬಘೈ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದು, ಬಿ -2 ಬಾಂಬರ್ ಜೆಟ್ ದಾಳಿ ನಂತರ ಇರಾನ್ ದೇಶದ ಪರಮಾಣು ಸ್ಥಾವರಗಳು ದೊಡ್ಡ ಹಾನಿ ಅನುಭವಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರ ಈಗ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಆದರೆ ಮತ್ತೊಂದು ಕಡೆ ಇರಾನ್ ತನ್ನ ಪರಮಾಣು ಬಾಂಬ್ ತಯಾರಿಸುವ ಯೋಜನೆ ಕೈಬಿಟ್ಟಿಲ್ಲ ಅಂತಾ ಕೂಡ ಹೇಳಲಾಗುತ್ತಿದೆ.












Click it and Unblock the Notifications