ಮೋದಿಗೆ ವಿದೇಶಿ ಗಣ್ಯರ ಶುಭಾಶಯಗಳ ಮಹಾಪೂರ

Recommended Video

      ನರೇಂದ್ರ ಮೋದಿ ಗೆಲುವಿಗೆ ವಿದೇಶಿ ಗಣ್ಯರ ಶುಭಾಶಯಗಳ ಸುರಿಮಳೆ | Oneindia Kannada

      ನವದೆಹಲಿ, ಮೇ 24: ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಗೆಲುವಿಗೆ ವಿದೇಶಿ ಗಣ್ಯರು ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ.

      ಮೋದಿ ಮತ್ತೆ ಪ್ರಧಾನಿಯಾಗುವುದರಿಂದ ಭಾರತ ಹಾಗೂ ಅವರವರ ದೇಶದ ಮಧ್ಯೆ ಉತ್ತಮ ಬಾಂಧವ್ಯ ಮುಂದುವರೆಯಲಿದೆ. ಭಾರತದ ಜನತೆ ಸರಿಯಾದ ವ್ಯಕ್ತಿಯನ್ನೇ ಪುನಃ ಆಯ್ಕೆ ಮಾಡಿದೆ ಎಂದು ಹೇಳಿ ಶುಭ ಹಾರೈಸಿದ್ದಾರೆ.

      ರವಾಂಡಾ ಅಧ್ಯಕ್ಷ ಪೌಲ್, ರಷ್ಯಾದ ಅಧ್ಯಕ್ಷ ಪುಟಿನ್, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ , ಇಸ್ರೇಲ್ ಪ್ರಧಾನಿ ಬೆಂಜಮಿನ್, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ,ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಸೇರಿದಂತೆ ಇತರೆ ವಿಶ್ವ ನಾಯಕರು ಶುಭಾಶಯ ತಿಳಿಸಿದ್ದಾರೆ.

      ರವಾಂಡಾ ಅಧ್ಯಕ್ಷರಿಂದ ಮೋದಿ ಗೆಲುವಿಗೆ ಶುಭಾಶಯ

      ಭಾರತ ಜನರ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿ ಪುನಃ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿಗೆ ಶುಭಾಶಯ ಎಂದು ಟ್ವೀಟ್ ಮೂಲಕ ರವಾಂಡಾ ಅಧ್ಯಕ್ಷ ಪೌಲ್ ಕಗಮೇ ಶುಭಾಶಯ ತಿಳಿಸಿದ್ದಾರೆ. ನಿಮಗೆ ಹಾಗೂ ನಿಮ್ಮ ದೇಶಕ್ಕೆ ಒಳ್ಳೆಯದಾಗಲಿ ಎಂದಿರುವ ಅವರು ಮೋದಿ ಮತ್ತೆ ಪ್ರಧಾನಿಯಾಗುವುದರಿಂದ ರವಾಂಡಾ ಹಾಗೂ ಭಾರತದ ನಡುವೆ ಉತ್ತಮ ಬಾಂಧವ್ಯ ಮುಂದುವರೆಯಲಿದೆ ಎನ್ನುವ ವಿಶ್ವಾಸ ನನಗಿದೆ ಎಂದಿದ್ದಾರೆ.

      ರಷ್ಯಾದ ಅಧ್ಯಕ್ಷ ಪುಟಿನ್ ಅವರಿಂದ ಮೋದಿಗೆ ಶುಭ ಹಾರೈಕೆ

      ಭಾರತ ರಷ್ಯಾ ನಡುವಿನ ಶತಮಾನಗಳಷ್ಟು ಹಳೆಯದಾದ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.

      ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಮೋದಿಗೆ ಶುಭ ಸಂದೇಶ

      ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಜಯ ಗಳಿಸಿರುವುದಕ್ಕೆ ಅಭಿನಂದನೆ, ದಕ್ಷಿಣ ಏಷ್ಯಾದಲ್ಲಿ ಅಭಿವೃದ್ಧಿ ಹಾಗೂ ಶಾಂತಿ ಸ್ಥಾಪನೆಗಾಗಿ ಪ್ರಧಾನಿ ಮೋದಿಯವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

      Array

      ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಿಂದ ಶುಭಾಶಯ

      ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಮೊಳಗಿಸಿರುವ ಆತ್ಮೀಯ ಮಿತ್ರನಿಗೆ ಹುತ್ಪೂರ್ವಕ ಅಭಿನಂದನೆಗಳು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+