ಕಬ್ಬು ಮತ್ತು ಮೆಕ್ಕೆಜೋಳದ ತ್ಯಾಜ್ಯದಿಂದ ಜೈವಿಕ ಪ್ಲಾಸ್ಟಿಕ್ ಆವಿಷ್ಕರಿಸಿದ ಯುವತಿ, ಏನೆಲ್ಲಾ ಪ್ರಯೋಜನಾ?

ಕೃಷಿ ಭೂಮಿಯನ್ನು ವಿಷಪೂರಿತಗೊಳಿಸುತ್ತಿರುವ ಪ್ಲಾಸ್ಟಿಕ್ ಮಲ್ಚಿಂಗ್ ಹಾಳೆಗಳಿಗೆ ಪರ್ಯಾಯವಾಗಿ, ಜೈವಿಕವಾಗಿ ಮಣ್ಣಿನಲ್ಲಿ ಕರಗುವ ತಂತ್ರಜ್ಞಾನವನ್ನು ವಿದ್ಯಾರ್ಥಿನಿಯೊಬ್ಬರು ಆವಿಷ್ಕರಿಸಿದ್ದಾರೆ. ಇದು ಇದೀಗ ಎಲ್ಲಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದಕ್ಷಿಣ ಆಫ್ರಿಕಾದ 20ರ ಹರೆಯದ ಯುವ ಸಂಶೋಧಕಿ ಒಂಡಿನಾದಹೊ ರಸಿಲ್ವೆಲಾ, ಜೈವಿಕವಾಗಿ ಮಣ್ಣಿನಲ್ಲಿ ಕರಗುವ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದಾರೆ. ಕಬ್ಬಿನ ಸಿಪ್ಪೆ ಹಾಗೂ ಮೆಕ್ಕೆಜೋಳದ ಕಡ್ಡಿಗಳನ್ನೇ ಬಳಸಿ 'ಬಯೋಮಲ್ಚೀಸ್' ಎಂಬ ಪರಿಸರ ಸ್ನೇಹಿ ಜೈವಿಕ ಪ್ಲಾಸ್ಟಿಕ್ ಆವಿಷ್ಕಾರ ಮಾಡಿರುವ ಇವರ ಈ ಐತಿಹಾಸಿಕ ಸಾಧನೆಗೆ 'ಗ್ರೀನ್ ಯೂತ್ ಇಂದಾಬಾ 2026' ರಾಷ್ಟ್ರೀಯ ಪ್ರಶಸ್ತಿಯ ಜೊತೆಗೆ ಭಾರಿ ನಗದು ಬಹುಮಾನವೂ ಸಿಕ್ಕಿದೆ. ಜಾಗತಿಕ ಮಟ್ಟದಲ್ಲಿ ರೈತರ ಮಣ್ಣಿನ ನೈರ್ಮಲ್ಯವನ್ನು ಕಾಯುವ ಜೊತೆಗೆ ತ್ಯಾಜ್ಯಕ್ಕೆ ಮೌಲ್ಯ ತಂದುಕೊಟ್ಟಿರುವ ಈ ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆಯ ಪರಿಸರ ಸ್ನೇಹಿ ಕ್ರಾಂತಿ ಈಗ ಇಡೀ ವಿಶ್ವದ ಗಮನ ಸೆಳೆದಿದೆ.

Inspiring Story 20-Year-Old Innovator Creates Biodegradable Plastic Mulch from Farm Waste Viral

1,50,000 ರೂಪಾಯಿ ನಗದು ಬಹುಮಾನ

ಕೃಷಿ ತ್ಯಾಜ್ಯವನ್ನು ಮರುಬಳಕೆ ಮಾಡಿ ಜೈವಿಕವಾಗಿ ಕೊಳೆಯುವ ಪ್ಲಾಸ್ಟಿಕ್ ಅಭಿವೃದ್ಧಿಪಡಿಸುವ ಮೂಲಕ ದಕ್ಷಿಣ ಆಫ್ರಿಕಾದ ಯುವ ಸಂಶೋಧಕಿ ಒಂಡಿನಾದಹೊ ರಸಿಲ್ವೆಲಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. Chemical Engineering ಪದವೀಧರೆಯಾಗಿರುವ ಇವರು, ರೈತರು ಬಳಸುವ ಪ್ಲಾಸ್ಟಿಕ್ 'ಮಲ್ಚಿಂಗ್‌'ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಇದಕ್ಕಾಗಿ ಇವರಿಗೆ 'ಗ್ರೀನ್ ಯೂತ್ ಇಂದಾಬಾ 2026' ರಾಷ್ಟ್ರೀಯ ಪ್ರಶಸ್ತಿ ಹಾಗೂ 1,50,000 ರೂಪಾಯಿ (ಸುಮಾರು 1.5 ಲಕ್ಷ ದಕ್ಷಿಣ ಆಫ್ರಿಕಾದ ರಾಂಡ್) ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಏನಿದು 'ಬಯೋಮಲ್ಚೀಸ್'?

ತ್ಶ್ವೇನ್ ತಾಂತ್ರಿಕ ವಿಶ್ವವಿದ್ಯಾಲಯದ (TUT) ಸಂಶೋಧಕಿಯಾಗಿರುವ ರಸಿಲ್ವೆಲಾ, 'ಬಯೋಮಲ್ಚೀಸ್' ಎಂಬ ಹೆಸರಿನ ಜೈವಿಕ ಪ್ಲಾಸ್ಟಿಕ್ ಹಾಳೆಯನ್ನು ತಯಾರಿಸಿದ್ದಾರೆ. ಇದನ್ನು ಕಬ್ಬಿನ ಸಿಪ್ಪೆ ಮತ್ತು ಜೋಳದ ದಂಟಿನಂತಹ ಕೃಷಿ ತ್ಯಾಜ್ಯಗಳನ್ನು ಬಳಸಿ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಈ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಕೃಷಿಯಲ್ಲಿ ಕಳೆ ನಿಯಂತ್ರಿಸಲು, ಮಣ್ಣಿನ ತೇವಾಂಶ ಕಾಪಾಡಲು ಹಾಗೂ ಉಷ್ಣಾಂಶ
ಸಮತೋಲನದಲ್ಲಿಡಲು ರೈತರು ಭೂಮಿಯ ಮೇಲೆ ಪ್ಲಾಸ್ಟಿಕ್ ಹಾಳೆಗಳನ್ನು ಹೊದಿಸುವುದು ಸಾಮಾನ್ಯ. ಆದರೆ, ಸಾಂಪ್ರದಾಯಿಕ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೆ ಶೇಕಡಾವಾರು ಮೈಕ್ರೋಪ್ಲಾಸ್ಟಿಕ್ ತ್ಯಾಜ್ಯವನ್ನು ಸೃಷ್ಟಿಸಿ ಮಣ್ಣಿನ ಫಲವತ್ತತೆಯನ್ನು ಹಾಳುಮಾಡುತ್ತದೆ. ರಸಿಲ್ವೆಲಾ ಅವರ ಈ ಬಯೋಮಲ್ಚೀಸ್ ಪ್ಲಾಸ್ಟಿಕ್, ಬೆಳೆ ಮುಗಿದ ಬಳಿಕ ಮಣ್ಣಿನಲ್ಲಿ ನೈಸರ್ಗಿಕವಾಗಿಯೇ ಕರಗಿ ರಸಗೊಬ್ಬರವಾಗುತ್ತದೆ.

ಸಂಶೋಧನೆಯ ಮಹತ್ವ, ಉದ್ದೇಶ

ರಸಿಲ್ವೆಲಾ ಅವರ ಈ ಸಂಶೋಧಜನೆಯು ಕೇವಲ ಕಬ್ಬು ಮತ್ತು ಜೋಳದ ತ್ಯಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಅವರು ನಾರು ಮತ್ತು ಜೋಳದ ಕಡ್ಡಿಯನ್ನು ಬಳಸಿ ಉತ್ಪಾದಿಸುವ ಜೈವಿಕ ಪ್ಲಾಸ್ಟಿಕ್‌ಗಳ ಸಾಮರ್ಥ್ಯವನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದಾರೆ.

ಈ ವಿಧಾನವು ರೈತರು ಸುಟ್ಟುಹಾಕುವ ಅಥವಾ ಬಿಸಾಡುವ ಬೆಳೆಯ ಉಳಿಕೆಗಳನ್ನು ಉಪಯುಕ್ತ ವಸ್ತುವಾಗಿ ಪರಿವರ್ತಿಸುತ್ತದೆ. ಕೃಷಿ ತ್ಯಾಜ್ಯಕ್ಕೆ ಮೌಲ್ಯ ತಂದುಕೊಡುವುದರಿಂದ ರೈತರಿಗೆ ಹೆಚ್ಚುವರಿ ಆದಾಯದ ಮಾರ್ಗ ತೆರೆದಂತಾಗಲಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ನಿಯಂತ್ರಿಸಿ ಮಣ್ಣಿನ ಹಾಗೂ ನದಿಗಳ ಸ್ವಚ್ಛತೆಯನ್ನು ಕಾಪಾಡುತ್ತದೆ.

ಉತ್ತರ ಪಶ್ಚಿಮ ಪ್ರಾಂತ್ಯದ ಸನ್ ಸಿಟಿಯಲ್ಲಿ ನಡೆದ ಯುವ ಪರಿಸರ ಪ್ರಶಸ್ತಿ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯದ 'ಮಹಿಳಾ ಆರ್ಥಿಕ ಸಬಲೀಕರಣ ಕಾರ್ಯಕ್ರಮ'ದ (SWEEP) ಅಡಿಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಈ ಯೋಜನೆಯು ಪ್ರಸ್ತುತ ಸಂಶೋಧನೆ ಮತ್ತು ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರದಲ್ಲೇ ದೊಡ್ಡ ಮಟ್ಟದ ಕೈಗಾರಿಕಾ ಉತ್ಪಾದನೆಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ತ್ಯಾಜ್ಯವೆಂದು ಎಸೆಯುವ ಕೃಷಿ ಉಳಿಕೆಗಳನ್ನೇ ಕಚ್ಚಾವಸ್ತುವನ್ನಾಗಿ ಮಾಡಿಕೊಂಡು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿರುವ ರಸಿಲ್ವೆಲಾ ಅವರ ಸಂಶೋಧನೆ, ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ರಹಿತ ನೈಸರ್ಗಿಕ ಕೃಷಿಗೆ ಹೊಸ ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+