ನರೇಂದ್ರ ಮೋದಿ ಕೈಕುಲುಕಿದ ಲಂಡನ್ ರಾಣಿ ಎಲಿಜಬೆತ್
ಲಂಡನ್, ನವೆಂಬರ್ 14 : ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಿದ್ಯಾರ್ಥಿಗಳಿಗೆ ನೀಡುವ ವೀಸಾ ನಿಯಮವನ್ನು ಸಡಿಲಿಸಬೇಕು ಎಂದು ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಮೂರುದಿನಗಳ ಪವಾಸ ಇಂದು ಅಂತ್ಯಗೊಳ್ಳಲಿದೆ. [ಮೋದಿ ಭೇಟಿಯ ಚಿತ್ರಗಳು]
ಶುಕ್ರವಾರ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ವೀಸಾ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪ ಮಾಡಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ. [ಚಿತ್ರಗಳು : ಬ್ರಿಟನ್ ನಲ್ಲಿ ಮೋದಿ]
ಬ್ರಿಟನ್‌ನಲ್ಲಿ ವ್ಯಾಸಂಗ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಪಡೆಯುವುದು ಕಷ್ಟವಾಗಿದೆ. ಆದ್ದರಿಂದ, ವೀಸಾ ನಿಯಮ ಸಡಿಲಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ. ವೀಸಾ ಪಡೆಯ ಆಗುತ್ತಿರುವ ತೊಂದರೆಯಿಂದಾಗಿ ಬ್ರಿಟನ್‌ಗೆ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. [ಮೋದಿ ಬ್ರಿಟನ್ ಪ್ರವಾಸ, ಕಾರ್ಯಕ್ರಮಗಳು]
ಶುಕ್ರವಾರ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಮೋದಿ ಬ್ರಿಟನ್ ರಾಣಿ ಎಲಿಜಬೆತ್ ಅವರನ್ನು ಭೇಟಿಯಾಗಿದ್ದರು. ಡೆವೀಡ್ ಕ್ಯಾಮರೂನ್ ಅವರ ಚೆಕರ್ಸ್ ತೋಟದ ಮನೆಯಲ್ಲಿ ವಿಹಾರ ನಡೆಸಿದರು, ಪ್ರಧಾನಿ ಜೊತೆ ಭೋಜನ ಸವಿದರು. ಮೋದಿ ಭೇಟಿಯ ಚಿತ್ರಗಳು ಇಲ್ಲಿವೆ.... [ಪಿಟಿಐ ಚಿತ್ರಗಳು]

ಸಿಇಒಗಳೊಂದಿಗೆ ಸಭೆ
ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಲಂಡನ್‌ನಲ್ಲಿ ಶುಕ್ರವಾರ ವಿವಿಧ ಕಂಪನಿಗಳ ಸಿಇಒಗಳ ಜೊತೆ ಸಭೆ ನಡೆಸಿದರು.

ಕ್ಯಾಮರೂನ್ ಜೊತೆ ವಿಹಾರ
ಬ್ರಿಟನ್ ಪ್ರಧಾನಿ ಡೆವೀಡ್ ಕ್ಯಾಮರೂನ್ ಅವರ ಚೆಕರ್ಸ್ ತೋಟದ ಮನೆಗೆ ಭೇಟಿ ನೀಡಿದ್ದ ಮೋದಿ, ತೋಟದಲ್ಲಿ ವಿಹಾರ ನಡೆಸಿದರು. ಪ್ರಧಾನಿ ಜೊತೆ ಭೋಜನ ಸವಿದರು.

ನೆನೆಪಿಗಾಗಿ ಗಿಡ ನೆಟ್ಟ ಮೋದಿ
ಡೆವೀಡ್ ಕ್ಯಾಮರೂನ್ ಅವರ ಚೆಕರ್ಸ್ ತೋಟದ ಮನೆಯಲ್ಲಿ ತಮ್ಮ ಭೇಟಿಯ ನೆನಪಿಗಾಗಿ ಮೋದಿ ಓಕ್ ಗಿಡ ನೆಟ್ಟರು.

ರಾಣಿ ಎಲಿಜಬೆತ್ ಭೇಟಿ
ಬಕಿಂಗ್ ಹ್ಯಾಮ್ ಅರಮನೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಬ್ರಿಟನ್ ರಾಣಿ ಎಲಿಜಬೆತ್ ಅವರನ್ನು ಭೇಟಿಯಾಗಿದ್ದರು.

ವೀಸಾ ವಿಷಯ ಪ್ರಸ್ತಾಪಿಸಿದ ಮೋದಿ
ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ವೀಸಾ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪ ಮಾಡಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ನೀಡುವ ವೀಸಾ ನಿಯಮವನ್ನು ಸಡಿಲಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.

ಮೋದಿ ಮಾತು ಕೇಳಿದ 60 ಸಾವಿರ ಭಾರತೀಯರು
ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ 60 ಸಾವಿರ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ತಮ್ಮ ಎಂದಿನ ಶೈಲಿಯಲ್ಲಿ ಭಾಷಣ ಮಾಡಿದ ಮೋದಿ ಭಾರತೀಯ ಸಮುದಾಯದವರು ತುದಿಗಾಲಲ್ಲಿ ನಿಂತು ಕೇಳುವಂತೆ ಮಾಡಿದರು.

ರಾಣಿಗೆ ಉಡುಗೊರೆ ನೀಡಿದ ಮೋದಿ
ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಪ್ರಧಾನಿ ಮೋದಿ ಬ್ರಿಟನ್ ರಾಣಿ ಎಲಿಜಬೆತ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಉಡುಗೊರೆಯನ್ನು ನೀಡಿದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ ನರೇಂದ್ರ ಮೋದಿ ಅವರ ಭಾಷಣಕ್ಕೂ ಮೊದಲು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.












Click it and Unblock the Notifications