India EU Trade Deal: ಭಾರತ-ಐರೋಪ್ಯ ಒಕ್ಕೂಟದ ನಡುವೆ ಐತಿಹಾಸಿಕ ಒಪ್ಪಂದ; ಇದು ಎಲ್ಲ ಒಪ್ಪಂದಗಳ ದೊಡ್ಡಮ್ಮ ಎಂದ ಜಗತ್ತು

ಜಾಗತಿಕ ಅಸ್ಥಿರತೆಯ ನಡುವೆಯೇ ಭಾರತ-ಯುರೋಪಿಯನ್ ಯೂನಿಯನ್‌ (ಇಯು) ನಡುವಿನ ಐತಿಹಾಸಿಕ ವ್ಯಾಪಾರ ಒಪ್ಪಂದ ಅಂತಿಮ ಹಂತ ತಲುಪಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ 'Mother of All Deals' (ಎಲ್ಲ ಒಪ್ಪಂದಗಳ ದೊಡ್ಡಮ್ಮ) ಎಂದು ಬಣ್ಣಿಸಿದ್ದಾರೆ. ನವದೆಹಲಿಯಲ್ಲಿ ನಡೆದ 16ನೇ ಭಾರತ-ಇಯು ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಆತಿಥ್ಯ ವಹಿಸಿಕೊಂಡಿದ್ದು, ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್‌ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರು ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಭಾರತ-ಯುರೋಪಿಯನ್ ಯೂನಿಯನ್‌ (ಇಯು) ನಡುವಿನ ದೀರ್ಘಕಾಲದಿಂದ ನಿರೀಕ್ಷೆಯಲ್ಲಿದ್ದ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಇದೀಗ ಅಂತಿಮ ಹಂತ ತಲುಪಿದೆ. ಈ ಐತಿಹಾಸಿಕ ವ್ಯಾಪಾರ ಒಪ್ಪಂದದ ಬಗ್ಗೆ ಅಧಿಕೃತ ಘೋಷಣೆ ಮಾಡುವುದಾಗಿ ತಿಳಿಸಲಾಗಿದೆ. ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗ್ರವಾಲ್ ಅವರ ಪ್ರಕಾರ, ಭಾರತ ಮತ್ತು ಇಯು ನಡುವೆ ಬಹುಕಾಲದಿಂದ ನಡೆದು ಬಂದ ಮಾತುಕತೆಗಳು ಈಗ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶೃಂಗಸಭೆಯಲ್ಲೇ ಈ ಒಪ್ಪಂದದ ಅಂತಿಮ ನಿರ್ಣಯ ಪ್ರಕಟವಾಗಲಿದೆ.

India European

ಸುಮಾರು ಎರಡು ದಶಕಗಳ ಕಾಲ ವಿರಾಮ-ಪುನರಾರಂಭದೊಂದಿಗೆ ಸಾಗಿದ್ದ ಈ ಮಾತುಕತೆಗಳು ಇದೀಗ ಫಲಪ್ರದವಾಗಿದ್ದು, 27 ರಾಷ್ಟ್ರಗಳನ್ನು ಒಳಗೊಂಡಿರುವ ಇಯು ಮತ್ತು ಭಾರತ ನಡುವೆ ವ್ಯಾಪಾರ ಸಂಬಂಧಗಳು ಹೊಸ ಹಂತಕ್ಕೆ ಪ್ರವೇಶಿಸಲಿವೆ. ಈ ಒಪ್ಪಂದದ ಮೂಲಕ ಭಾರತ ತನ್ನ ವಿಶಾಲ ಹಾಗೂ ನಿಯಂತ್ರಿತ ಮಾರುಕಟ್ಟೆಯನ್ನು ಇಯು ದೇಶಗಳಿಗೆ ಹೆಚ್ಚಿನ ಮಟ್ಟದಲ್ಲಿ ತೆರೆಯಲು ಸಿದ್ಧವಾಗಿದ್ದು, ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಅಸ್ಥಿರತೆಯ ನಡುವೆಯೇ ಅಮೆರಿಕದೊಂದಿಗೆ ಬದಲಾಗುತ್ತಿರುವ ಸಂಬಂಧಗಳ ಹಿನ್ನೆಲೆಯಲ್ಲಿ, ಭಾರತ-ಇಯು ಸಹಕಾರವು ಇನ್ನಷ್ಟು ಬಲಗೊಳ್ಳುವ ನಿರೀಕ್ಷೆ ಇದೆ.

"ನಿನ್ನೆ ಯುರೋಪಿಯನ್ ಯೂನಿಯನ್ ಮತ್ತು ಭಾರತ ನಡುವೆ ಒಂದು ದೊಡ್ಡ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದನ್ನು ಜಗತ್ತಿನಾದ್ಯಂತ 'ಮದರ್ ಆಫ್ ಆಲ್ ಡೀಲ್ಸ್' ಎಂದು ಕರೆಯಲಾಗುತ್ತಿದೆ. ಈ ಒಪ್ಪಂದವು ಭಾರತದ 1.4 ಬಿಲಿಯನ್ ಜನರು ಹಾಗೂ ಯುರೋಪಿನ ಲಕ್ಷಾಂತರ ಜನರಿಗೆ ಹೊಸ ಅವಕಾಶಗಳನ್ನು ತೆರೆದುಕೊಳ್ಳಲಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

India European

ಈ ಒಪ್ಪಂದದ ಅಧಿಕೃತ ಸಹಿ ಪ್ರಕ್ರಿಯೆ ಕಾನೂನು ಪರಿಶೀಲನೆಯ ನಂತರ ನಡೆಯಲಿದ್ದು, ಇದಕ್ಕೆ ಸುಮಾರು ಐದುರಿಂದ ಆರು ತಿಂಗಳು ಸಮಯ ಬೇಕಾಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಎಲ್ಲವೂ ಯೋಜನೆಯಂತೆ ನಡೆದರೆ, ಮುಂದಿನ ಒಂದು ವರ್ಷದೊಳಗೆ ಈ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ ಜಾರಿಯಾಗುವ ಸಾಧ್ಯತೆ ಇದೆ. ಜಾಗತಿಕ ಆರ್ಥಿಕ ವಲಯದಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಒಪ್ಪಂದದಿಂದ ಏನೆಲ್ಲ ಅನುಕೂಲ?

2024-25 ಆರ್ಥಿಕ ವರ್ಷದಲ್ಲಿ ಭಾರತ-ಇಯು ನಡುವಿನ ವ್ಯಾಪಾರ ವಹಿವಾಟು 136.5 ಬಿಲಿಯನ್ ಡಾಲರ್‌ಗೆ ತಲುಪಿದ್ದು, ಈ ಒಪ್ಪಂದ ಜಾರಿಯಾದ ಬಳಿಕ ವ್ಯಾಪಾರ, ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ತಂತ್ರಜ್ಞಾನ ವಿನಿಮಯದಲ್ಲಿ ದೊಡ್ಡ ಮಟ್ಟದ ಏರಿಕೆ ಸಾಧ್ಯವೆಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+