ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ ಗುಂಡಿಕ್ಕಿ ಹತ್ಯೆ!
ವಾಷಿಂಗ್ಟನ್, ಏಪ್ರಿಲ್ 28 : ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಹತ್ಯೆ ನಡೆದಿದೆ. ಇಲ್ಲಿನ ವೋಟೆಲ್ ಬಳಿ ಮನೆಯೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದ ಭಾರತದ ಖಂಡು ಪಟೇಲ್ (56) ಎನ್ನುವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಪಟೇಲ್ ತಮ್ಮ ಕೆಲಸ ಮುಗಿಸಿ ವೋಟೆಲ್ ಬಳಿ ಸುತ್ತಾಡುತ್ತಿರುವ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.[ಅಮೆರಿಕದಲ್ಲಿ ಶೂಟೌಟ್: ಮತ್ತೊಬ್ಬ ಭಾರತೀಯನ ಬಲಿ]

ಕಳೆದ ಎಂಡು ತಿಂಗಳಿಂದ ಅಮೆರಿಕಾದಲ್ಲಿ ಕೆಲಸಕ್ಕೆಂದು ಸೇರಿಕೊಂಡಿದ್ದ ಪಟೇಲ್ ತನ್ನ ಎರಡು ಮಕ್ಕಳು ಹಾಗೂ ಪತ್ನಿಯೊಂದಿಗೆ ವೋಟೆಲ್ ಎಂಬಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಏಪ್ರಿಲ್ 6ರ ರಾತ್ರಿ ವಾಷಿಂಗ್ಟನ್ ಸ್ಟೇಟ್ ನ ಗ್ಯಾಸ್ ಬಂಕ್ ಒಂದರಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸತ್ತಿದ್ದ ಪಂಜಾಬ್ ಮೂಲದ ವಿಕ್ರಮ್ ಎಂಬುವನ್ನು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಇದಾದ ಬಳಿಕ ಮತ್ತೆ ಇಂತಹ ಪ್ರಕರಣ ಮರುಕಳಿಸಿದೆ.












Click it and Unblock the Notifications