ಥಾಯ್ಲಂಡ್ ಪರನಾರಿ ಸಂಗ: ಪಿಗ್ಗಿಬಿದ್ದ ಭಾರತೀಯರು

Indian tourists Karthikeyan- Khader robbed in Thailand Bangkok Pattaya by woman
ಬ್ಯಾಂಕಾಕ್, ಅ.9‌: ಥಾಯ್ಲಂಡಿನ‌ ಪಟ್ಟಾಯಾ ಗಂಡು-ಹೆಣ್ಣಿನ ಸೆಕ್ಸ್ ಗೆ ಸ್ವರ್ಗಸಮವಾದ ತಾಣವೆಂದೇ ಪ್ರಸಿದ್ಧಿ ಪಡೆದಿದೆ. ಇಂತಿಪ್ಪ ಸ್ಥಳಕ್ಕೆ ಇಬ್ಬರು ಭಾರತೀಯರು ವಿಹಾರಾರ್ಥವಾಗಿ ಬಂದಿದ್ದಾಗ ಪಿಗ್ಗಿಬಿದ್ದಿದ್ದಾರೆ. ದುಡ್ಡು ಕೊಟ್ಟರೆ ಸೆಕ್ಸ್‌ ಮಾಡುವುದಕ್ಕೆ ಸಿದ್ದವೆಂದ ಥಾಯ್ ಮಹಿಳೆಯಿಂದ ಇಬ್ಬರಿಗೂ ಪಂಗನಾಮ ಬಿದ್ದಿದೆ. ಅಷ್ಟೇ ಅಲ್ಲ ಅವರಲ್ಲೊಬ್ಬರು ಇನ್ನೂ ಪತ್ತೆಯಾಗಿಲ್ಲ.

ಸ್ನೇಹಿತರಾದ ಕಾರ್ತಿಕೇಯನ್‌ ಕೃಷ್ಣನ್‌ (36) ಮತ್ತು ಖಾದರ್‌ ಬಾಷಾ (40) ಅವರು ವಿಹಾರಾರ್ಥವಾಗಿ ಸೋಮವಾರ ಪಟ್ಟಾಯಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಬೀಚ್‌ ನಲ್ಲಿ ನಡೆದು ಹೋಗುತ್ತಿದ್ದರು. ಆ ವೇಳೆ ಥಾಯ್‌ ಮಹಿಳೆಯೊಬ್ಬಳು ಅವರ ಬಳಿ ಬಂದು ಹಣಕ್ಕಾಗಿ ಸೆಕ್ಸ್‌ ವ್ಯವಹಾರವನ್ನು ಕುದುರಿಸಿದಳು. ಇವರೂ ಆಕೆಯ ಪ್ರಲೋಭೆಗೆ ಒಳಗಾದರು.

ಆಕೆ ಹೇಳಿದಂತೆ ಅಲ್ಲೇ ಸ್ವಲ್ಪ ದೂರದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಹೋಗಿ ಇವರು ಕುಳಿತುಕೊಂಡರು. ಆದರೆ ಸ್ವಲ್ಪ ಹೊತ್ತಿನಲ್ಲಿ ಕಾರಿನೆಡೆಗೆ ಇಬ್ಬರು ಬಂದು 'ನಿಮ್ಮ ಹಣ, ವಾಚು, ಮೊಬೈಲ್‌ ಎಲ್ಲ ಕೊಟ್ಟು ಬಿಡಿ' ಎಂದು ಬೆದರಿಸಿದರು.

ಬೆದರಿದ ಇಬ್ಬರೂ ತಮ್ಮ ಬಳಿ ಇದ್ದ 1,000 ಡಾಲರ್‌ ನಗದು, ಒಂದು ಮೊಬೈಲ್‌ ಫೋನ್‌, ಎರಡು ಕ್ರೆಡಿಟ್‌ ಕಾರ್ಡ್‌ ಮತ್ತು ಪಾಸ್‌ ಪೋರ್ಟ್‌ ಗಳನ್ನು ಅವರಿಗೆ ನೀಡಿದ್ದಾರೆ. ಅಷ್ಟಕ್ಕೇ ತೃಪ್ತಿಯಾಗದ ದರೋಡೆಕೋರರು ಇಬ್ಬರಿಗೂ ಮುಖಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ. ಖಾದರ್‌ ಸ್ಥಳದಿಂದ ಓಡಿ ಹೋಗಿ ಬಚಾವಾಗಿದ್ದಾರೆ. ಆದರೆ ಪೆಟ್ಟು ತಿಂದ ಕೃಷ್ಣನ್‌ ಪಟ್ಟಾಯಾ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಜತೆಗೆ, ತನ್ನ ಸ್ನೇಹಿತನನ್ನು ಹುಡುಕಿಕೊಡಿ ಎಂದು ಅಲವತ್ತುಕೊಂಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಕಣ್ಗಾವಲು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ ವಿಡಿಯೋವನ್ನು ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದಾರೆ. ಅಪರಾಧಿಗಳಿಗಾಗಿ ಹುಡುಕುತ್ತಿದ್ದಾರೆ. ಕೃಷ್ಣನ್‌ ಅವರ ಸ್ನೇಹಿತ ಖಾದರ್‌ ಕೂಡ ಇನ್ನೂ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+