Imran Khan: ಇಸ್ಲಾಮಾಬಾದ್ ಹೈಕೋರ್ಟ್ ಗೇಟ್ ಪೀಸ್ ಪೀಸ್!

ಪಾಕಿಸ್ತಾನ: ಇಮ್ರಾನ್ ಅರೆಸ್ಟ್ ಬಳಿಕ ರೊಚ್ಚಿಗೆದ್ದಿರುವ ಬೆಂಬಲಿಗರು ಮತ್ತೆ ಹಿಂಸೆಗೆ ಇಳಿದಿದ್ದಾರೆ. ನಿನ್ನೆ ಸುಪ್ರೀಂ ತೀರ್ಪಿನಿಂದ ಖುಷಿಪಟ್ಟು ಪ್ರತಿಭಟನೆ ನಿಲ್ಲಿಸಿದ್ದರು. ಆದರೆ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಇಂದು ಇಮ್ರಾನ್ ಖಾನ್‌ಗೆ ಅಗ್ನಿಪರೀಕ್ಷೆ ಎದುರಾಗಿದೆ. ಇಮ್ರಾನ್ ರಿಲೀಸ್ ಆಗ್ತಾರಾ? ಇಲ್ವಾ? ಅನ್ನೋದು ಇಲ್ಲೇ ಡಿಸೈಡ್ ಆಗಲಿದೆ. ಆದರೆ ಅದಕ್ಕೂ ಮೊದಲು ಹಿಂಸಾಚಾರ ಧಗಧಗಿಸುತ್ತಿದೆ.

ವಿಚಾರಣೆಗಾಗಿ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಬಂದಿದ್ದ ಇಮ್ರಾನ್ (Imran Khan) ಬಂಧಿಸಿದ್ದರು. ಪಾಕಿಸ್ತಾನಿ ಅರೆಸೈನಿಕ ಪಡೆ ಇಮ್ರಾನ್ ಅವರನ್ನ ಅರೆಸ್ಟ್ ಮಾಡಿತ್ತು. ಇದು ಪಾಕಿಸ್ತಾನದ ನೆಮ್ಮದಿ ಕೆಡಿಸಿತ್ತು. ಮತ್ತೊಂದ್ಕಡೆ ಇಮ್ರಾನ್ ಬಂಧನದ ಬಗ್ಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ತೀರ್ಪು ನೀಡಿ ಬಂಧನ ಸರಿಯಾಗಿದೆ ಎಂದಿತ್ತು. ಆದರೆ ಪಾಕಿಸ್ತಾನ ಸುಪ್ರೀಂಕೋರ್ಟ್ ಉಲ್ಟಾ ತೀರ್ಪು ನೀಡಿ, ಬಂಧನ ಕಾನೂನು ಬಾಹೀರ ಎಂದಿದೆ. ಹೀಗಾಗಿ ಮತ್ತೆ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲು ಸೂಚಿಸಲಾಗಿದೆ.

imran khan

ವಿಚಾರಣೆ ಹೊತ್ತಲ್ಲೇ ಪೀಸ್ ಪೀಸ್!

ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಇಂದು ಮತ್ತೊಂದು ಹಂತದ ವಿಚಾರಣೆಗೆ ಇಮ್ರಾನ್ ಖಾನ್ ಬಂದಿದ್ದರು. ಆ ವೇಳೆ ಹೈಕೋರ್ಟ್ ವಿರುದ್ಧ ರೊಚ್ಚಿಗೆದ್ದ ಇಮ್ರಾನ್ ಖಾನ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಿಂಸಾಚಾರ ಭುಗಿಲೆದ್ದು, ಗಲಾಟೆ ತೀವ್ರವಾಗಿದೆ. ಇಸ್ಲಾಮಾಬಾದ್ ಹೈಕೋರ್ಟ್ ಗೇಟ್ ಮುರಿದು, ಗಲಾಟೆ ನಡೆಸಿರುವ ಇಮ್ರಾನ್ ಬೆಂಬಲಿಗರು ಹೈಕೋರ್ಟ್ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಹೀಗಾಗಿ ಫಾಕಿಸ್ತಾನದ ಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ.

ಪಂಜಾಬ್ ಪೊಲೀಸರಿಂದ ಇಮ್ರಾನ್ ಬಂಧನ?

ಇತ್ತ ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಖಾನ್ ಅವರ ಅರ್ಜಿ ವಿಚಾರಣೆ ನಡೆಸುತ್ತಿದ್ದರೆ, ಮತ್ತೊಂದ್ಕಡೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಇಮ್ರಾನ್ ಬಂಧನಕ್ಕೆ ಲಾಹೋರ್‌ನಿಂದ ಬರುತ್ತಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಯಾಕಂದ್ರೆ ಇಮ್ರಾನ್ ಖಾನ್ ವಿರುದ್ಧ ಹತ್ತಾರು ಪ್ರಕರಣಗಳನ್ನ ದಾಖಲಿಸಿರುವ ಪಂಜಾಬ್ ಪ್ರಾಂತ್ಯದ ಪೊಲೀಸರು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಇಮ್ರಾನ್ ಖಾನ್‌ಗೆ ಮತ್ತೆ ಕಂಟಕ ಎದುರಾಗಿದೆ.

imran khan

ಇಮ್ರಾನ್ ವಿರುದ್ಧ ಭ್ರಷ್ಟಾಚಾರ ಆರೋಪ

ಅಷ್ಟಕ್ಕೂ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಈಗ ಇಮ್ರಾನ್ ಖಾನ್ ಜೈಲು ಹಕ್ಕಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್‌ ವಿಚಾರಣೆ ಕೂಡ ಆರಂಭವಾಗಿದೆ. ಆದರೆ ಇಮ್ರಾನ್ ಬೆಂಬಲಿಗರು ಈ ಆರೋಪ ಅಲ್ಲಗಳೆಯುತ್ತಿದ್ದಾರೆ.

ಬಿಡುಗಡೆ ಆಗ್ತಾರಾ ಇಮ್ರಾನ್ ಖಾನ್?

ಪಾಕಿಸ್ತಾನದಲ್ಲಿ ಇಮ್ರಾನ್ ಬೆಂಬಲಿಗರು ಮತ್ತೊಂದು ರೌಂಡ್ ಉಗ್ರ ಪ್ರತಿಭಟನೆ ಆರಂಭಿಸಿ ಹಿಂಸೆಗೆ ಇಳಿದಿದ್ದಾರೆ. ಈ ಹಿಂಸೆ ನಿಯಂತ್ರಿಸಲು ಆಗದ ಪಾಕ್ ಸೇನೆ ಪರದಾಡುತ್ತಿದೆ. ಹೀಗಾಗಿ ಕಂಡಲ್ಲಿ ಗುಂಡು ಹೊಡೆಯುತ್ತಿದೆ. ನಿನ್ನೆ ಸುಪ್ರೀಂಕೋರ್ಟ್ ಇಮ್ರಾನ್ ಪರ ತೀರ್ಪು ನೀಡಿದ ಬಳಿಕ ಪರಿಸ್ಥಿತಿ ಸೈಲೆಂಟ್ ಆಗಿತ್ತು. ಇಮ್ರಾನ್ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಮಹತ್ವದ ತೀರ್ಪು ನೀಡಿ ಇಮ್ರಾನ್ ಬಂಧನ ಕಾನೂನು ಬಾಹೀರ ಎಂದಿತ್ತು. ಆದರೆ ಈಗ ಪರಿಸ್ಥಿತಿ ಮತ್ತೆ ಉಲ್ಟಾ ಆಗಿದೆ.

ಪಾಕಿಸ್ತಾನದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ

ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್‌ರನ್ನ ಇಸ್ಲಾಮಾಬಾದ್‌ ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಆದರೆ ಇದೇ ಹೊತ್ತಲ್ಲಿ ಲಾಹೋರ್ ಪೊಲೀಸರು ಇಮ್ರಾನ್ ಖಾನ್ ಬಂಧನಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರೂ ಹಿಂಸಾಚಾರ ತೀವ್ರಗೊಂಡಿದೆ. ಭ್ರಷ್ಟಾಚಾರದ ಬಲೆಯಲ್ಲಿ ಸಿಲುಕಿ ಇಮ್ರಾನ್ ಖಾನ್ ಜೈಲುಹಕ್ಕಿಯಾಗಿದ್ದು, ಇಮ್ರಾನ್ ಜೀವಕ್ಕೆ ಅಪಾಯ ಇದೆ ಎಂದು ಬೆಂಬಲಿಗರು ಆರೋಪಿಸುತ್ತಿದ್ದಾರೆ.

ಒಟ್ನಲ್ಲಿ ಇಮ್ರಾನ್ ಲಾಕ್ ಆಗಿದ್ದು, ಐಎಸ್‌ಐ ಮತ್ತು ಪಾಕಿಸ್ತಾನ ಮಿಲಿಟರಿ ವಿರುದ್ಧ ಮಾತನಾಡಿ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನು ಪ್ರಜೆಗಳು ಇಮ್ರಾನ್ ಪರವಾಗಿ ಹೋರಾಟ ಆರಂಭಿಸಿದ್ದು, ಸದ್ಯ ಪರಿಸ್ಥಿತಿ ಇನ್ನೂ ಹೆಚ್ಚಿನ ಸಂಕಷ್ಟ ತಂದೊಡ್ಡುವ ಭೀತಿ ಇದೆ. ಹೀಗಾಗಿ ಪಾಕಿಸ್ತಾನ ಸುಪ್ರೀಂಕೋರ್ಟ್ ಎಲ್ಲವನ್ನೂ ಗಮನಿಸಿ, ಇಮ್ರಾನ್ ಬಿಡುಗಡೆಗೆ ಒಲವು ತೋರುತ್ತಿದೆ. ಆದರೆ ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಬಂಧನಕ್ಕಾಗಿ ಹೆಚ್ಚಿನ ಒಲವು ಹೊಂದಿದೆ. ಇಬ್ಬರ ತಿಕ್ಕಾಟದಲ್ಲಿ ಹಿಂಸಾಚಾರ ತೀವ್ರಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+