UNHRC ಮತದಾನದಿಂದ ದೂರ ಉಳಿದ ಭಾರತ
ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಉನ್ನತ ಮಟ್ಟದ ತನಿಖೆ ಕೋರಿ ವಿಶ್ವಸಂಸ್ಥೆಯಲ್ಲಿ ನಡೆದ ನಿರ್ಣಾಯಕ ಮತದಾನದಿಂದ ಭಾರತ ದೂರ ಉಳಿದಿದೆ.
ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣದ ಬಳಿಕ ಯುಎನ್ ಹಕ್ಕುಗಳ ಸಂಸ್ಥೆ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗವನ್ನು ಕೋರಿದೆ.
ಇದರೊಂದಿಗೆ ರಷ್ಯಾ- ಉಕ್ರೇನ್ ಕದನಕ್ಕೆ ಸಂಬಂಧಿಸಿದಂತೆ ನಡೆಸಲಾದ ಎರಡು ಮತದಾನದಿಂದ ಭಾರತ ದೂರವುಳಿದು ತಟಸ್ಥ ನೀತಿ ಅನುಸರಿಸಿದಂತಾಗಿದೆ.
47 ಸದಸ್ಯ ಮಂಡಳಿಯು ಕರಡು ನಿರ್ಣಯದ ಪರವಾಗಿ 32 ಮತಗಳು ಬಂದಿವೆ, ರಷ್ಯಾ ಹಾಗೂ ಎರಿಟ್ರಿಯಾ ಅದರ ವಿರುದ್ಧವಾಗಿ ಉಳಿದಿವೆ. ಭಾರತ, ಚೀನಾ, ಪಾಕಿಸ್ತಾನ, ಸುಡಾನ್ ಮತ್ತು ವೆನೆಜುವೆಲಾ ಸೇರಿದಂತೆ 13 ಸದಸ್ಯರು ದೂರವಿದ್ದರು.

ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಪಾಶ್ಚಿಮಾತ್ಯ ದೇಶಗಳು ಖಂಡಿಸುತ್ತಿವೆ. ಈ ಯುದ್ಧದಲ್ಲಿ ಉಕ್ರೇನ್‌ನೊಂದಿಗೆ ವಿಶ್ವದಾದ್ಯಂತ ದೇಶಗಳು ನಿಂತಿರುವ ರೀತಿಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೋಪಗೊಂಡಿದ್ದಾರೆ.
ರಷ್ಯಾ ತನ್ನ ಬಾಹ್ಯಾಕಾಶ ರಾಕೆಟ್‌ನಿಂದ ಹಲವು ದೇಶಗಳ ಧ್ವಜಗಳನ್ನು ತೆಗೆದುಹಾಕಿದೆ. ರಷ್ಯಾ ತನ್ನ ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಬ್ರಿಟನ್ ಮತ್ತು ಜಪಾನ್ ಧ್ವಜಗಳನ್ನು ತೆಗೆದುಹಾಕಿದ್ದು ಭಾರತದ ಧ್ವಜವನ್ನು ಹಾಗೇ ಉಳಿಸಿಕೊಂಡಿದೆ. ವಿಶ್ವಸಂಸ್ಥೆಯಲ್ಲಿ ಭಾರತ ಎರಡು ಬಾರಿ ರಷ್ಯಾ ವಿರುದ್ಧ ಮತದಾನ ಮಾಡಲು ನಿರಾಕರಿಸಿತ್ತು.
ಉಕ್ರೇನಿಯನ್ ಸೈನ್ಯದ ಪ್ರಕಾರ, ರಷ್ಯಾ ಇಲ್ಲಿಯವರೆಗೆ ಯುದ್ಧದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಅವರು 9000 ಸೈನಿಕರನ್ನು ಕಳೆದುಕೊಂ












Click it and Unblock the Notifications