ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಲು 7 ದಿನ ಸಾಕು!

ನವದೆಹಲಿ, ಆಗಸ್ಟ್ 13: ಮುಂದಿನ ಏಳು ದಿನಗಳಲ್ಲಿ ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರರು ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ತಾಲಿಬಾನ್ ಯಾವುದೇ ರೀತಿ ಹಿಂಸಾಚಾರದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.

ಯಾವುದೇ ವಿದೇಶಿ ಸಂಘಟನೆ ಅಥವಾ ಗುಂಪಿನ ಮೇಲೆ ದಾಳಿ ಮಾಡುವ ಉದ್ದೇಶವನ್ನು ತಾಲಿಬಾನ್ ಹೊಂದಿಲ್ಲ. "ಮಾನವೀಯ ಬಿಕ್ಕಟ್ಟಿನ" ನಡುವೆ ಯುದ್ಧಪೀಡಿತ ಅಫ್ಘಾನಿಸ್ತಾನಕ್ಕೆ ನೆರವಾಗುವಂತೆ ತಾಲಿಬಾನ್ ವಕ್ತಾರರು ಜಾಗತಿಕ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. "ಅಫ್ಘಾನಿಸ್ತಾನವನ್ನು ಜಾಗತಿಕ ಸಂಸ್ಥೆಗಳು ನೋಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ, ಏಕೆಂದರೆ ಇದು ಅತಿದೊಡ್ಡ ಮಾನವೀಯ ಬಿಕ್ಕಟ್ಟು ಆಗಿದ್ದು, ಈ ಹಂತದಲ್ಲಿ ನಾವು ಯಾವುದೇ ವಿದೇಶಿ ಕಾರ್ಯಾಚರಣೆ ಅಥವಾ ಎನ್‌ಜಿಒ ಮೇಲೆ ದಾಳಿ ಮಾಡುವುದಿಲ್ಲ," ಎಂದು ಹೇಳಿದ್ದಾರೆ.

ತಾಲಿಬಾನ್ ಸಂಘಟನೆಯು ಪ್ರಮುಖ ಪ್ರಾದೇಶಿಕ ನಗರಗಳನ್ನು ಅತಿಕ್ರಮಿಸಿಕೊಳ್ಳುತ್ತಿದೆ. ಕಂದಾಹಾರ್ ಸೇರಿದಂತೆ 12ಕ್ಕೂ ಹೆಚ್ಚು ನಗರಗಳ ಮೇಲೆ ನಿಯಂತ್ರಣ ಸಾಧಿಸಿರುವುದರ ಬೆನ್ನಲ್ಲೇ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ರಾಷ್ಟ್ರಗಳು ಅಫ್ಘಾನಿಸ್ತಾನಕ್ಕೆ ಸಾವಿರಾರು ಯೋಧರನ್ನು ನಿಯೋಜಿಸಲು ಆದೇಶಿಸಿವೆ.

In Next 7 Days Taliban Planned for controlled Complete Afghanistan Including Kabul

ಅಫ್ಘಾನಿಸ್ತಾನದ ನಗರಗಳಲ್ಲಿ ತಾಲಿಬಾನ್ ಹಿಡಿತ:

ತಾಲಿಬಾನ್ ಉಗ್ರ ಸಂಘಟನೆಯು ಅಫ್ಘಾನಿಸ್ತಾನದ ಹಲವು ನಗರಗಳ ಮೇಲೆ ಹಿಡಿತ ಸಾಧಿಸಿಕೊಳ್ಳುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸೇನೆಯು ಸ್ವದೇಶಕ್ಕೆ ಹಿಂತಿರುಗಿದ ಬೆನ್ನಲ್ಲೇ ಅಫ್ಘಾನ್ ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ.

ಗುರುವಾರವಷ್ಟೇ ದೇಶದ ಅತಿದೊಡ್ಡ ನಗರ ಎನಿಸಿಕೊಂಡಿರುವ ಕಂದಾಹಾರ್ ಅನ್ನು ತಾಲಿಬಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಕಂದಹಾರ್‌ನಲ್ಲಿರುವ ರಾಜ್ಯಪಾಲದ ಕಚೇರಿ ಮತ್ತು ಇತರೆ ಆಡಳಿತ ಕಚೇರಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ನಗರದ ಮೇಲೆ ಹಿಡಿತ ಸಾಧಿಸಿದೆ. ಈವರೆಗೂ ರಾಷ್ಟ್ರದಲ್ಲಿ 12 ಪ್ರಮುಖ ನಗರಗಳ ಮೇಲೆ ತಾಲಿಬಾನ್ ಉಗ್ರ ಸಂಘಟನೆಯು ನಿಯಂತ್ರಣವನ್ನು ಕಾಯ್ದುಕೊಂಡಿದೆ. ಅಫ್ಘಾನಿಸ್ತಾನದ ಸರ್ಕಾರವು ದೇಶದ ಪ್ರಮುಖ ನಗರಗಳಲ್ಲೇ ತನ್ನ ಹಿಡಿತವನ್ನು ಕಳೆದುಕೊಂಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಯುಎಸ್ ಸೇನೆ ವಾಪಸ್:

ಅಫ್ಘಾನಿಸ್ತಾನದಲ್ಲಿ ನಿಯೋಜಿಸಿದ ಸೇನೆಯನ್ನು 2020ರ ಮೇ ತಿಂಗಳಲ್ಲಿ ಮೊದಲ ಹಂತದಲ್ಲಿ ಯುನೈಟೆಡ್ ಸ್ಟೇಟ್ಸ್ ವಾಪಸ್ ಕರೆಸಿಕೊಂಡಿತು. ಸಪ್ಟೆಂಬರ್ 11ರ ಹೊತ್ತಿಗೆ ಎರಡು ದಶಕಗಳ ಯುದ್ಧವನ್ನು ಕೊನೆಗೊಳಿಸುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದರು.

ಅಫ್ಘಾನಿಸ್ತಾನಕ್ಕೆ ಯುಎಸ್, ಯುಕೆ ಸೇನೆ:

''ಮುಂದಿನ 48 ಗಂಟೆಗಳಲ್ಲಿ ಕಾಬೂಲ್‌ನಲ್ಲಿ ಯುಎಸ್ ತನ್ನ 3,000 ಯೋಧರನ್ನು ನಿಯೋಜಿಸಲಿದೆ ಎಂದು ಪೆಂಟಗನ್ ಹೇಳಿದೆ. ''ತಾಲಿಬಾನ್ ಮೇಲಿನ ದಾಳಿಗೆ ಈ ಯೋಧರನ್ನು ಬಳಸುವುದಿಲ್ಲ,'' ಎಂದು ಸ್ಪಷ್ಟಪಡಿಸಿದೆ. ಯುಕೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಲಂಡನ್ ತನ್ನದೇ ಆದ 600 ಯೋಧರನ್ನು ಕಳುಹಿಸುತ್ತದೆ ಮತ್ತು "ನಮ್ಮೊಂದಿಗೆ ಸೇವೆ ಸಲ್ಲಿಸುವ ತಮ್ಮ ಜೀವವನ್ನು ಪಣಕ್ಕಿಟ್ಟ ಅಫ್ಘಾನ್ ಸಿಬ್ಬಂದಿಯನ್ನು ಸ್ಥಳಾಂತರಿಸಲು ಬೆಂಬಲಿಸುತ್ತದೆ," ಎಂದು ಹೇಳಿದರು. ''ಅಫ್ಘಾನ್ ಭಾಷಾಂತರಕಾರರನ್ನು ಮತ್ತು ಅಮೆರಿಕನ್ನರಿಗೆ ಸಹಾಯ ಮಾಡಿದ ಇತರರನ್ನು ಸ್ಥಳಾಂತರಿಸಲು ಯುನೈಟೆಡ್ ಸ್ಟೇಟ್ಸ್ ದೈನಂದಿನ ವಿಮಾನಗಳನ್ನು ಕಳುಹಿಸಲು ಪ್ರಾರಂಭಿಸುತ್ತದೆ. ಏಕೆಂದರೆ ತಾಲಿಬಾನ್‌ಗಳ ವ್ಯಾಪಕ ದಾಳಿಯಿಂದಾಗಿ ಜೀವಕ್ಕೆ ಭಯವಿದೆ,'' ಎಂದು ಪ್ರೈಸ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆಗೆ ಸರ್ಕಾರ!
ಅಫ್ಘಾನಿಸ್ತಾನದಲ್ಲಿ ಪ್ರಸ್ತು ಸೇನಾಧಿಕಾರಿಗಳು, ಪ್ರತಿನಿಧಿಗಳ ಜೊತೆಗೂಡಿ ತಾಲಿಬಾನ್ ಮಧ್ಯಂತರ ಸರ್ಕಾರವನ್ನು ರಚಿಸುವುದಕ್ಕೆ ಯೋಜನೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಹೊಸ ಸೂತ್ರವನ್ನು ಸೂಕ್ತ ಚರ್ಚೆ ನಂತರ ಎಲ್ಲ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುವುದು. ಈ ಪ್ರಸ್ತಾವನೆ ಇನ್ನೂ ಆರಂಭಿಕ ಹಂತದಲ್ಲಿರುವ ಹಿನ್ನೆಲೆ ಯೋಜನೆಯನ್ನು ತಾಲಿಬಾನ್ ಅಥವಾ ಅಫ್ಘಾನ್ ಸರ್ಕಾರ ಯಾವುದೇ ಪಾಲುದಾರರೊಂದಿಗೆ ಹಂಚಿಕೊಂಡಿಲ್ಲ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+