ಭಾರತ vs ಪಾಕ್: ಆ ಒಂದು "ಶಸ್ತ್ರಾಸ್ತ್ರ" ಬಳಸಿದರೆ ಸರ್ವನಾಶ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಯಾವುದೇ ಸಂದರ್ಭದಲ್ಲಿ ಯುದ್ಧ ಎದುರಾಗಬಹುದು ಎನ್ನುವ ಸಂಕಷ್ಟದ ಪರಿಸ್ಥಿತಿ ಇದೆ. ಎರಡೂ ದೇಶಗಳ ನಡುವೆ ಇರುವ ಒಂದು ಪ್ರಮುಖ ಶಸ್ತ್ರಾಸ್ತ್ರ ಇದೀಗ ವಿಶ್ವಕ್ಕೆ ತಲೆನೋವನ್ನು ತಂದೊಡ್ಡಿದೆ. ಒಂದೊಮ್ಮೆ ಈ ದೇಶಗಳ ನಡುವೆ ಯುದ್ಧ ತೀವ್ರಗೊಂಡರೆ ಮುಂದಿನ ಪರಿಸ್ಥಿತಿ ಏನು ಎನ್ನುವುದು ಈಗ ಇರುವ ಆತಂಕ. ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಈ ಪ್ರಮುಖ ಆಯುಧ ಅಥವಾ ಶಸ್ತ್ರಾಸ್ತ್ರವಿದು. ಅದರಲ್ಲಿ ಭಾರತ ಹಾಗೂ ಪಾಕಿಸ್ತಾನವೂ ಸೇರಿರುವುದು ಈಗ ಇರುವ ಆತಂಕಕ್ಕೆ ಮುಖ್ಯ ಕಾರಣ. ಒಂದೊಮ್ಮೆ ಯುದ್ಧ ತೀವ್ರ ಸ್ವರೂಪವನ್ನು ಪಡೆದುಕೊಂಡರೆ, ಭಾರತ ಹಾಗೂ ಪಾಕ್ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಇಷ್ಟಕ್ಕೂ ಏನಿದು ಚರ್ಚೆ ಎನ್ನುವ ವಿವರ ನೋಡೋಣ..
ಭಾರತ ಹಾಗೂ ಪಾಕ್‌ನ ನಡುವೆ ಉದ್ವಿಗ್ನ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ. ಪಾಕಿಸ್ತಾನವು ಯದ್ಧೋನ್ಮಾದದಲ್ಲಿ ಮುಳುಗಿದೆ. ಆ ದೇಶದ ಜನ ಪಾಕ್ ಸರ್ಕಾರದ ವಿರುದ್ಧವಿದ್ದಾರೆ. ಪಾಕ್ ಸರ್ಕಾರಕ್ಕೆ ಯುದ್ಧದಿಂದ ಲಾಭವೇ ಜಾಸ್ತಿ ಎನ್ನುವ ಮಾತಿದೆ. ಇದಕ್ಕೆ ಮುಖ್ಯ ಕಾರಣ ಯುದ್ಧ ಅಥವಾ ಸಂಕಷ್ಟದ ಸಂದರ್ಭದಲ್ಲಿ ಜನ ಒಂದಾಗುತ್ತಾರೆ, ಸರ್ಕಾರಕ್ಕೆ ಬೆಂಬಲ ಕೊಡುತ್ತಾರೆ ತನ್ನತ್ತ ಜನರನ್ನು ಸೆಳೆದುಕೊಳ್ಳಬಹುದು ಎನ್ನುವುದು ಪಾಕಿಸ್ತಾನದ ಲೆಕ್ಕಾಚಾರವಾಗಿದೆ. ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ವಿಶ್ವಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಭಾರತ ಹಾಗೂ ಪಾಕ್ ದೇಶವು ನ್ಯೂಕ್ಲಿಯರ್ ಬಾಂಬ್ ಇರುವ ಪ್ರಮುಖ ರಾಷ್ಟ್ರಗಳು. ನಮ್ಮ ಮತ್ತು ಪಾಕ್ ಬಳಿ ನ್ಯೂಕ್ಲಿಯರ್ (ಅಣ್ವಸ್ತ್ರ / ಪರಮಾಣು) ಇವೆ. ಇದು ಭಾರತವೂ ಸೇರಿದಂತೆ ವಿಶ್ವದ 9 ರಾಷ್ಟ್ರಗಳ ಬಳಿ ಮಾತ್ರ ಇದೆ.

ಜಗತ್ತು ಈಗಾಗಲೇ ಒಮ್ಮೆ ನ್ಯೂಕ್ಲಿಯರ್ ಬಾಂಬ್‌ನ ಪರಿಣಾಮ ಹಾಗೂ ತೀವ್ರತೆಯ ಸಂಕಷ್ಟವನ್ನು ನೋಡಿದೆ. ಆ ಭಯಾನಕ ಕ್ಷಣಗಳಿಂದ ಜಪಾನ್‌ನ ಜನ ಇನ್ನೂ ಹೊರಗೆ ಬಂದಿಲ್ಲ. ಇಂದಿಗೂ ಅಲ್ಲಿನ ಜನ ನ್ಯೂಕ್ಲಿಯರ್ ಬಗ್ಗೆ ಕೇಳಿದರೆ ಬೆಚ್ಚಿ ಬೀಳುತ್ತಾರೆ. 1945ರಲ್ಲಿ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿಯ ನಗರಗಳ ಮೇಲೆ ನ್ಯೂಕ್ಲಿಯರ್ ಬಾಂಬ್ ದಾಳಿಯನ್ನು ಅಮೆರಿಕ ದೇಶವು ಮಾಡಿತ್ತು.
ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದ ಮೊದಲ ಹಾಗೂ ಏಕೈಕ ದೇಶ ಅಮೆರಿಕ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ನ್ಯೂಕ್ಲಿಯರ್ ಬಾಂಬ್ ಬಳಕೆ ಮಾಡುವ ಬೆದರಿಕೆಯನ್ನು ಪಾಕಿಸ್ತಾನ ಹಾಕಿದೆ. ಭಾರತದ ಬಳಿಯೂ ಪಾಕ್‌ಗಿಂತ ಹೆಚ್ಚೇ ನ್ಯೂಕ್ಲಿಯರ್ ವೆಪನ್‌ಗಳು ಹೊಂದಿದೆ. ಆದರೆ, ಭಾರತವು ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದು ಪಾಕ್‌ನಂತೆ ಯಾವುದೇ ಪ್ರಚೋದನಾತ್ಮಕ ಹೇಳಿಕೆಗಳನ್ನು ಕೊಡುತ್ತಿಲ್ಲ.
9 ದೇಶಗಳ ಬಳಿ ಇದೆ ನ್ಯೂಕ್ಲಿಯರ್....
ಭಾರತ ಸೇರಿದಂತೆ ವಿಶ್ವದ 9 ರಾಷ್ಟ್ರಗಳ ಬಳಿ ಮಾತ್ರ ನ್ಯೂಕ್ಲಿಯರ್ ಇದೆ. ರಷ್ಯಾ, ಅಮೆರಿಕ (ಯುನೈಟೆಡ್ ಸ್ಟೇಟ್ಸ್), ಚೀನಾ, ಫ್ರಾನ್ಸ್, ಇಂಗ್ಲೆಂಡ್ (ಯುನೈಟೆಡ್ ಕಿಂಗ್‌ಡಮ್), ಭಾರತ, ಪಾಕಿಸ್ತಾನ್, ಇಸ್ರೇಲ್ ಹಾಗೂ ಉತ್ತರ ಕೊರಿಯಾ ದೇಶಗಳು ಪರಮಾಣು ಶಸ್ತ್ರಸಜ್ಜಿತವಾಗಿವೆ.












Click it and Unblock the Notifications