ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಮುಜುಗರ ಉಂಟುಮಾಡಿದ ಭಾರತ

ಹೇಗ್, ಫೆಬ್ರವರಿ 18: ಭಯೋತ್ಪಾದನೆಗೆ ಪ್ರಚೋದನೆ ನೀಡುವ ಜೊತೆಯಲ್ಲಿ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹವಣಿಸುತ್ತಿರುವ ಪಾಕಿಸ್ತಾನಕ್ಕೆ ಸೋಮವಾರ ನೆದರ್ಲೆಂಡ್‌ನ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತೀವ್ರ ಮುಜುಗರವಾಗಿದೆ.

ಕುಲಭೂಷಣ್ ಜಾಧವ್ ಅವರಿಗೆ ಗಲ್ಲುಶಿಕ್ಷೆ ವಿಧಿಸಿದ್ದ ಪಾಕಿಸ್ತಾನದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ದೀಪಕ್ ಮಿಟ್ಟಲ್ ಪಾಕಿಸ್ತಾನದ ಎಜಿ ಅನ್ವರ್ ಮನ್ಸೂರ್ ಖಾನ್ ಅವರ ಕೈಕುಲುಕಲು ನಿರಾಕರಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಪರಾಕಿ ನೀಡಿದ್ದಾರೆ.

International Court of Justice deepak mittal embarassed pakistan AG anwar Mansoor Khan

ವಿಚಾರಣೆಗೂ ಮುನ್ನ ನ್ಯಾಯಾಲಯಕ್ಕೆ ಆಗಮಿಸಿದ್ದ ದೀಪಕ್ ಮಿಟ್ಟಲ್ ಮತ್ತು ಮನ್ಸೂರ್ ಖಾನ್ ಮುಖಾಮುಖಿಯಾಗಿದ್ದರು. ಆಗ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ವೇಳೆ ಮನ್ಸೂರ್ ಖಾನ್, ಹಸ್ತಲಾಘವ ನೀಡಲು ಕೈಚಾಚಿದ್ದರು. ಆದರೆ, ದೀಪಕ್ ಮಿಟ್ಟಲ್ ಪ್ರತಿಯಾಗಿ ಕೈಲುಕದೆ ಎರಡೂ ಕೈಗಳನ್ನು ಜೋಡಿಸಿ 'ನಮಸ್ತೆ' ಎಂದಿದ್ದಾರೆ.

ಅಂತಾರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಪಾಕಿಸ್ತಾನದ ಪ್ರತಿನಿಧಿಗೆ ಕೈಕುಲುಕದೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ದೀಪಕ್ ಮಿಟ್ಟಲ್ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+