ಐರ್ಲೆಂಡ್ ಪ್ರಧಾನಿ ಆಗಲಿರುವ ಭಾರತೀಯ ಮೂಲದ, 'ಸಲಿಂಗಿ'
ಡಬ್ಲಿನ್, ಜೂನ್ 3: ಭಾರತೀಯ ಮೂಲದ ಲಿಯೋ ವಾರಾಡ್ಕರ್ ಐರ್ಲೆಂಡ್ ನ ಪ್ರಧಾನಿಯಾಗಿ ನೇಮಕಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಹಾಗಾದಲ್ಲಿ, ಸಲಿಂಗಿಯೊಬ್ಬರು ಐರ್ಲೆಂಡ್ ನ ಪ್ರಧಾನಿಯಾದಂತಾಗುತ್ತದೆ. ಅಲ್ಲದೆ, ಕೇವಲ 38 ವರ್ಷಕ್ಕೇ ಪ್ರಧಾನಿ ಹುದ್ದೆಗೆ ಹೋಗುತ್ತಿರುವ ಅವರು, ಆ ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯೆಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.

ಲಿಯಾ ವಾರಾಡ್ಕರ್ ತಂದೆ ಅಶೋಕ್ ಎಂಬುವರು ಸುಮಾರು 47 ವರ್ಷಗಳ ಹಿಂದೆ (1970ರಲ್ಲಿ) ಐರ್ಲೆಂಡ್ ಗೆ ಹೋಗಿ ನೆಲೆಸಿದ್ದರು. ಇದೀಗ, ಅವರ ಕಿರಿಯ ಪುತ್ರ ಈಗ ಆ ದೇಶದ ಪ್ರಧಾನಿಯಾಗಿ ನೇಮಕಗೊಂಡು ಭಾರತೀಯರಿಗೆ ಹೆಮ್ಮೆ ತರುವಂಥ ಸಾಧನೆ ಮಾಡಿದ್ದಾರೆ.
ವಾರಾಡ್ಕರ್ ಅವರು 2007ರಲ್ಲಿ ಮೊದಲ ಬಾರಿಗೆ ಐರ್ಲೆಂಡ್ ಸಂಸತ್ತಿಗೆ ಚುನಾಯಿತರಾಗಿದ್ದರು. ಇದೀಗ, ಆ ದೇಶದ ಹಾಲಿ ಪ್ರಧಾನಿ ಎಂಡಾ ಕೆನ್ನಿ ಅವರ ಅಧಿಕಾರಾವಧಿಯು ಶೀಘ್ರದಲ್ಲೇ ಮುಗಿದಿದ್ದು, ಅಧಿಕಾರ ಗದ್ದುಗೆ ಹಿಡಿದಿರುವ ಫೈನ್ ಗಾಯೆಲ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ವಾರಾಡ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೀಗಾಗಿ, ಮುಂದಿನ ಕೆಲವೇ ವಾರಗಳಲ್ಲಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸದ್ಯಕ್ಕೆ ಎಂಡಾ ಕೆನ್ನಿ ಅವರ ಸರ್ಕಾರದಲ್ಲೂ ಅವರು ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.












Click it and Unblock the Notifications