ಅಮೆರಿಕದ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ ಭಾರತ!
ಅಮೆರಿಕ & ಭಾರತ ನಡುವೆ ರಷ್ಯಾ ವಿಚಾರಕ್ಕೆ ನಡೆಯುತ್ತಿರುವ ಜಂಗಿ ಕುಸ್ತಿ ಈಗ ಮತ್ತೊಂದು ಹಂತಕ್ಕೆ ಹೋದಂತೆ ಕಾಣುತ್ತಿದೆ. ಯಾಕಂದ್ರೆ ಈ ವಿಚಾರವಾಗಿ ಭಾರತದ ಬಗ್ಗೆ ಮಾತನಾಡಿ ಅಮೆರಿಕ ತನ್ನ ಬುಡಕ್ಕೆ ತಾನೇ ಬಿಸಿನೀರು ಬಿಟ್ಟುಕೊಂಡ ರೀತಿ ಕಾಣುತ್ತಿದೆ. ಹಾಗಾದ್ರೆ ಈಗ ನಡೆದ ಮಹತ್ವದ ಬೆಳವಣಿಗೆ ಏನು? ಬನ್ನಿ ತಿಳಿಯೋಣ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಭಾರತದ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸಿದ್ದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ರಷ್ಯಾಗೆ ಭೇಟಿ ನೀಡಿ, ಪುಟಿನ್‌ರ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಆದರೆ ಈ ಕುರಿತು ಅಮೆರಿಕ ಈಗ ಕಿರಿಕ್ ಶುರು ಮಾಡಿದೆ. ಅಲ್ಲದೆ ಭಾರತದ ಪ್ರಧಾನಿ ಮೋದಿ & ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಬಗ್ಗೆ ಹೊಟ್ಟೆ ಕಿಚ್ಚು ಎಷ್ಟಿದೆ? ಅನ್ನೋದನ್ನೂ ಅಮೆರಿಕ ಈಗ ತೋರಿಸಿದೆ. ಈ ವಿಚಾರಕ್ಕೆ ಇದೀಗ ಭಾರತ ಕೂಡ ಖಡಕ್ ತಿರುಗೇಟು ನೀಡಿದೆ.

ರಷ್ಯಾ ಬೆಂಬಲಕ್ಕೆ ನಿಂತ ಭಾರತ?
ಅಮೆರಿಕ & ಅದರ ಮಿತ್ರ ರಾಷ್ಟ್ರಗಳು ಈಗ ಹೇಳುತ್ತಿರುವ ಪ್ರಕಾರ ಭಾರತ ಇದೀಗ ರಷ್ಯಾದ ಬೆನ್ನಿಗೆ ನಿಂತಿದೆ. ಆದರೆ ಈ ಮಾತು ಸುಳ್ಳು, ಯಾಕಂದ್ರೆ ಭಾರತ ಮೊದಲಿನಿಂದ ಕೂಡ ಇದೇ ರೀತಿ ರಷ್ಯಾ ಜೊತೆ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿದೆ. ಆದರೆ ಉಕ್ರೇನ್ ಯುದ್ಧ ಶುರುವಾದ ನಂತರ ರಷ್ಯಾ ವಿರುದ್ಧ ಅಮೆರಿಕ & ಅದರ ಸ್ನೇಹಿತ ದೇಶಗಳು ತಿರುಗಿಬಿದ್ದಿವೆ. ಇದೇ ಕಾರಣಕ್ಕೆ ಭಾರತ ಕೂಡ ರಷ್ಯಾ ವಿರುದ್ಧ ತಿರುಗಿಬೀಳಲಿ & ನಿರ್ಬಂಧ ಹೇರಲಿ ಅಂತಾ ಕಾಯುತ್ತಿವೆ. ಆದ್ರೆ ಭಾರತ ಮಾತ್ರ ಅಮೆರಿಕ ತೋಡಿದ ಹಳ್ಳಕ್ಕೆ ಬೀಳದೆ ಜಾಣ ನಡೆ ಇಟ್ಟಿದೆ. ಈ ವಿಚಾರವಾಗಿ ಅಮೆರಿಕ & ಭಾರತ ನಡುವೆ ಈಗ ಕಿರಿಕ್ ಕೂಡ ಜೋರಾಗಿದೆ. ಹೀಗಿದ್ದಾಗಲೇ ಭಾರತ ಖಡಕ್ ಪ್ರತ್ಯುತ್ತರ ನೀಡಿದೆ.
ಅಮೆರಿಕ ವಿರುದ್ಧ ಭಾರತ ಗರಂ!
ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ ವಿಚಾರ ಸಂಬಂಧ, ಅಮೆರಿಕದ ಅಧಿಕಾರಿ ಒಬ್ಬರು ಕಿರಿಕ್ ಶುರು ಮಾಡಿದ್ದರು. ಈ ಬಗ್ಗೆ ಬಹಿರಂಗ ಹೇಳಿಕೆ ಕೂಡ ನೀಡಿದ್ದರು. ಈಗ ಅದಕ್ಕೆ ಖಡಕ್ ಉತ್ತರ ನೀಡಿರುವ ಭಾರತ, ನಮ್ಮ ಆಂತರಿಕ ವಿಚಾರದಲ್ಲಿ ಕೈಹಾಕುವ ಅಗತ್ಯತೆ ಇಲ್ಲ. ನಮ್ಮ & ರಷ್ಯಾ ನಡುವೆ ಕಳೆದ ಹಲವು ದಶಕಗಳಿಂದ ಉತ್ತಮ ಸಂಬಂಧ ಇದೆ ಎಂಬ ಖಡಕ್ ಉತ್ತರ ರವಾನಿಸಿದೆ. ಹೀಗಾಗಿ ಅಮೆರಿಕ ಸೈಲೆಂಟ್ ಆಗುವ ಪರಿಸ್ಥಿತಿ ಬಂದಿದೆ.
ಪ್ರಧಾನಿ ಮೋದಿ & ಪುಟಿನ್ ಮಾತುಕತೆ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸಕ್ಕೆ ತೆರಳಿದ್ದರು ಇದೇ ಸಮಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ, ಪ್ರಧಾನಿ ಮೋದಿ ಅವರು ಹಲವು ಮಹತ್ವದ ಚರ್ಚೆ ನಡೆಸಿ ಮಹತ್ವದ ಒಪ್ಪಂದಗಳಿಗೆ ಅಂತಿಮ ರೂಪುರೇಷೆ ನೀಡಿದ್ದರು. ಹಾಗೇ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಷ್ಯಾಗೆ ಭಾರತದ ಕಡೆಯಿಂದ ಎಲ್ಲ ರೀತಿಯಲ್ಲಿ ಸಹಕಾರ ನೀಡುವ ಭರವಸೆ ಕೂಡ ಸಿಗುತ್ತಿದೆ.
ಹೀಗಿದ್ದಾಗ ಅಮೆರಿಕವು ಭಾರತದ ವಿರುದ್ಧ ರೊಚ್ಚಿಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸ ಕೈಗೊಂಡ ಸಮಯ ಮತ್ತು ಸಂದರ್ಭ ಅಮೆರಿಕವನ್ನ ನಿರಾಶೆಗೊಳಿಸಿದೆ ಅಂತಾ ಅಮೆರಿಕ ಹೇಳಿದೆ. ಅಮೆರಿಕದ ವಿದೇಶಾಂಗ ಇಲಾಖೆ ಹಿರಿಯ ಅಧಿಕಾರಿ ಹೇಳಿಕೆ ನೀಡಿರುವುದು, ಸಂಚಲನ ಸೃಷ್ಟಿ ಮಾಡಿತ್ತು. ಇದೇ ಹೇಳಿಕೆಗೆ ಭಾರತ ಕೂಡ ಈಗ ಖಡಕ್ ಉತ್ತರ ನೀಡಿದೆ.












Click it and Unblock the Notifications