Pakistan: ಮಾಜಿ ಪ್ರಧಾನಿ ಬಳಿಕ ಮಾಜಿ ವಿದೇಶಾಂಗ ಸಚಿವ ಅಂದರ್!

ಇಸ್ಲಮಾಬಾದ್: ಪಾಕಿಸ್ತಾನದ ರಾಜಕಾರಣಿಗಳ ಇನ್ನೊಂದು ಮುಖ ದಿನದಿನಕ್ಕೂ ರಿವೀಲ್ ಆಗುತ್ತಿದೆ. ಅದರಲ್ಲೂ ಮಾಜಿ ಪ್ರಧಾನಿಯೇ ಕಂಬಿ ಎಣಿಸುವಾಗ, ಮಾಜಿ ಸಚಿವರು ಬಾಕಿ ಇರ್ತಾರಾ? ಖಂಡಿತಾ ಇಲ್ಲ. ಈಗ ಅದೇ ಆಗಿದ್ದು, ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಅಂದರ್ ಆಗಿದ್ದಾರೆ. ಇಮ್ರಾನ್ ಖಾನ್ ಆಪ್ತನಿಗೆ ಜೈಲು ತೋರಿಸಿದೆ ಅಲ್ಲಿನ ಸರ್ಕಾರ.

ಪಾಕ್ ಉಚ್ಛಾಟಿತ ಪ್ರಧಾನಿ ಆಪ್ತ ಸಹಾಯಕ ಶಾ ಮುಹಮ್ಮದ್ ಖುರೇಷಿ ಅರೆಸ್ಟ್ ಆಗಿದ್ದಾರೆ. ಪಿಟಿಐ ಪಕ್ಷದ ವಕ್ತಾರರು ಈ ಮಾಹಿತಿ ರಿವೀಲ್ ಮಾಡಿದ್ದು, ಪಾಕಿಸ್ತಾನದಲ್ಲೀಗ ಮತ್ತೆ ಬೆಂಕಿ ಬೀಳುವ ಮುನ್ಸೂಚನೆ ಸಿಕ್ಕಿದೆ. 66 ವರ್ಷದ ಖುರೇಷಿಯನ್ನು ಇಸ್ಲಮಾಬಾದ್‌ನ ಪೊಲೀಸರು ಅರೆಸ್ಟ್ ಮಾಡಿ ಅಜ್ಞಾತ ಸ್ಥಳಕ್ಕೆ ಕಳುಹಿಸಿದ್ದಾರೆ ಎಂದು ಪಿಟಿಐ ಪಕ್ಷದ ಮೂಲಗಳು ತಿಳಿಸಿವೆ. ಬಂಧಿತ ಖುರೇಷಿ ವಿರೋಧ ಪಕ್ಷದ ಮುಖಂಡ & ಪಿಟಿಐ ಪಕ್ಷದ ಉಪಾಧ್ಯಕ್ಷ ಕೂಡ ಆಗಿದ್ರು. ಹೀಗೆ ಚುನಾವಣೆಗೂ ಮುನ್ನ ವಿರೋಧಿಗಳನ್ನು ಅಲ್ಲಿನ ಸರ್ಕಾರ ಟಾರ್ಗೆಟ್ ಮಾಡಿ ಒಳಗೆ ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Imran Khan party leader Shah Mahmood Qureshi arrested

ಸರ್ಕಾರದ ವಿರುದ್ಧ ಮಾತನಾಡಿದ್ದ ಖುರೇಷಿ

ಪಾಕಿಸ್ತಾನ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ ಪಾಲಿಸುವ ದೇಶ. ಆದರೆ ಪಾಕಿಸ್ತಾನದಲ್ಲಿ ಈಗ ಸರ್ಕಾರದ ಬಗ್ಗೆ ಯಾರೇ ಪ್ರಶ್ನೆ ಮುಂದಿಟ್ಟರೂ ಸೈಲೆಂಟ್ ಆಗಿ ಅವರ ಕಥೆ ಖಲ್ಲಾಸ್ ಆಗಿ ಜೈಲು ಸೇರುತ್ತಾರೆ. ಇಮ್ರಾನ್ ಖಾನ್ ಕಥೆಯೂ ಇದೇ ರೀತಿ ಆಗಿದೆ. ಇದೀಗ ಇಮ್ರಾನ್‌ರ ಆಪ್ತ ಶಾ ಮುಹಮ್ಮದ್ ಖುರೇಷಿ ಕೂಡ ಸರ್ಕಾರದ ವಿರುದ್ಧ ಮಾತನಾಡಿ ಲಾಕ್ ಆಗಿದ್ದು, ಜೈಲು ಸೇರಿದ್ದಾರೆ. ನವೆಂಬರ್ ಆರಂಭದಲ್ಲಿ ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತಡವಾದರೆ ಕೋರ್ಟ್‌ಗೆ ಹೋಗ್ತೀವಿ ಎಂದು ಖುರೇಷಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆಯನ್ನ ನೀಡಿದ್ದರು. ಈ ಬೆಳವಣಿಗೆ ನಡೆದ ಕೆಲವೇ ಸಮಯದಲ್ಲಿ ಖುರೇಷಿ ಅಂದರ್ ಆಗಿದ್ದಾರೆ.

ಇಮ್ರಾನ್ ಖಾನ್ ವಿರುದ್ಧ ಹೊಸ ಕೇಸ್

ಸೈಫರ್ ಅಂದರೆ ವರ್ಗೀಕೃತ ರಾಜತಾಂತ್ರಿಕ ದಾಖಲೆ ದುರುಪಯೋಗದಲ್ಲಿ ಇಮ್ರಾನ್‌ ಖಾನ್‌ರ ಉದ್ದೇಶಪೂರ್ವಕ ಭಾಗಿ ತನಿಖೆಯಲ್ಲಿ ಕಂಡುಬಂದ ಹಿನ್ನೆಲೆ, ಎಫ್‌ಐಎಯ ಭಯೋತ್ಪಾದನಾ ನಿಗ್ರಹ ವಿಭಾಗ ಕೇಸ್ ದಾಖಲು ಮಾಡಿದೆ ಎನ್ನಲಾಗಿದೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಸಡನ್ ಲಾಕ್ ಆಗಿದ್ದು, ಈ ಹಿನ್ನೆಲೆ ಅಧಿಕೃತ ರಹಸ್ಯ ಕಾಯ್ದೆ 1923 ಸೆಕ್ಷನ್ 5 ರ ಅಡಿ ಎಫ್‌ಐಆರ್‌ ದಾಖಲಾಗಿದೆ. ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ತನಿಖೆ ನಡೆಸಲಿದೆ ಎನ್ನಲಾಗಿದೆ. ಹೀಗೆ ಇಮ್ರಾನ್ ಖಾನ್ ವಿರುದ್ಧ ಕಠಿಣ ಪ್ರಕರಣ ದಾಖಲಾದ ನಂತರ ಖುರೇಷಿ ಕೂಡ ಲಾಕ್ ಆಗಿದ್ದಾರೆ. ಪಿಟಿಐ ಪಕ್ಷದ ನಾಯಕರು ಚಿಂತೆಸುತ್ತಿದ್ದಾರೆ.

140 ಕೇಸ್‌ಗಳ ಸರದಾರ ಮಾಜಿ ಪ್ರಧಾನಿ!

ಇಮ್ರಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದನೆ, ಕೊಲೆ ಯತ್ನವೂ ಸೇರಿ ಭ್ರಷ್ಟಾಚಾರ ಕೇಸ್‌ಗಳು ದಾಖಲಾಗಿವೆ. ಇತ್ತೀಚೆಗೆ ಪಂಜಾಬ್‌ನ ಲಯ್ಯಾ ಜಿಲ್ಲೆಯಲ್ಲಿ ಸ್ಥಳೀಯರ ಮೇಲೆ ಒತ್ತಡ ಹೇರಿ, ₹600 ಕೋಟಿ ಬೆಲೆ ಬಾಳುವ ಭೂಮಿ ಕೇವಲ ₹13 ಕೋಟಿ ರೂಪಾಯಿಗೆ ಖರೀದಿಸಿದ ಆರೋಪ ಕೇಳಿಬಂದಿತ್ತು. ಇದು ಸಾಲದು ಎಂಬಂತೆ ಮತ್ತೊಂದು ಕೇಸ್ ಬಿದ್ದಿದ್ದು, ಇದು ಸೇರಿ ಒಟ್ಟಾರೆ 140ಕ್ಕೂ ಹೆಚ್ಚು ಪ್ರಕರಣ ಇಮ್ರಾನ್ ವಿರುದ್ಧ ದಾಖಲಾದಂತೆ ಆಗಿದೆ. ಈ ನಡುವೆ ಇಮ್ರಾನ್ ಬೆಂಬಲಿಗರು ಕೂಡ ಒಬ್ಬೊಬ್ಬರಾಗಿ ಅಂದರ್ ಆಗ್ತಿದ್ದಾರೆ.

Imran Khan party leader Shah Mahmood Qureshi arrested

ಇದೆಲ್ಲವನ್ನ ನೋಡುತ್ತಿದ್ದರೆ ಪಾಕಿಸ್ತಾನದ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಪಾಕ್‌ನ ಜನ ಮತ್ತೊಮ್ಮೆ ಪ್ರತಿಭಟನೆಗೆ ಇಳಿಯುವುದು ಬಹುತೇಕ ಪಕ್ಕಾ. ಅಲ್ಲಿನ ರಾಜಕಾರಣಿಗಳು ಪಾಕ್ ವ್ಯವಸ್ಥೆಯನ್ನ ಮತ್ತಷ್ಟು ಹದಗೆಡಿಸುತ್ತಿರುವ ಆರೋಪ ಕೇಳಿಬಂದಿದ್ದು, ಪಾಕ್‌ನಲ್ಲಿ ಈಗಾಗಲೇ ಆರ್ಥಿಕ ದಿವಾಳಿತನ ಕಾಡುತ್ತಿದೆ. ಜನರ ಪರಿಸ್ಥಿತಿ ನರಕವಾಗಿದ್ದು, ಭವಿಷ್ಯವೇ ಮರೀಚಿಕೆಯಾಗಿದೆ. ಇಷ್ಟಾದರೂ ಪಾಕಿಸ್ತಾನ ಸರಿಹೋಗುವ ಲಕ್ಷಣ ಕಾಣುತ್ತಿಲ್ಲ. ದ್ವೇಷದ ರಾಜಕಾರಣ ಪಾಕಿಸ್ತಾನದ ಆಡಳಿತವನ್ನ ಇನ್ನಷ್ಟು ಕೆಡಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+