ಭಾರತೀಯರು ಇಸ್ರೇಲ್‌ಗೆ ಹೋಗಬಾರದಂತೆ, ಯಾಕೆ ಗೊತ್ತಾ?

ಭಾರತ ಮತ್ತು ಇಸ್ರೇಲ್ ನಡುವೆ ಉತ್ತಮವಾದ ಬಾಂಧವ್ಯ ಇದ್ದು, ಎರಡೂ ದೇಶಗಳಿಗೂ ಇದರಿಂದ ಉಪಯೋಗ ಆಗುತ್ತಿದೆ. ಅದರಲ್ಲೂ ಹಮಾಸ್ ವಿರುದ್ಧ ಯುದ್ಧ ಸಾರಿ ಸಂಕಷ್ಟ ಎದುರಿಸುತ್ತಿರುವ ಇಸ್ರೇಲ್‌ಗೆ ಭಾರತ ಈಗಾಗಲೇ ಸಾಕಷ್ಟು ನೆರವು ನೀಡಿದೆ. ಪರಿಸ್ಥಿತಿ ಹೀಗೆ ವ್ಯತಿರಿಕ್ತವಾಗಿ ಸಂಕಷ್ಟ ಎದುರಾಗಿರುವ ಸಮಯದಲ್ಲೇ, ಇಸ್ರೇಲ್‌ಗೆ ಹೋಗಬೇಡಿ ಎನ್ನುತ್ತಾ ಭಾರತೀಯರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.

ಹೌದು, ಇರಾನ್ & ಇಸ್ರೇಲ್ ನಡುವೆ ಸಂಬಂಧ ತೀರಾ ಹದಗೆಟ್ಟಿದ್ದು. ಯುದ್ಧದ ಭೀತಿ ಇದೀಗ ಎದುರಾಗಿದೆ. ಈ ಕಾರಣಕ್ಕೆ ಇರಾನ್ & ಇಸ್ರೇಲ್‌ಗೆ ಹೋಗಬೇಡಿ ಎಂದು ಭಾರತೀಯರಿಗೆ ಈಗ ಎಚ್ಚರಿಕೆ ಸಂದೇಶ ನೀಡಲಾಗಿದೆ. ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ಎಚ್ಚರಿಕೆ ಸಂದೇಶ ರವಾನಿಸಿದೆ. ಇರಾನ್ & ಇಸ್ರೇಲ್‌ನಲ್ಲಿ ಇರುವ ಭಾರತೀಯರು ತಮ್ಮ ಸುರಕ್ಷತೆ ಖಾತ್ರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಲಾಗಿದೆ. ಅಲ್ಲದೆ ಅನಗತ್ಯವಾಗಿ ಹೊರಗೆ ಹೋಗಿ ತಿರುಗಾಡುವುದನ್ನು ಕಡಿಮೆ ಮಾಡಿ ಎಂದು ಕೂಡ ತಿಳಿಸಲಾಗಿದೆ.

India Gave Alert To Citizens That Not To Go For Israel amp amp Iran For This Reason

ಅಮೆರಿಕ ಕೂಡ ಎಚ್ಚರಿಕೆ ನೀಡಿದೆ!

ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ದಾಳಿ ನಡೆಸಿ, ಕಾನ್ಸುಲರ್‌ ಅನೆಕ್ಸ್‌ ನೆಲಸಮ ಮಾಡಿರುವ ಆರೋಪ ಇಸ್ರೇಲ್ ವಿರುದ್ಧ ಇದೆ. ಅಲ್ಲದೆ ಇದೇ ಕಾರಣಕ್ಕೆ ಇಸ್ರೇಲ್ ವಿರುದ್ಧ ಇರಾನ್ ಭೀಕರ ದಾಳಿ ಮಾಡುವ ಸಾಧ್ಯತೆ ಕೂಡ ದಟ್ಟವಾಗಿದೆ. ಪರಿಸ್ಥಿತಿ ಸೂಕ್ಷ್ಮ ಸ್ಥಿತಿ ತಲುಪಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಇರಾನ್ & ಇಸ್ರೇಲ್ ನಡುವೆ ಭೀಕರವಾಗಿ ಯುದ್ಧ ಆರಂಭ ಆಗಬಹುದು. ಈ ಎಲ್ಲಾ ಕಾರಣಕ್ಕೆ ಭಾರತೀಯರು ಇರಾನ್ & ಇಸ್ರೇಲ್‌ಗೆ ಹೋಗಬೇಡಿ ಎಂದು ಸೂಚನೆ ನೀಡಲಾಗಿದೆ. ಈಗಾಗಲೇ ಅಮೆರಿಕ ಕೂಡ ಎಚ್ಚರಿಕೆ ಸಂದೇಶ ರವಾನಿಸಿದೆ.

ಇರಾನ್‌ಗೆ ಅಮೆರಿಕ ವಾರ್ನಿಂಗ್!

ಅಂದಹಾಗೆ ಇದೀಗ ಖುದ್ದು ಅಮೆರಿಕದ ಅಧ್ಯಕ್ಷರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಸೂಕ್ಷ್ಮ ವಾತಾವರಣ ಸೃಷ್ಟಿ ಮಾಡಿದ್ದು, ಇಸ್ರೇಲ್ ಮೇಲೆ ಇರಾನ್ ಬೇಗನೇ ದಾಳಿ ನಡೆಸುವ ಸಾಧ್ಯತೆ ಇದೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್. ಯುದ್ಧಕ್ಕೆ ಮುಂದಾಗಬೇಡಿ ಎಂಬ ಎಚ್ಚರಿಕೆ ಸಂದೇಶವನ್ನೂ ಇರಾನ್‌ಗೆ ನೀಡಿದ್ದಾರೆ ಬೈಡನ್. ಈ ಮೂಲಕ ಇಬ್ಬರ ನಡುವೆ, ಭಾರಿ ದೊಡ್ಡ ಕಿರಿಕ್ ಶುರುವಾದಂತೆ ಕಾಣುತ್ತಿದೆ. ಹಾಗೇ ಹಮಾಸ್ ವಿರುದ್ಧ ಹೋರಾಡುತ್ತಾ ಸುಸ್ತಾಗಿರುವ ಇಸ್ರೇಲ್‌ಗೆ ಈ ಸುದ್ದಿ ಮತ್ತೊಂದು ಆಘಾತವನ್ನೂ ನೀಡುತ್ತಿದೆ. ಈ ಕಾರಣಕ್ಕೆ ಭಾರತೀಯರು, ಇಸ್ರೇಲ್ ಮತ್ತು ಇರಾನ್‌ಗೆ ಹೋಗದಂತೆ ಸೂಚಿಸಲಾಗಿದೆ.

ಒಟ್ನಲ್ಲಿ ಹೀಗೆ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಭೀತಿ ಆವರಿಸಿದ ಕಾರಣಕ್ಕೆ ಈಗ ಭಾರಿ ಸಂಚಲನ ಸೃಷ್ಟಿ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರಿ ಘೋರ ಯುದ್ಧವೇ ಶುರುವಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ರಷ್ಯಾ & ಉಕ್ರೇನ್ ಸೇರಿದಂತೆ, ಇಸ್ರೇಲ್ ಮತ್ತು ಹಮಾಸ್ ನಡುವೆ ಘೋರ ಕಾಳಗ ನಡೆಯುತ್ತಿದೆ. ಇದು ಸಾಲದು ಎಂಬಂತೆ ಈಗ, ಇರಾನ್ ಮತ್ತು ಇಸ್ರೇಲ್ ನಡುವೆ ಕೂಡ ಯುದ್ಧದ ಭೀತಿ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+