ಭಾರತದ ರಕ್ಷಣಾ ಸಚಿವರು ದಿಢೀರ್ ‘ದೊಡ್ಡಣ್ಣ’ ಅಮೆರಿಕದ ನೆಲಕ್ಕೆ ಎಂಟ್ರಿ: ಕಾರಣ ಏನು?
ಭಾರತ & ಅಮೆರಿಕ ನಡುವೆ ಹಲವು ಶತಮಾನಗಳಿಂದ ಅತ್ಯುತ್ತಮ ಸ್ನೇಹ ಇದೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲಿನಿಂದ ಕೂಡ ಎರಡೂ ದೇಶಗಳ ನಡುವೆ ಅತ್ಯುತ್ತಮ ಸಂಬಂಧ ಇದ್ದು, ಇತ್ತೀಚಿನ ದಿನಗಳಲ್ಲಿ ಅದು ಮತ್ತಷ್ಟು ಗಟ್ಟಿಯಾಗುತ್ತಿದೆ. ಹೀಗಿದ್ದಾಗಲೇ ದಿಢೀರ್, ಭಾರತದ ರಕ್ಷಣಾ ಸಚಿವರು ಅಮೆರಿಕದ ನೆಲಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಅಮೆರಿಕಗೆ ಹೋಗ್ತಿರುವುದು ಏಕೆ? ಜಾಗತಿಕವಾಗಿ ಇದು ಯಾಕೆ ಅತ್ಯಂತ ದೊಡ್ಡ ಬೆಳವಣಿಗೆ? ಬನ್ನಿ ತಿಳಿಯೋಣ.
ಒಟ್ಟು 4 ದಿನ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ರಾಜನಾಥ್ ಸಿಂಗ್ ಎರಡು ದೇಶಗಳ ನಡುವೆ ಇಲ್ಲಿ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಈಗ ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆ ಇದೆ. ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಆಗಸ್ಟ್ 23 ರಂದು ಪೆಂಟಗನ್‌ಗೆ ಭೇಟಿ ನೀಡಲಿದ್ದಾರೆ. ಇದೇ ಸಮಯದಲ್ಲಿ, ಅಮೆರಿಕದ ಸೇನಾ ಕೇಂದ್ರ ಕಚೇರಿಯು ಭಾರತದ ಜೊತೆಗೆ ಸೇನಾ ಸಂಬಂಧ ವೃದ್ಧಿ ಬಗ್ಗೆ ಚರ್ಚೆ ಮಾಡಲಿದೆ. ಜೊತೆಗೆ, ಸೇನಾ ಕ್ಷೇತ್ರದಲ್ಲಿ ಮತ್ತಷ್ಟು ಸ್ನೇಹ ಗಟ್ಟಿಗೊಳಿಸಲು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಜೊತೆಗೆ ಅಮೆರಿಕದ ಹಲವು ಹಂತದ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಚರ್ಚೆ ನಡೆಸಲಿದ್ದಾರೆ.

ಅಮೆರಿಕ ಅಧಿಕಾರಿಗಳ ಜೊತೆ ಚರ್ಚೆ
ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಜೊತೆಗೆ ಮಹತ್ವದ ಸಭೆಗಳನ್ನ ನಡೆಸಲಿದ್ದಾರೆ. ಅಮೆರಿಕದ ರಾಜಧಾನಿ ವಾಷಿಂಗ್ಟನ್ ಈ ಮಹತ್ವದ ಮಾತುಕತೆಗಾಗಿ ಇದೀಗ ವೇದಿಕೆ ಒದಗಿಸಲಿದೆ. ಎಲ್ಲಕ್ಕಿಂತ ಮುಖ್ಯವಾಗಿ MQ-9B ಡ್ರೋನ್‌ಗಳನ್ನು ಖರೀದಿಸುವ ಕುರಿತಾಗಿ ಮತ್ತು ಜಂಟಿಯಾಗಿ ಯುದ್ಧ ವಾಹನಗಳನ್ನು ತಯಾರಿಸಲು ಉದ್ದೇಶಿಸಿರುವ ಯೋಜನೆ ಮತ್ತು ಭಾರತದಲ್ಲಿ ಜಿಇಎಫ್-414 ಎಂಜಿನ್‌ಗಳ ತಯಾರಿಕೆ ಬಗ್ಗೆಯೂ ಇಲ್ಲಿ ಚರ್ಚೆ ನಡೆಯಲಿದೆ.
ಯುದ್ಧಗಳ ಬಗ್ಗೆಯೂ ಮಾತುಕತೆ?
ಒಟ್ನಲ್ಲಿ ಇದಿಷ್ಟೇ ಅಲ್ಲದೆ ಇನ್ನೂ ಅನೇಕ ವಿಚಾರಗಳ ಬಗ್ಗೆ ಭಾರತ & ಅಮೆರಿಕ ನಡುವೆ, ಇದೇ ಸಮಯದಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಹೀಗಾಗಿ ಸಕಲ ಸಿದ್ಧತೆಗಳು ಕೂಡ ಸಾಗಿದ್ದು, ಜಾಗತಿಕ ಮಟ್ಟದಲ್ಲಿ ಕೂಡ ಈ ಭೇಟಿ ಗಮನ ಸೆಳೆದಿದೆ. ಮತ್ತೊಂದು ಕಡೆಯಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಹಲವು ಯುದ್ಧಗಳ ಬಗ್ಗೆಯೂ ಈ ಸಭೆಯಲ್ಲಿ ಸಾಕಷ್ಟು ಮಹತ್ವದ ಚರ್ಚೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಅಲ್ಲದೆ ಭಾರತ ಎಲ್ಲಾ ದೇಶಗಳ ಜೊತೆಗೂ ಇದೀಗ ಮಹತ್ವದ ಸಂಬಂಧ ಇಟ್ಟುಕೊಳ್ಳಲು ಮುಂದಾಗಿರುವುದು ವಿಶೇಷ.












Click it and Unblock the Notifications