ಮಾರಕ 'ಅನಿಲ' ಸ್ಫೋಟಕ್ಕೆ ನ್ಯೂಯಾರ್ಕ್ ತತ್ತರ

ನ್ಯೂಯಾರ್ಕ್, ಮಾ.13: ಮ್ಯಾನ್ ‌ಹಟನ್ ‌ನಲ್ಲಿರುವ ಬೃಹತ್ ವಸತಿ ಸಂಕೀರ್ಣವೊಂದು ಬುಧವಾರ ಸ್ಪೋಟಗೊಂಡು ಕುಸಿದು ಬಿದ್ದ ಪರಿಣಾಮ ಕನಿಷ್ಠ ಮೂವರು ಸಾವಿಗೀಡಾಗಿದ್ದು, ಕನಿಷ್ಠ 60 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಾರ್ಲೆಮ್ ‌ನಲ್ಲಿರುವ ಪಾರ್ಕ್ ಅವೆನ್ಯೂ ಹಾಗೂ 116ನೆ ಬೀದಿಯ ಸಮೀಪ ದುರಂತ ಸಂಭವಿಸಿದೆ. ನ್ಯೂಯಾರ್ಕಿನಲ್ಲಿ ಸಂಭವಿಸಿದ ಈ ಅನಿಲ ದುರಂತದಿಂದ ಜನತೆ ಬೆಚ್ಚಿಬಿದ್ದಿದ್ದಾರೆ.

ಘಟನೆಯ ವೇಳೆ ಭೂಕಂಪ ಸಂಭವಿಸಿದ ಅನುಭವ ತಮಗಾಗಿರುವುದಾಗಿ ಸ್ಥಳೀಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಘಟನಾಸ್ಥಳದ ಸಮೀಪದಿಂದಲೇ ರೈಲುಹಳಿಗಳು ಹಾದುಹೋಗುವ ಕಾರಣ ಗ್ರಾಂಡ್ ಸೆಂಟ್ರಲ್ ರೈಲುನಿಲ್ದಾಣದ ಆಗಮನ ಹಾಗೂ ನಿರ್ಗಮನ ರೈಲುಸೇವೆಗಳನ್ನು ತಕ್ಷಣದಿಂದಲೇ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಘಟನಾಸ್ಥಳಕ್ಕೆ ಧಾವಿಸಿದ್ದಾರೆ. ಸ್ಫೋಟದ ಪರಿಣಾಮ ಕಟ್ಟಡವು ಛಿದ್ರಗೊಂಡು ಅವಶೇಷಗಳು ಬಹಳ ದೂರದವರೆಗೆ ಚದುರಿಬಿದ್ದಿವೆ ಎಂದು ವರದಿ ತಿಳಿಸಿದೆ.

ನೂರಾರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ತುರ್ತು ಸೇವಾ ವಾಹನಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ವರದಿ ತಿಳಿಸಿದೆ. ಅಡುಗೆ ಅನಿಲ ಸಿಲಿಂಡರ್ ‌ನ ಸೋರಿಕೆ ದುರಂತಕ್ಕೆ ಕಾರಣವಾಗಿರಬಹುದು ಎಂಬ ಆರಂಭಿಕ ಅನುಮಾನ ಈಗ ದೃಢಪಟ್ಟಿದೆ.

ನ್ಯೂಯಾರ್ಕ್: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ

ನ್ಯೂಯಾರ್ಕ್: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ

ನ್ಯೂಯಾರ್ಕ್: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆಯಿದೆ ಎಂದು AP ವರದಿ ಮಾಡಿದೆ. ಇದುವರೆವಿಗೂ ನಾಲ್ವರ ಮೃತದೇಹಸಿಕ್ಕಿದೆ. ಸುಮಾರು 9 ಕುಟುಂಬಗಳು ನಾಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ನ್ಯೂಯಾರ್ಕ್: ಈ ಹಿಂದಿನ ಅನಿಲ ಸ್ಫೋಟಗಳು

ನ್ಯೂಯಾರ್ಕ್: ಈ ಹಿಂದಿನ ಅನಿಲ ಸ್ಫೋಟಗಳು

ನ್ಯೂಯಾರ್ಕ್: ಈ ಹಿಂದೆ 2007ರಲ್ಲಿ ಗ್ರಾಂಡ್ ಸೆಂಟ್ತ್ರಲ್ ಟರ್ಮಿನಲ್, ಮಿಡ್ ಟೌನ್, ಮ್ಯಾನ್ ಹಟ್ಟನ್ ನಲ್ಲಿ ಅನಿಲ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿ ಮೃತ ಪಟ್ಟು 12 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 2009ರಲ್ಲೂ ಇದೇ ಪ್ರಮಾಣದ ಹಾನಿ ಸಂಭವಿಸಿತ್ತು.

ಬೆಂಕಿ ನಂದಿಸುವ ಕಾರ್ಯ ಸಫಲ

ಸ್ಥಳೀಯ ಕಾಲಮಾನ ಮುಂಜಾನೆಯ 9:34ರ ವೇಳೆಗೆ ಘಟನೆಯ ಬಗ್ಗೆ ದೂರವಾಣಿ ಕರೆ ಬಂದಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ ‌ಹಟನ್ ವಸತಿ ಸಂಕೀರ್ಣ ಕುಸಿತ

ಮ್ಯಾನ್ ‌ಹಟನ್ ವಸತಿ ಸಂಕೀರ್ಣ ಕುಸಿತ

ಮ್ಯಾನ್ ‌ಹಟನ್ ‌ನಲ್ಲಿರುವ ಬೃಹತ್ ವಸತಿ ಸಂಕೀರ್ಣದ ದುರಂತ ಚಿತ್ರ

ಮ್ಯಾನ್ ‌ಹಟನ್ ವಸತಿ ಸಂಕೀರ್ಣ ಕುಸಿತ ಚಿತ್ರ

ಮ್ಯಾನ್ ‌ಹಟನ್ ವಸತಿ ಸಂಕೀರ್ಣ ಕುಸಿತ ಚಿತ್ರ

ಮ್ಯಾನ್ ‌ಹಟನ್ ‌ನಲ್ಲಿರುವ ಬೃಹತ್ ವಸತಿ ಸಂಕೀರ್ಣವೊಂದು ಬುಧವಾರ ಸ್ಪೋಟಗೊಂಡು ಕುಸಿದು ಬಿದ್ದ ಪರಿಣಾಮ ಕನಿಷ್ಠ ಮೂವರು ಸಾವಿಗೀಡಾಗಿದ್ದು, ಕನಿಷ್ಠ 60 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಯಾರ್ಕ್ ಪೊಲೀಸ್ ಸಿಬ್ಬಂದಿ ಕೂಡಾ ನೆರವು

U/D Manhattan: 1644 Park Ave Building is gone. NYPD Bomb squad staging at the scene

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+