ಚಕ್ ದೇ ಇಂಡಿಯಾ : ಭಾರತದ ವನಿತೆಯರು ಏಷ್ಯನ್ ಚಾಂಪಿಯನ್ಸ್
ಸಿಂಗಪುರ, ನವೆಂಬರ್ 05 : ಚೀನಾದ ವನಿತೆಯನ್ನು 2-1 ಅಂತರದಿಂದ ಸೋಲಿಸಿರುವ ಭಾರತದ ವನಿತೆಯರು ಮೊದಲ ಬಾರಿಗೆ ಹಾಕಿ ಏಷ್ಯನ್ ಚಾಂಪಿಯನ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಈ ಸಾಧನೆ ಮಾಡಿದ್ದಕ್ಕಾಗಿ ಎಲ್ಲೆಡೆಯಿಂದ ಅಭಿನಂದನೆಯ ಮಳೆ ಸುರಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯವರ್ಧನ್ ರಾಥೋಡ್ ಮುಂತಾದವರು ಭಾರತೀಯ ತಂಡವನ್ನು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.

60ನೇ ನಿಮಿಷದಲ್ಲಿ ದಕ್ಕಿದ ಪೆನಾಲ್ಟಿ ಕಾರ್ನರಲ್ಲಿ ಗೋಲು ಪೆಟ್ಟಿಗೆಗೆ ಬಡಿದು ಪುಟಿದುಬಂದ ಚೆಂಡನ್ನು ದೀಪಿಕಾ ಅವರು ಗೋಲನ್ನಾಗಿ ಪರಿವರ್ತಿಸಿ ಭಾರತಕ್ಕೆ ನೆನಪುಳಿಯುಂಥ ಗೆಲುವು ದಕ್ಕಿಸಿಕೊಟ್ಟರು.
Congrats to our women’s hockey team for winning the Asian Champions Trophy 2016. It is a great moment for Indian hockey. @TheHockeyIndia
— Narendra Modi (@narendramodi) November 5, 2016
ಇದಕ್ಕೂ ಮೊದಲು 13ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಕಾರ್ನರನ್ನು ದೀಪ್ ಗ್ರೇಸ್ ಎಕ್ಕಾ ಅವರು ಗೋಲನ್ನಾಗಿ ಪರಿವರ್ತಿಸಿದರು. ನಂತರ 44ನೇ ನಿಮಿಷದಲ್ಲಿ ಚೀನಾದ ಜೋಂಗ್ ಮೆಂಗ್ಲಿಂಗ್ ಅವರು ಗೋಲು ಬಾರಿ ಭಾರತದ ಸಮಕ್ಕೆ ಬಂದರು. (ಪಿಟಿಐ)












Click it and Unblock the Notifications