Donald Trump: ಟ್ರಂಪ್‌ಗೆ ಗುನ್ನಾ ಕೊಡಲು ಸಜ್ಜಾದ ಭಾರತ, ಯುರೋಪ್ ಜೊತೆ ಭರ್ಜರಿ ವ್ಯಾಪಾರ ಒಪ್ಪಂದ?
ಯುರೋಪ್ ದೇಶಗಳು ಬೇಸರದಲ್ಲಿ ನೊಂದು ಹೋಗಿವೆ, ಡೊನಾಲ್ಡ್ ಟ್ರಂಪ್ ನೂತನವಾಗಿ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಏರಿಕೆ ಮಾಡಿದ್ದು ಇದರಿಂದ ಆರ್ಥಿಕ ಸಂಕಷ್ಟದ ಭಯ ಆವರಿಸಿದೆ. ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾದ ನಂತರ ಸಾಕಷ್ಟು ಸಮಸ್ಯೆಗಳು ಯುರೋಪ್ ದೇಶಗಳನ್ನು ಕಾಡುತ್ತಿದ್ದವು. ಇದರ ನಡುವೆ ಡೊನಾಲ್ಡ್ ಟ್ರಂಪ್ ಅವರ ನೂತನ ತೆರಿಗೆ ನೀತಿ ಮತ್ತಷ್ಟು ಸಂಕಷ್ಟ ಹುಟ್ಟುಹಾಕಿದೆ. ಇದೇ ಕಾರಣಕ್ಕೆ ಮುಳ್ಳನ್ನು ಮುಳ್ಳಿಂದಲೇ ತೆಗೆಯಲು ಯುರೋಪ್ ದೇಶಗಳು ಮುಂದಾಗಿವೆ.
ಯುರೋಪ್ ಒಕ್ಕೂಟ ಮತ್ತು ಅಮೆರಿಕದ ನಡುವೆ ದೊಡ್ಡ ಮಟ್ಟದ ವ್ಯಾಪಾರ ವಹಿವಾಟು ನಡೆಯುತ್ತದೆ. ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ಪ್ರತಿವರ್ಷ ಈ ಎರಡೂ ದೇಶದ ನಡುವೆ ನಡೆಯುತ್ತಾ ಬಂದಿದೆ. ಹೀಗಿದ್ದರೂ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತ್ರ ಭಾರಿ ತೆರಿಗೆ ಹೇರಿಕೆ ಮಾಡಲು ಮುಂದಾಗಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು, ಹಾಗೇ ಇದು ಭವಿಷ್ಯದ ದೃಷ್ಟಿಯಿಂದ ಕೂಡ ಇನ್ನಷ್ಟು ಸಮಸ್ಯೆ ಮಾಡುವ ಆತಂಕ ಆವರಿಸಿತ್ತು. ಇಷ್ಟೆಲ್ಲದರ ನಡುವೆ ಯುರೋಪ್ ಒಕ್ಕೂಟ ಜಾಣ ನಡೆ ಇಟ್ಟಿದ್ದು, ಅಮೆರಿಕ ಅಧ್ಯಕ್ಷರಿಗೆ ಆಘಾತ ನೀಡಿದೆ.

ಭಾರತದ ಜೊತೆಗೆ ಯುರೋಪ್ ವ್ಯಾಪಾರ!
ಹೌದು, ಇದೀಗ ಅಮೆರಿಕ ಕೈಕೊಟ್ಟ ಕಾರಣಕ್ಕೆ ಯುರೋಪ್ ದೇಶಗಳು ಭರ್ಜರಿ ವ್ಯಾಪಾರ ಮಾಡಲು ಬೇರೆ ಬೇರೆ ದೇಶಗಳ ಜೊತೆಗೆ ಕೈಜೋಡಿಸುತ್ತಿವೆ. ಅದರಲ್ಲಿ ಪ್ರಮುಖವಾಗಿ ನಮ್ಮ ಭಾರತ ಕೂಡ ಇರಲಿದೆ ಎಂಬುದೇ ಪ್ರಮುಖ ವಿಚಾರ. ಡೊನಾಲ್ಡ್ ಟ್ರಂಪ್ ಕೈಕೊಟ್ಟಿರುವ ಕಾರಣಕ್ಕೆ ಹೀಗೆಲ್ಲಾ ಜಗತ್ತಿನ ವಿವಿಧ ದೇಶಗಳನ್ನು ಒಗ್ಗೂಡಿಸಿ ವ್ಯವಹಾರ ಮಾಡಲು ಸಿದ್ಧತೆ ನಡೆಸಿದೆ ಯುರೋಪ್ ಒಕ್ಕೂಟ. ಸುಮಾರು 2 ಟ್ರಿಲಿಯನ್ ಯುರೋ ಮೊತ್ತದ ಈ ವಹಿವಾಟು ಭವಿಷ್ಯದ ದೃಷ್ಟಿಯಿಂದ ಕೂಡ ಗಮನ ಸೆಳೆದಿದೆ.












Click it and Unblock the Notifications