ಪಾಕಿಸ್ತಾನಕ್ಕೆ ಭಾರೀ ಹಿನ್ನಡೆ ಯೂಟರ್ನ್ ತೆಗೆದುಕೊಂಡ ಮಿತ್ರ ರಾಷ್ಟ್ರ!
Turkey U-turn on Pakistan: ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದು ಎಗರಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯಾಗಿದೆ. ಭಾರತದ ವಿರುದ್ಧ ಅಣ್ವಸ್ತ್ರ (ನ್ಯೂಕ್ಲಿಯರ್ ಬಾಂಬ್) ಬಳಸುತ್ತೇವೆ ಎಂದು ಪಾಕ್ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದರೂ. ಭಾರತ ಕ್ಯಾರೇ ಎಂದಿಲ್ಲ. ಭಾರತವನ್ನು ಕೆಣಕಿ ತನ್ನ ಪರ ಉಳಿದ ದೇಶಗಳ ಬೆಂಬಲ ಪಡೆದುಕೊಳ್ಳಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದ ಪಾಕಿಸ್ತಾನಕ್ಕೆ ಭಾರೀ ದೊಡ್ಡ ಹಿನ್ನಡೆ ಆಗಿದೆ. ಭಾರತವು ಪಾಕಿಸ್ತಾನದ ಪ್ರಚೋದನಾತ್ಮಕ ಹೇಳಿಕೆಗಳಿಗೆ ರಿಯಾಕ್ಟ್ ಮಾಡದೆ ಮೌನವಾಗಿದೆ. ಆದರೆ ಪಾಕ್‌ಗೆ ಬುದ್ಧ ಕಲಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಸದ್ದಿಲ್ಲದೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಈಗಾಗಲೇ ಅಫ್ಘಾನಿಸ್ತಾನ ಸೇರಿದಂತೆ ವಿವಿಧ ರಾಷ್ಟ್ರಗಳೊಂದಿಗೆ ಮಾತನಾಡಿ ಬೆಂಬಲ ಪಡೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಪಾಕಿಸ್ತಾನವು ಚೀನಾ ಬೆಂಬಲ ಇದೆ ಎಂದು ತೋರಿಸಿಕೊಂಡು ಮೆರೆಯುವಾಗಲೇ ಪಾಕಿಸ್ತಾನವನ್ನು ಎಲ್ಲಾ ಕಡೆಯಿಂದಲೂ ಕಟ್ಟಿಹಾಕುವ ಪ್ರಯತ್ನ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿರುವ ಉಗ್ರ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ಬಿಗಡಾಯಿಸಿದೆ. ಯಾವುದೇ ಕ್ಷಣದಲ್ಲಾದರೂ ದಾಳಿ ಹಾಗೂ ಪ್ರತಿ ದಾಳಿ ನಡೆಯಬಹುದು ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಈ ರೀತಿ ಇರುವಾಗ ಟರ್ಕಿ ದೇಶವು ಪಾಕಿಸ್ತಾನದ ಬೆಂಬಲಕ್ಕೆ ಬಂದಿದೆ ಎನ್ನಲಾಗಿರುವ ವಿಡಿಯೋ ಹಾಗೂ ಪೋಟೋಗಳು ವೈರಲ್ ಆಗಿದ್ದವು. ತೀವ್ರ ಒತ್ತಡದ ನಂತರ ಇದೀಗ ಟರ್ಕಿ ಸಹ ಯೂಟರ್ನ್ ತೆಗೆದುಕೊಂಡಿದೆ. ಟರ್ಕಿ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ವಿಮಾನಗಳ ಖರೀದಿ ಹಾಗೂ ಶಸ್ತ್ರಾಸ್ತಕ್ಕೆ ಈಗಾಗಲೇ ಒಪ್ಪಂದವಾಗಿದೆ. ಆದರೆ, ಟರ್ಕಿ ದೇಶವು ಭಾರತದೊಂದಿಗೂ ಉತ್ತಮವಾದ ಸಂಬಂಧವನ್ನು ಹೊಂದಿದೆ.

ಟರ್ಕಿ ದೇಶಕ್ಕೆ ಸಂಕಷ್ಟ ಎದುರಾದಗೆಲ್ಲವೂ ಭಾರತವು ಸಹಾಯದ ಹಸ್ತಚಾಚಿದೆ. ಭೂಕಂಪ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಭಾರತವು ಟರ್ಕಿಗೆ ಬೆಂಬಲವನ್ನು ಸೂಚಿಸಿತ್ತು. ಅಪಾರ ಪ್ರಮಾಣದ ಅಗತ್ಯ ವಸ್ತು ಹಾಗೂ ಮಿಲಿಟರಿ ನೆರವನ್ನೂ ಭಾರತ ನೀಡಿತ್ತು. ಇದೀಗ ಟರ್ಕಿ ದೇಶವು ಪಾಕಿಸ್ತಾನಕ್ಕೆ ನಾವು ಶಸ್ತ್ರಾಸ್ತ್ರ ಪೂರೈಕೆ ಮಾಡಿಲ್ಲ ಅಂತ ಯೂಟರ್ನ್ ತೆಗೆದುಕೊಂಡಿದೆ. ಈ ಮೂಲಕ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆ ಎದುರಾಗಿದೆ. ಈಗ ಪಾಕ್‌ಗೆ ಚೀನಾದ ಬೆಂಬಲವನ್ನು ಹೊರತುಪಡಿಸಿ ಇನ್ನ್ಯಾವುದೇ ದೇಶವೂ ಅಧಿಕೃತವಾದ ಬೆಂಬಲವನ್ನು ನೀಡಿಲ್ಲ ಅಂತ ಹೇಳಲಾಗಿದೆ.
ಭಾರತಕ್ಕೆ ಅಮೆರಿಕ, ಅಫ್ಘಾನಿಸ್ತಾನ ದೇಶಗಳು ಬೆಂಬಲ ಸೂಚಿಸಿವೆ. ಒಂದೊಮ್ಮೆ ಕಠಿಣ ಪರಿಸ್ಥಿತಿ ಎದುರಾದರೆ ಭಾರತಕ್ಕೆ ಇನ್ನಷ್ಟು ರಾಷ್ಟ್ರಗಳು ಬೆಂಬಲ ಸೂಚಿಸುವ ಸಾಧ್ಯತೆ ಇದೆ. ಶಸ್ತ್ರಾಸ್ತ್ರಗಳಿರುವ ಟರ್ಕಿ ವಾಯುಪಡೆಯ ಸಿ -130 ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲಿ ಇಳಿಸಿದ್ದ ಫೋಟೋ ವೈರಲ್ ಆಗಿತ್ತು. ಆದರೆ ನಾವು ಸರಕು ವಿಮಾನವನ್ನು ಇಂಧನ ತುಂಬಿಸಿಕೊಳ್ಳಲಷ್ಟೇ ಅಲ್ಲಿ ನಿಲ್ಲಿಸಿದ್ದೆವು ಎಂದು ಹೇಳಿದೆ. ಆದರೆ, ಯುದ್ಧ ವಿಮಾನವೊಂದಕ್ಕೆ ಇಲ್ಲಿ ಯಾಕೆ ಇಂಧನ ತುಂಬಿಸಲಾಯಿತು ಎನ್ನುವ ಅನುಮಾನವೂ ಶುರುವಾಗಿದೆ.ಇನ್ನು ಪಾಕ್ ಹಾಗೂ ಟರ್ಕಿ ನಡುವೆ ಯುದ್ಧ ಒಪ್ಪಂದಗಳು ಆಗಿರುವುದನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications