ಚಿತ್ರಗಳಲ್ಲಿ : ಆವೆ ಮಣ್ಣಿನ ರಾಜ ನಡಾಲ್ ದಿಗ್ವಿಜಯ
ಪ್ಯಾರಿಸ್, ಜೂ.9: ಸ್ಪೇನ್‌ನ ರಫೆಲ್ ನಡಾಲ್ ಅವರು ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮತ್ತೊಮ್ಮೆ ಟೆನಿಸ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ನಡಾಲ್ 3-6, 7-5, 6-2, 6-4 ರಲ್ಲಿ ಸರ್ಬಿಯದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ದಾಖಲೆಯ 9ನೇ ಬಾರಿ ಕಿರೀಟ ಮುಡಿಗೇರಿಸಿಕೊಂಡರು.
ರೋಲಂಡ್ ಗ್ಯಾರೋಸ್‌ನಲ್ಲಿ ಸತತ ಐದನೇ ಪ್ರಶಸ್ತಿ ಗೆದ್ದ ಸಾಧನೆಯನ್ನು ನಡಾಲ್ ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಗೌರವ ಕೂಡಾ ದಕ್ಕಿದೆ. ಈ ಗೆಲುವಿನ ಮೂಲಕ ತಾನು 'ಕ್ಲೇ ಕೋರ್ಟ್ ಕಿಂಗ್' ಎನಿಸಿಕೊಂಡಿದ್ದಾರೆ. ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ನಡಾಲ್ ಅವರ ವೃತ್ತಿಜೀವನದಲ್ 14ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದಾಗಿದೆ.
ನಡಾಲ್ 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಪೀಟ್ ಸಾಂಪ್ರಾಸ್ ಅವರ ಸಾಧನೆಯನ್ನು ಸರಿಗಟ್ಟಿದರು. ಇದೀಗ ರೋಜರ್ ಫೆಡರರ್ (17) ಮಾತ್ರ ನಡಾಲ್ ಅವರಿಗಿಂತ ಮುಂದಿದ್ದಾರೆ. [ಚಿತ್ರಗಳ ಕೃಪೆ: AP/PTI]

ಕಪ್ ಜತೆ ರಾಫಾ ಬೋರ್ಗ್: ದಿಗ್ಗಜರ ಸಮಾಗಮ
ಪ್ಯಾರೀಸ್: ಸ್ಪೇನಿನ ರಾಫೆಲ್ ನಡಾಲ್ ಅವರಿಗೆ ಫ್ರೆಂಚ್ ಓಪನ್ ಟೂರ್ನಿಯ ಕಪ್ ವಿತರಿಸಿದ ಸ್ವೀಡನ್ನಿನ ದಿಗ್ಗಜ ಬೋರ್ಗ್

ಫ್ರೆಂಚ್ ಕಪ್ ಎತ್ತಿ ಹಿಡಿದ ಕಿಂಗ್ ರಾಫಾ
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ನಡಾಲ್ 3-6, 7-5, 6-2, 6-4 ರಲ್ಲಿ ಸರ್ಬಿಯದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ದಾಖಲೆಯ 9ನೇ ಬಾರಿ ಕಿರೀಟ ಮುಡಿಗೇರಿಸಿಕೊಂಡರು.

ಹೋರಾಟದ ಆಟ ಟೆನಿಸ್ ಪ್ರೇಮಿಗಳಿಗೆ ಕಾದಿತ್ತು
ಜೊಕೊವಿಚ್ ಮೊದಲ ಸೆಟ್‌ಅನ್ನು 6-3 ರಲ್ಲಿ ಗೆದ್ದುಕೊಂಡರು. ಹಿಂದೆ ಬಿದ್ದಿದ್ದ ನಡಾಲ್ ಎರಡನೇ ಸೆಟ್‌ನಲ್ಲಿ ಹೋರಾಟ ನಡೆಸಿ 7-5 ರಲ್ಲಿ ಗೆದ್ದು ಕೊಂಡರು. ಹಲವಾರು ನಿಮಿಷಗಳ ಕಾಲ dues, advantage ನಡುವೆ ಇಬ್ಬರು ಸೆಣಸಾಡಿದ್ದು ಟೆನಿಸ್ ಅಭಿಮಾನಿಗಳಿಗೆ ರಸದೌತಣ ನೀಡಿತು.

ಕಿಂಗ್ ಆಫ್ ಕ್ಲೇ ರಾಫಾ ಆಟದ ಭಂಗಿ
ಮೂರನೇ ಸೆಟ್‌ನಲ್ಲಿ ನಡಾಲ್ ಎದುರಾಳಿಗೆ ಯಾವುದೇ ಅವಕಾಶವನ್ನೇ ನೀಡಲಿಲ್ಲ. ನಾಲ್ಕನೇ ಸೆಟ್‌ನಲ್ಲಿ ಅಲ್ಪ ಪೈಪೋಟಿ ಕಂಡುಬಂತು.

ಜೊಕೊವಿಚ್ ಸಿಕ್ಕ ಅವಕಾಶ ವ್ಯರ್ಥ
7ನೇ ಗ್ರಾಂಡ್ ಸ್ಲಾಂ ಸಂಪಾದಿಸಿದ ವಿಶ್ವದ 8ನೇ ಆಟಗಾರ, ಮೊದಲ ಬಾರಿಗೆ ಫ್ರೆಂಚ್ ಓಪನ್ ಗೆಲುವಿನ ಸಂಭ್ರಮ ಕಾಣುವ ಕನಸು ಹೊತ್ತಿದ್ದ ಸೆರ್ಬಿಯಾದ ಜೋಕವಿಚ್ ಗೆ ನಿರಾಸೆ ಕಾದಿತ್ತು.

ಕುತೂಹಲ ಕೆರಳಿಸಿದ್ದ ಕೊನೆ ಸೆಟ್
ಒಂದು ಹಂತದಲ್ಲಿ ಇಬ್ಬರೂ 4-4 ರಲ್ಲಿ ಸಮಬಲ ಸಾಧಿಸಿದ್ದರು. ಆ ಬಳಿಕ ಆಕ್ರಮಣಕಾರಿ ಪ್ರದರ್ಶನ ತೋರಿದ ನಡಾಲ್ ಮುಂದಿನ ಎರಡೂ ಗೇಮ್‌ಗಳಲ್ಲಿ ಜಯ ಸಾಧಿಸಿ ಕಿರೀಟ ಮುಡಿಗೇರಿಸಿಕೊಂಡರು.

ರಾಫೆಲ್ ನಡಾಲ್ ಸಾಧನೆಯ ನೋಟ
* ರಾಫೆಲ್ ನಡಾಲ್ ವೃತ್ತಿ ಬದುಕಿನ 14ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ
* ಒಂದೇ ಗ್ರಾಂಡ್ ಸ್ಲಾಂ ಪ್ರಶಸ್ತಿಯನ್ನು 9 ಬಾರಿ ಗೆದ್ದ ಏಕೈಕ ಆಟಗಾರ
* ಸತತ ಐದು ವರ್ಷ ಫ್ರೆಂಚ್ ಓಪನ್ ಜಯಸಿದ ಏಕೈಕ ಆಟಗಾರ
* ಆವೆ ಮಣ್ಣಿನಲ್ಲಿ ಒಟ್ಟಾರೆ 45 ಪ್ರಶಸ್ತಿ ಗೆದ್ದ ಸ್ಪೇನ್ ವೀರ

ನಾನು ಮತ್ತೆ ಪ್ರಯತ್ನ ಮಾಡುತ್ತೇನೆ: ನೊವಾಕ್
ಪಂದ್ಯದ ನಂತರ ಮಾತನಾಡಿದ ನೋವಾಕ್ ಜೋಕೊವಿಕ್, ನಾನು ನನ್ನ ಪ್ರಯತ್ನವನ್ನು ಬಿಡುವುದಿಲ್ಲ, ಫ್ರೆಂಚ್ ಓಪನ್ ಗೆಲ್ಲುವುದು ನನ್ನ ಗುರಿ. ರಾಫಾ ಅದ್ಭುತ ಆಟಗಾರ ಅಸಾಮಾನ್ಯ ಸಾಧನೆ 9 ಬಾರಿ ಫ್ರೆಂಚ್ ಓಪನ್ ಗೆದ್ದಿರುವುದು ನಿಜಕ್ಕೂ ಗ್ರೇಟ್ ಎಂದರು.












Click it and Unblock the Notifications