ಭಾರತದ 300 ಚದರ ಕಿ.ಮೀ ಭೂಭಾಗ ಆಕ್ರಮಿಸಿಕೊಂಡ ಚೀನಾ

ಕಳೆದ ಬೇಸಿಗೆಯಲ್ಲಿ ಚೀನಾವು ಭಾರತದ 300 ಚದರ ಕಿ.ಮೀ ಜಾಗವನ್ನು ಆಕ್ರಮಿಸಿಕೊಂಡಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.

ಮ್ಯಾನ್‌ಹ್ಯಾಟನ್‌ಭಾಗದ ಐದು ಪಟ್ಟು ವ್ಯಾಪ್ತಿಯ ಭೂಭಾಗವನ್ನು ಚೀನಾ ಸೇನೆ ಆಕ್ರಮಿಸಿಕೊಂಡಿದೆ. ಹಿಮಾಲಯ ಪ್ರದೇಶದ ದೆಪ್ಸಾಂಗ್ ಪ್ಲೇನ್ಸ್‌ನ 250 ಚದರ ಕಿ.ಮೀ ಹಾಗೂ ಪ್ಯಾಂಗಾಂಗ್ ಸೋ ಭಾಗ 50 ಚದರ ಕಿಮೀ ಚೀನಾ ಸೇನೆ ಆಕ್ರಮಿಸಿದೆ.

1962ರ ಯುದ್ಧಧ ಬಳಿಕ ಚೀನಾ ಸೇನೆ ಈ ಭೂಪ್ರದೇಶಕ್ಕೆ ಕಾಲಿಟ್ಟಿರಲಿಲ್ಲ ಆದರೆ ಈ ಪ್ರದೇಶದಲ್ಲಿ ಚೀನಾವು ತನ್ನ ಸೇನಾ ನೆಲೆಯನ್ನು ನಿರ್ಮಿಸಿಕೊಂಡಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.

India Loses 300 Square Km To China After Bloody Summer In Himalayas

ಆದರೆ ಈ ಘಟನೆ ಕುರಿತಂತೆ ಭಾರತದ ವಿದೇಶಾಂಗ ಇಲಾಖೆ ಅಥವಾ ರಕ್ಷಣಾ ಇಲಾಖೆ ಯಾವುದೇ ಹೇಳಿಕೆ ನೀಡಿಲ್ಲ, ಹಾಗೂ ಸೇನೆ ಖಚಿತಪಡಿಸಿಲ್ಲ ಇನ್ನೊಂದೆಡೆ ಚೀನಾ ಕೂಡ ಇಂತಹ ಅನಧಿಕೃತ ಮಾಹಿತಿಯ ಬಗ್ಗೆ ಪ್ರತಿಕ್ರಿಯೆ ಅಸಾಧ್ಯ ಎಂದು ಹೇಳಿದೆ.

ಚೀನಾದ ಈ ಅತಿಕ್ರಮಣವನ್ನು ಗಮನಿಸಿದ ಬಳಿಕವೇ ಭಾರತ ತನ್ನ ಸೇನೆಯನ್ನು ಇನ್ನಷ್ಟು ಮುನ್ನುಗ್ಗಿಸಿತ್ತು ಇದರಿಂದ ಗಡಿಯಲ್ಲಿ ಉಭಯ ಸೇನೆಗಳ ನಡುವೆ ಚಕಮಕಿ ತಾರಕಕ್ಕೇರಿತ್ತು.

ಸೈನಿಕರು ಗಡಿಯಲ್ಲಿ ಕೈಕೈ ಮಿಲಾಯಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು.ಈಗಲೂ ಗಡಿಯಲ್ಲಿ ಉಭಯ ದೇಶಗಳ ಸೈನ್ಯ ಜಮಾವಣೆ ಹೆಚ್ಚುತ್ತಲೇ ಇದೆ. ಪರಿಸ್ಥಿತಿ ತಿಳಿಗೊಳಿಸುವ ಕುರಿತು ದೇಶಗಳ ನಡುವೆ ನಡೆದ ಮಾತುಕತೆಗಳು ವಿಫಲವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+