ಇಂಡೋನೇಷ್ಯಾದ ಲಂಬೋಕ್‌ನಲ್ಲಿ ಮತ್ತೆ ಭೂಕಂಪ
ಇಂಡೋನೇಷ್ಯಾ, ಆಗಸ್ಟ್ 7: ಇಂಡೋನೇಷ್ಯಾದ ಲಂಬೋಕ್‌ನಲ್ಲಿ ಭಾನುವಾರ ಸಂಭವಿಸಿದ್ದ ಭೂಕಂಪದಿಂದ ಜನರು ಚೇತರಿಸಿಕೊಳ್ಳುವ ಮೊದಲೇ ಮತ್ತೆ ಭೂಕಂಪ ಸಂಭವಿಸಿದೆ.
5.2 ತೀವ್ರತೆ ಭೂಕಂಪ ಸಂಭವಿಸಿದ್ದು ಒಟ್ಟು 142ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭಾನುವಾರ 6.9 ತೀವ್ರತೆ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ನೂರಾರು ಮನೆಗಳು ನೆಲಸಮವಾಗಿದೆ ಇನ್ನೂ ಸಾವಿರಾರು ಮನೆಗಳು ಕುಸಿಯುವ ಹಂತದಲ್ಲಿದೆ.
ಪ್ರವಾಸಕ್ಕೆಂದು ಬಂದಿದ್ದ ಸಾವಿರ ವಿದೇಶಿಯರನ್ನು ವಿಮಾನದ ಮೂಲ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ.
ಇಲ್ಲಿನ ಬಾಲಿ ಮತ್ತು ಲಂಬೋಕ್ ದ್ವೀಪಗಳಲ್ಲಿ 18ಕಿ.ಮೀ.ಆಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸುನಾಮಿ ಮುನ್ಸೂಚನೆಯನ್ನೂ ನೀಡಲಾಗಿದೆ. ಜುಲೈ 29 ರಂದು ಈ ಭಾಗದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಹತ್ತಕ್ಕೂ ಹೆಚ್ಚು ಜನ ಮೃತರಾಗಿದ್ದರು.

ಈಗಾಗಲೇ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನು ನೀಡಿರುವುದರಿಂದ ಸಾಗರ ಪ್ರದೇಶದಿಂದ ದೂರಕ್ಕೆ ತೆರಳುವಂತೆ ಸೂಚಿಸಲಾಗಿದೆ.
2004ರಲ್ಲಿ ಪಶ್ಚಿಮ ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಸಮುದ್ರದ ಆಳದಲ್ಲಿ ಸಂಭವಿಸಿದ 9.3 ತೀವ್ರತೆ ಭೂಕಂಪದಲ್ಲಿ ಹಿಂದೂ ಮಹಾಸಾಗರದ ಸುತ್ತಮುತ್ತಲ ದೇಶದ 2,20,000 ಮಂದಿ ಮೃತಪಟ್ಟಿದ್ದರು. ಇಂಡೋನೇಷ್ಯಾವು ಅತಿ ಹೆಚ್ಚು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುವ ದೇಶವಾಗಿದೆ. ಎರಡನೇ ಬಾರಿ ಸಂಭವಿಸಿದ ಭೂಕಂಪದಿಂದ ಅಲ್ಲಿನ ಜನತೆ ಆತಂಕ್ಕೀಡಾಗಿದ್ದಾರೆ.












Click it and Unblock the Notifications