ಭಾರತೀಯ ವೈದ್ಯನಿಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ

america
ವಾಷಿಂಗ್ಟನ್, ನ. 14 : ಭಾರತೀಯ ಮೂಲದ ಅಮೆರಿಕ ವೈದ್ಯ ರಾಹುಲ್ ಜಿಂದಾಲ್ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಹಮದಾಬಾದ್ ಮೂಲದ ಜಿಂದಾಲ್ ಔಟ್‌ಸ್ಟ್ಯಾಂಡಿಂಗ್ ಅಮೆರಿಕನ್ ಬೈ ಚಾಯ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ರಾಹುಲ್ ಜಿಂದಾಲ್ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಕೊಡುಗೆಯನ್ನು ಪರಿಗಣಿಸಿ ಅಂಗಾಂಶ ಕಸಿ ತಜ್ಞರಾದ ಜಿಂದಾಲ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವರ್ಜಿನಿಯಾದಲ್ಲಿ ನವೆಂಬರ್ 13ರಂದು ನಡೆದ ಸಮಾರಂಭದಲ್ಲಿ ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ ಪ್ರಾಧಿಕಾರ (ಯುಎಸ್‌ಸಿಐಎಸ್) ಜಿಂದಾಲ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದೆ.

ಅಂತಾರಾಷ್ಟ್ರೀಯ ನಾಯಕತ್ವ ಪ್ರತಿಷ್ಠಾನದಿಂದ ಕೆಲವು ದಿನಗಳ ಹಿಂದೆ ಪ್ರಶಸ್ತಿ ಪಡೆದಿರುವ ರಾಹುಲ್ ಜಿಂದಾಲ್, ವಾಲ್ಟರ್ ರೀಡ್ ನ್ಯಾಷನಲ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್‌ ನಲ್ಲಿ ಅಂಗಾಂಶ ಕಸಿ ತಜ್ಞರಾಗಿದ್ದಾರೆ. ವಲಸೆ ಬಂದಿರುವ ರಾಷ್ಟ್ರಕ್ಕೆ ಗಣನೀಯ ಕೊಡುಗೆಯನ್ನು ನೀಡಿದವರನ್ನು ಗುರುತಿಸಿ ಔಟ್‌ಸ್ಟ್ಯಾಂಡಿಂಗ್ ಅಮೆರಿಕನ್ ಬೈ ಚಾಯ್ಸ್ ಪ್ರಶಸ್ತಿ ನೀಡಲಾಗುತ್ತದೆ.

ಗುಜರಾತ್ ರಾಜ್ಯದ ಅಹಮದಾಬಾದ್‌ನ ಬಿಜೆ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದಿರುವ ಜಿಂದಾಲ್, ಬ್ರಿಟನ್‌ನಲ್ಲಿ ಶಿಕ್ಷಣ ಮುಂದುವರಿಸಿ ಎಡಿನ್‌ಬರ್ಗ್‌ನ ರಾಯಲ್ ಕಾಲೇಜಿನಿಂದ ಎಫ್‌ಆರ್‌ಸಿಎಸ್ ಪದವಿ ಗಳಿಸಿದರು. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ.

ಜಿಂದಾಲ್ ಅವರ ಸಂಶೋದನಾ ವರದಿಗಳು ಮತ್ತು ಲೇಖನಗಳನ್ನು ಅಮೆಕಾದ ನ್ಯೂರೋ ಥೆರಫಿ ಸಂಸ್ಥೆಯ ಪಠ್ಯಗಳಲ್ಲಿ ಸೇರಿಸಲಾಗಿದೆ. ವೈದ್ಯಕೀಯ ವೃತ್ತಿಯೊಂದಿಗೆ ಸಮಾಜ ಸೇವೆ ಮಾಡುತ್ತಿರುವ ಜಿಂದಾಲ್, ಉತ್ತರ ಅಮೆರಿಕದಲ್ಲಿರುವ 600 ಹಿಂದೂ ದೇಗುಲಗಳ ಬೆಂಬಲದೊಂದಿಗೆ ರಾಷ್ಟ್ರೀಯ ರಕ್ತ ಮತ್ತು ಅಸ್ಥಿ ಮಜ್ಜೆ ಸಂಗ್ರಹ ಅಭಿಯಾನದ ನಿರ್ದೇಶಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+