ಎರಡನೇ ಬಾರಿಗೆ ಐರ್ಲೆಂಡ್ ಪ್ರಧಾನಿಯಾಗಲಿದ್ದಾರೆ ಭಾರತ ಮೂಲದ ಲಿಯೋ ವರದ್ಕರ್
ಡಬ್ಲಿನ್ (ಐರ್ಲೆಂಡ್), ಡಿಸೆಂಬರ್ 16: ಈ ವಾರಾಂತ್ಯದಲ್ಲಿ ಲಿಯೋ ವರದ್ಕರ್ ಅವರು ಐರ್ಲೆಂಡ್‌ನ ಪ್ರಧಾನ ಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮೂರು ಪಕ್ಷಗಳ ಒಕ್ಕೂಟದ ಆಡಳಿತವಿರುವ ಐರ್ಲೆಂಡ್‌ನಲ್ಲಿ ಲಿಯೋ ಅವರಿಗೆ ಪ್ರಧಾನಿ ಪಟ್ಟ ಮತ್ತೊಮ್ಮೆ ಒದಗಿ ಬಂದಿದೆ.
ಬಹಿರಂಗವಾಗಿ ಸಲಿಂಗಿ ಎಂದು ಹೇಳಿಕೊಂಡಿರುವ ಲಿಯೋ ವರದ್ಕರ್ ಅವರು ಐರ್ಲೆಂಡ್‌ನ ಅತ್ಯಂತ ಕಿರಿಯ ನಾಯಕರಲ್ಲಿ ಒಬ್ಬರು.
ವರದ್ಕರ್ ಅವರು ಶನಿವಾರ ಉಪ ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿದರು.
43 ವರ್ಷ ವಯಸ್ಸಿನ ವರದ್ಕರ್ ಅವರ ಫೈನ್ ಗೇಲ್ ಮತ್ತು ಪ್ರೀಮಿಯರ್ ಮೈಕೆಲ್ ಮಾರ್ಟಿನ್ ಅವರ ಫಿಯಾನಾ ಫೇಲ್ ಪಾರ್ಟಿಗಳ ನಡುವಿನ ಒಪ್ಪಂದ ಪ್ರಕಾರ ವರದ್ಕರ್ ಪ್ರಧಾನಿ ಆಗಲಿದ್ದಾರೆ.

2020 ರ ಚುನಾವಣೆಗಳ ನಂತರ ಐರ್ಲೆಂಡ್‌ನ ಗ್ರೀನ್ಸ್‌ನೊಂದಿಗಿನ ಒಕ್ಕೂಟದ ಭಾಗವಾಗಿ ಅವರು ಪ್ರಧಾನಮಂತ್ರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
2017 ರಲ್ಲಿ ಫೈನ್ ಗೇಲ್ ಆಡಳಿತದ ಚುಕ್ಕಾಣಿ ಹಿಡಿದಾಗ ವರದ್ಕರ್ ಹೊಸ ಪ್ರಧಾನಿಯಾಗಿ ಆಯ್ಕೆಯಾದರು.
ಎರಡೂವರೆ ವರ್ಷಗಳ ನಂತರ ಟಾವೊಸೀಚ್ ಐರಿಶ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ಐರ್ಲೆಂಡ್‌ನ ಸಂಡೇ ಇಂಡಿಪೆಂಡೆಂಟ್‌ಗಾಗಿ ಡಿಸೆಂಬರ್‌ನಲ್ಲಿ ನಡೆಸಿದ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 43 ಪ್ರತಿಶತದಷ್ಟು ಜನರು ಮಾರ್ಟಿನ್ ಅಧಿಕಾರದಲ್ಲಿ ಉಳಿಯುವ ಪರವಾಗಿದ್ದಾರೆ. ವರದ್ಕರ್ ಪರ 34 ಪ್ರತಿಶತದಷ್ಟು ಜನರು ಮತ ಚಲಾಯಿಸಿದ್ದಾರೆ.

ಆದರೂ, ಪಕ್ಷಗಳ ಒಪ್ಪಂದದ ಪ್ರಕಾರ, ವರದ್ಕರ್‌ಗೆ ಪ್ರಧಾನಿ ಪಟ್ಟ ಒಲಿದು ಬಂದಿದೆ.
ಸಂಪ್ರದಾಯವಾದಿ ಕ್ಯಾಥೋಲಿಕ್ ಪರಂಪರೆಯ ಪ್ರಾಬಲ್ಯವಿರುವ ದೇಶದಲ್ಲಿ ವರಡ್ಕರ್ ಐರಿಶ್ ರಾಜಕೀಯದ ಉನ್ನತ ಸ್ಥಾನಕ್ಕೆ ಏರಿದ್ದು ಗಮನಾರ್ಹವಾಗಿದೆ.
ವರದ್ಕರ್ ಅವರು ಡಬ್ಲಿನ್‌ನಲ್ಲಿ ದಾದಿಯಾಗಿ ಕೆಲಸ ಮಾಡಿದ ಐರಿಶ್ ತಾಯಿಗೆ ಮತ್ತು ವೈದ್ಯರಾಗಿದ್ದ ಭಾರತೀಯ ವಲಸಿಗ ತಂದೆಗೆ ಜನಿಸಿದರು.
ಏಳನೇ ವಯಸ್ಸಿನಲ್ಲಿ, ವರದ್ಕರ್ ಅವರು ತಮ್ಮ ತಾಯಿಯ ಸ್ನೇಹಿತರಿಗೆ ಆರೋಗ್ಯ ಸಚಿವರಾಗಬೇಕೆಂದು ಹೇಳಿದ್ದರು ಎಂದು ವರದಿಯಾಗಿದೆ.
ಟ್ರಿನಿಟಿ ಕಾಲೇಜ್ ಡಬ್ಲಿನ್‌ನಿಂದ ವೈದ್ಯಕೀಯ ಪದವಿಯನ್ನು ಪಡೆದ ನಂತರ, ರಾಜಕೀಯದಲ್ಲಿ ತೊಡಗಿಸಿಕೊಂಡರು. 2007 ರಲ್ಲಿ ಡಬ್ಲಿನ್ ವೆಸ್ಟ್‌ನಲ್ಲಿರುವ ಫೈನ್ ಗೇಲ್‌ಗೆ ಆಯ್ಕೆಯಾದರು.
2015 ರಲ್ಲಿ, ಐರ್ಲೆಂಡ್‌ನಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮೊದಲು, ವರದ್ಕರ್ ಸಾರ್ವಜನಿಕವಾಗಿ ಸಲಿಂಗಕಾಮಿ ಎಂದು ಘೋಷಿಸಿಕೊಂಡಿದ್ದರು. ಅವರು ಸಂಗಾತಿಯಾಗಿರುವ ಮ್ಯಾಥ್ಯೂ ಬ್ಯಾರೆಟ್ ಹೃದ್ರೋಗ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.











Click it and Unblock the Notifications