ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಪ್ರತಿನಿಧಿಯಾಗಿ WHO ಮಂಡಳಿಯಲ್ಲಿ ಭಾರತೀಯ ಮೂಲದ ಡಾ ವಿವೇಕ್ ಮೂರ್ತಿ ನಾಮನಿರ್ದೇಶನ

|
Google Oneindia Kannada News

ವಿಶ್ವ ಆರೋಗ್ಯ ಸಂಸ್ಥೆಯ (WHO) ಕಾರ್ಯಕಾರಿ ಮಂಡಳಿಗೆ ಯುಎಸ್ ಪ್ರತಿನಿಧಿಯಾಗಿ ಭಾರತೀಯ ಮೂಲದ ಡಾ. ವಿವೇಕ್ ಮೂರ್ತಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ನಾಮನಿರ್ದೇಶನ ಮಾಡಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಡಾ. ಮೂರ್ತಿ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ಅಮೆರಿಕ ಪ್ರತಿನಿಧಿಯಾಗಿ ನಾಮನಿರ್ದೇಶನ ಮಾಡಿದ್ದಾರೆ.

ಭಾರತದಲ್ಲಿ 2500 ಉದ್ಯೋಗಿಗಳ ನೇಮಕಕ್ಕೆ ಸಿದ್ಧವಾದ ಯುಎಸ್ ಮೂಲದ ಕಂಪನಿ ಭಾರತದಲ್ಲಿ 2500 ಉದ್ಯೋಗಿಗಳ ನೇಮಕಕ್ಕೆ ಸಿದ್ಧವಾದ ಯುಎಸ್ ಮೂಲದ ಕಂಪನಿ

ಶ್ವೇತಭವನ ಹೊರಡಿಸಿದ ಹೇಳಿಕೆಯ ಪ್ರಕಾರ, ಡಾ.ಮೂರ್ತಿ ಅವರು ಅಮೆರಿಕದ 'ಸರ್ಜನ್ ಜನರಲ್' ಜೊತೆಗೆ ಈ ಹೊಸ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಮಾರ್ಚ್ 2021ರಲ್ಲಿ ಬೈಡೆನ್ ಅಧ್ಯಕ್ಷರಾದ ನಂತರ ಯುಎಸ್ ಸೆನೆಟ್ ಅವರು ದೇಶದ 21 ನೇ 'ಸರ್ಜನ್ ಜನರಲ್' ಆಗಿ ನೇಮಕವನ್ನು ಅನುಮೋದಿಸಿದರು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅವಧಿಯಲ್ಲಿ ಅವರು 19ನೇ 'ಸರ್ಜನ್ ಜನರಲ್' ಆಗಿಯೂ ಸೇವೆ ಸಲ್ಲಿಸಿದ್ದರು.

Indian-origin Vivek Murthy is US representative on WHO executive board

6,000ಕ್ಕೂ ಹೆಚ್ಚುಆರೋಗ್ಯ ಅಧಿಕಾರಿಗಳನ್ನು ಮುನ್ನಡೆಸುತ್ತಿದ್ದಾರೆ

ಅಮೆರಿಕದಲ್ಲಿ 'ಸರ್ಜನ್ ಜನರಲ್' ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ಕೆಲಸವು ಸ್ಪಷ್ಟ, ಸ್ಥಿರ ಮತ್ತು ಸಮಾನ ಮಾರ್ಗದರ್ಶನ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ದೇಶದ ಆರೋಗ್ಯ ಸೇವೆಗಳನ್ನು ಸುಧಾರಿಸುವುದು, 21ನೇ 'ಸರ್ಜನ್ ಜನರಲ್' ಆಗಿ, ಡಾ. ಮೂರ್ತಿ ಆರೋಗ್ಯದ ತಪ್ಪು ಮಾಹಿತಿಯ ಹೆಚ್ಚುತ್ತಿರುವ ಹರಡುವಿಕೆ, ಯುವಕರಲ್ಲಿ ಮಾನಸಿಕ ಸಮಸ್ಯೆಗಳು ಸೇರಿದಂತೆ ಹಲವಾರು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ ಹಾಗೂ ವೈಸ್ ಅಡ್ಮಿರಲ್ ಆಗಿ ವೈಟ್ ಹೌಸ್ ಹೇಳಿಕೆಯಲ್ಲಿ ತಿಳಿಸಿದೆ. ಯುಎಸ್‌ ಪಬ್ಲಿಕ್ ಹೆಲ್ತ್ ಸರ್ವೀಸ್ ಕಮಿಷನ್ಡ್ ಕಾರ್ಪ್ಸ್‌ನ ಡಾ. ಮೂರ್ತಿ 6,000 ಕ್ಕೂ ಹೆಚ್ಚು ಸಾರ್ವಜನಿಕ ಆರೋಗ್ಯ ಅಧಿಕಾರಿಗಳನ್ನು ಮುನ್ನಡೆಸುತ್ತಿದ್ದಾರೆ. ಈ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಅತ್ಯಂತ ಅನನುಕೂಲಕರ ಜನಸಂಖ್ಯೆಗಾಗಿ ಕೆಲಸ ಮಾಡುತ್ತಿದ್ದಾರೆ.

Indian-origin Vivek Murthy is US representative on WHO executive board

ವಿವೇಕ್ ಮೂರ್ತಿ ಅವರು ಆಲಿಸ್ ಚೆನ್ ವಿವಾಹವಾಗಿದ್ದಾರೆ

"ಭಾರತೀಯ ಮೂಲದ ಮೊದಲ 'ಸರ್ಜನ್ ಜನರಲ್' ಡಾ. ಮೂರ್ತಿ ಅವರು ಮಿಯಾಮಿಯಲ್ಲಿ ಬೆಳೆದರು ಮತ್ತು ಹಾರ್ವರ್ಡ್ ಯೇಲ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಹೆಸರಾಂತ ವೈದ್ಯ, ಸಂಶೋಧನಾ ವಿಜ್ಞಾನಿ, ವಾಣಿಜ್ಯೋದ್ಯಮಿ ಮತ್ತು ಲೇಖಕರಾದ ಮೂರ್ತಿ ಅವರು ತಮ್ಮ ಪತ್ನಿ ಡಾ. ಆಲಿಸ್ ಚೆನ್ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ವಾಷಿಂಗ್ಟನ್ ಡಿಸಿಯಲ್ಲಿ ವಾಸಿಸುತ್ತಿದ್ದಾರೆ.

English summary
Indian-origin Vivek Murthy is US representative on WHO executive board Here more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X