Video Viral: ಕಟ್ಟಡದ ಮೇಲೆ ನೇತಾಡುತ್ತಿದ್ದ ಮಗು ರಕ್ಷಣೆ, ಕ್ಷಣಾರ್ಧದಲ್ಲಿ ಹಿರೋ ಆದ ಭಾರತೀಯ ವ್ಯಕ್ತಿ
ಮಹಡಿ ಮೇಲಿನಿಂದ ಬೀಳುತ್ತಿದ್ದ ಮಗುವಿನ ಜೀವ ರಕ್ಷಿಸುವ ಮೂಲಕ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತೋರಿದ ಸಮಯ ಪ್ರಜ್ಞೆ, ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಇವರಾಗಿದ್ದು, ಮೂರು ವರ್ಷದ ಮಗುವಿನ ಪ್ರಾಣ ಉಳಿಸಿ ಜಾಗತಿಕವಾಗಿ ಗಮನ ಸೆಳೆದಿದ್ದಾರೆ. ಮಗು ಕಾಪಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲ ಮಹಡಿಯ ಮೇಲೆ ಆಟವಾಡುತ್ತಿದ್ದ ಮಗು ಕಿಟಕಿಯಿಂದ ಕೆಳಗೆ ಬೀಳುತ್ತಿದೆ. ಆದರೆ ಸಂಪೂರ್ಣವಾಗಿ ಬೀಳದೇ ಗೋಡೆ ಹಿಡಿದು ನೇತಾಡುತಿತ್ತು. ಈ ವೇಳೆ ಈ ವ್ಯಕ್ತಿ ಅತ್ಯಂತ ಚಾಣಾಕ್ಷತನದಿಂದ ಮಗುವನ್ನು ಹಿಡಿದುಕೊಂಡು ಸಂಭವನೀಯ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಈ ರೋಮಾಂಚನಕಾರಿ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ನೋಡಿದ ನೆಟ್ಟಿಗರು ಪ್ರಶಂಸೆ ವ್ಯಕ್ತವಾಗಿದೆ.

ಪೊಲೀಸರಿಗೂ ಮೊದ್ಲೆ ಕ್ಷಣಾರ್ಧದಲ್ಲಿ ಕಟ್ಟಡ ಏರಿದ ವ್ಯಕ್ತಿ
ಭಾರತೀಯ ಮೂಲದ ಐಟಿ ಉದ್ಯೋಗಿ ಆಲ್ಬರ್ಟ್ ಶ್ರೀಧರ್ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ಲಂಡನ್‌ನ ಹ್ಯಾರೋ ಪ್ರದೇಶದ ರಸ್ತೆಯಲ್ಲಿ ಎಂದಿನಂತೆ ಅವರು ನಡೆದು ಹೋಗುತ್ತಿದ್ದರು. ಈ ವೇಳೆ ಮೊದಲ ಮಹಡಿಯ ಮನೆ ಮೇಲೆ ಕಿಟಕಿಯ ಅಂಚಿನಲ್ಲಿ ಪುಟ್ಟ ಮಗುವೊಂದು ಅಪಾಯಕಾರಿ ರೀತಿಯಲ್ಲಿ ನೇತಾಡುವುದನ್ನು ಗಮನಿಸಿದರು. ಮಗು ಯಾವುದೇ ಕ್ಷಣದಲ್ಲಾದರೂ ಕೆಳಗೆ ಬೀಳುವುದಿತ್ತು. ಇದನ್ನು ಅರಿತ ಶ್ರೀಧರ್ ವಾರು ಕ್ಷಣಾರ್ಧದಲ್ಲಿ ಕಟ್ಟಡ ಏರಿ ಕಿಟಕಿ ಪಕ್ಕ ನಿಂತರು.
ಶ್ರೀಧರ್ ಸ್ಥಳಕ್ಕೆ ತಲುಪಿದ ಕೆಲವೇ ಕ್ಷಣಗಳಲ್ಲಿ ಆ ಮಗು ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದೆ. ಈ ವೇಳೆ ಕಿಂಚಿತ್ತೂ ಭಯಪಡದೆ ಬೀಳುತ್ತಿದ್ದ ಮಗುವನ್ನು ತಮ್ಮ ಕೈಗಳಲ್ಲಿ ಯಶಸ್ವಿಯಾಗಿ ಹಿಡಿದುಕೊಂಡರು. ಈ ಘಟನೆಯಿಂದಾಗಿ ಮಗುವಿಗೆ ಯಾವುದೇ ಗಂಭೀರ ಪೆಟ್ಟಾಗಿಲ್ಲ. ಅವರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಮಗು ಜೀವಕ್ಕೆ ಹಾನಿ ಯಾಗಿಲ್ಲ. ಪೊಲೀಸರೇ ಕಟ್ಟಡದ ಮೇಲೆ ಏರಲು ಕಷ್ಟಪಡುತ್ತಿದ್ದಾಗ ಈ ವ್ಯಕ್ತಿ ಕ್ಷಣಾರ್ಧದಲ್ಲಿ ಹೀಗೆ ಏರಿದ್ದು ಅಲ್ಲಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿತು. ಈ ವಿಡಿಯೋ ನೋಡಿದ ಅನೇಕರು ಮಗುವಿಗೆ ಹೊಸ ಜೀವನ ನೀಡಿದ್ದಾರೆ ಎಂದು ಶ್ರೀಧರ್ ಕಾರ್ಯ ಮೆಚ್ಚಿಕೊಂಡಿದ್ದಾರೆ.
ಸೂಪರ್ ಕ್ಯಾಚ್ ಎಂದ ನೆಟ್ಟಿಗರು
ಮಗುವನ್ನು ರಕ್ಷಿಸಿದ ಕಾರ್ಯಾಚರಣೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಆ ವಿಡಿಯೋ ಹರಿದಾಡುತ್ತಿದೆ. ಸ್ವತಃ ಆಲ್ಬರ್ಟ್ ಶ್ರೀಧರ್ ಸಂತಸ ಹಂಚಿಕೊಂಡಿದ್ದಾರೆ. ತಾವು ಭಾರತದಲ್ಲಿ ಕಳೆದ ಬಾಲ್ಯದ ದಿನಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡುತ್ತಿದ್ದೆವು. ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಚುರುಕಾಗಿ ಕ್ಯಾಚ್ ಹಿಡಿಯಲು ರೂಢಿಸಿಕೊಂಡ ಕೌಶಲ್ಯಗಳು ಈ ತುರ್ತು ಪರಿಸ್ಥಿತಿಯಲ್ಲಿ ಮಗುವಿನ ಜೀವ ರಕ್ಷಿಸಲು ಸಹಾಯವಾಗಿದೆ ಎಂದು ತಿಳಿಸಿದ್ದಾರೆ.
Indian-origin restaurant manager in London sprinted across rooftops and caught a 3-year-old girl as she fell from a second-floor window after dangling for nearly 9 minutes.
— India First Post (@ifpost47) June 14, 2026
While onlookers watched in horror and police struggled to reach her in time, he acted without hesitation.… pic.twitter.com/M5Ew8orHQ9
ಮೈದಾನದಲ್ಲಿ ಗಳಿಸಿದ ಕ್ರೀಡಾ ತರಬೇತಿಯು ನಿಜ ಜೀವನದ ಇಂತಹ ಸನ್ನಿವೇಶದಲ್ಲಿ ನೆರವಾಗಬಹುದು ಎಂದು ತಾವು ಎಂದಿಗೂ ಊಹಿಸಿರಲಿಲ್ಲ ಎಂದು ಶ್ರೀಧರ್ ಹೇಳಿಕೊಂಡಿದ್ದಾರೆ. ಅದೇನೆ ಇರಲಿ ಕಟ್ಟಡದಿಂದ ಬೀಳುತ್ತಿದ್ದ ಮಗುವನ್ನು ಸುರಕ್ಷಿತವಾಗಿ ಹಿಡಿದುಕೊಂಡಾಗ ತಮಗಾದ ತೃಪ್ತಿ ಮತ್ತು ನಿರಾಳತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನೂ ಮಗುವಿನ ಪೋಷಕರು ಶ್ರೀಧರ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಕ್ರೀಡೆಯು ಕೇವಲ ದೈಹಿಕ ಆರೋಗ್ಯ ಕಾಯ್ದುಕೊಳ್ಳುವುದಷ್ಟೇ ಅಲ್ಲದೆ, ಕಷ್ಟದ ಸಮಯದಲ್ಲಿ ಹೇಗೆ ನೆರವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಕೊಂಡಾಡಿದ್ದಾರೆ.













Click it and Unblock the Notifications