ಮಾಜಿ ಪ್ರಧಾನಿಗೆ 14 ವರ್ಷ ಜೈಲು ಶಿಕ್ಷೆ: ಇದೆಂತಹ ದೇಶ ಮಾರಾಯ?
ಇಲ್ಲೊಂದು ದೇಶ ಇದೆ ಈ ದೇಶದಲ್ಲಿ ಮಾಜಿ ಪ್ರಧಾನಿಗಳು ಜೈಲಿಗೆ ಹೋಗೋದು ಒಂದು ರೀತಿ ಪ್ಯಾಷನ್ ಆಗಿದೆ. ಅದರಲ್ಲೂ ಭಾರತದ ಆಜನ್ಮ ವೈರಿ ಆಗಿರುವ ಈ ದೇಶದಲ್ಲಿ ಈಗ ಅರಾಜಕತೆ ಕುಣಿಯುತ್ತಿದೆ. ಅದು ಯಾವುದೋ ದೇಶ ಅಲ್ಲ ಭಾರತದ ಪಕ್ಕದಲ್ಲೇ ಮುಳ್ಳಿನ ರೀತಿ ಹುಟ್ಟಿಕೊಂಡ ಪಾಪಿ ಪಾಕಿಸ್ತಾನ!
ಹೌದು, ತೋಷಖಾನಾ ಭ್ರಷ್ಟಾಚಾರ ಕೇಸ್ ಸಂಬಂಧ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗು ಅವರ ಹೆಂಡತಿ ಬುಶ್ರಾ ಬೀಬಿ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗಿದೆ. ಈ ಹಿಂದೆ ಕೂಡ ಪಾಕಿಸ್ತಾನದ ಸೂಕ್ಷ್ಮ ಮಾಹಿತಿಗಳ ಸೋರಿಕೆ ಕೇಸ್ ಸಂಬಂಧ ಇಮ್ರಾನ್ ಮತ್ತು ಇತರರಿಗೆ 10 ವರ್ಷ ಜೈಲು ಶಿಕ್ಷೆಯಾಗಿತ್ತು. ಈ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಮತ್ತೊಮ್ಮೆ ಈ ಮಾಜಿ ಪ್ರಧಾನಿಗೆ ಶಾಕ್ ಸಿಕ್ಕಿದೆ. ಈ ಮೂಲಕ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಮ್ರಾನ್ ಖಾನ್ ಕನಸು ಪೀಸ್ ಪೀಸ್ ಆಗಿದೆ.

10 ವರ್ಷ ಇಮ್ರಾನ್‌ಗೆ ನಿಷೇಧ!
ಅಕ್ಕೊ-ಯು-ಎಂಟಬಿಲಿಟಿ ಕೋರ್ಟ್‌ನ ನ್ಯಾಯಾಧೀಶ ಮೊಹಮ್ಮದ್ ಬಶೀರ್ ಅವ್ರು ಇಮ್ರಾನ್ ಖಾನ್ ಅವರನ್ನು ಇರಿಸಿರುವ, ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲೇ ಪ್ರಕರಣದ ವಿಚಾರಣೆ ನಡೆಸಿದರು. ಇಬ್ಬರಿಗೂ 10 ವರ್ಷ ಯಾವುದೆ ಸರ್ಕಾರಿ ಹುದ್ದೆಯನ್ನ ನೀಡದಂತೆಯು ದೊಡ್ಡ ನಿರ್ಬಂಧ ಹೇರಲಾಗಿದ್ದು, ಹಾಗೇ ಕೋಟಿ ಕೋಟಿ ದಂಡವನ್ನೂ ಕಟ್ಟಬೇಕಿದೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಕಂ ಮಾಜಿ ಪ್ರಧಾನಿ ಇಮ್ರಾನ್ ಖಾನ್. ಅಷ್ಟಕ್ಕೂ ತಮಗೆ ಈ ಕೇಸ್‌ನಲ್ಲಿ ಇಮ್ರಾನ್ ಖಾನ್ ತಮಗೆ ಬಂದ ಉಡುಗೊರೆಗಳ ಮಾಹಿತಿ ಬಹಿರಂಗ ಮಾಡದೆ, ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದರು ಎಂದು ಆರೋಪ ಮಾಡಲಾಗಿತ್ತು.
ಬೇಕು ಬೇಕು ಅಂತಲೇ ಟಾರ್ಗೆಟ್?
ಪಾಕಿಸ್ತಾನ ಮಾಜಿ ಪ್ರಧಾನಿಯನ್ನ ಅಕ್ಷರಶಃ ಕ್ರಿಮಿನಲ್ ರೀತಿ ನಡೆಸಿಕೊಳ್ಳಲಾಗ್ತಿದೆ. ಹೀಗಾಗಿಯೆ ಇಮ್ರಾನ್ ಖಾನ್ ವಿರುದ್ಧ ಹತ್ತಾರು ಕೇಸ್ ಹಾಕಿ, ಹೇಗಾದರೂ ಮುಗಿಸಬೇಕು ಅಂತಾ ಪ್ರಯತ್ನ ಮಾಡ್ತಿದ್ದಾರೆ ಎಂಬ ಆರೋಪ ಇಮ್ರಾನ್ ಅವರ ಬೆಂಬಲಿಗರದ್ದು. ಹೀಗಾಗಿಯೇ, ಇಮ್ರಾನ್ ವಿರುದ್ಧ ಕೊಲೆ ಆರೋಪದ ಕೇಸ್‌ಗಳೂ ಬಿದ್ದಿವೆ ಅನ್ನೋ ಆರೋಪ ಇಮ್ರಾನ್ ಬೆಂಬಲಿಗರದ್ದು. ಇಷ್ಟೆಲ್ಲದರ ನಡುವೆ ಇದೀಗ, ಭಾರಿ ದೊಡ್ಡ ಪ್ರಮಾಣದ ಜೈಲು ಶಿಕ್ಷೆ ಕೂಡ ಇಮ್ರಾನ್‌ಗೆ ಮುಳುವಾಗಿದೆ.

ಜೈಲಿನಲ್ಲೇ ಉಳಿಯುತ್ತಾರಾ ಇಮ್ರಾನ್?
ಪಾಕಿಸ್ತಾನ ಸೇನೆ & ಪಾಕ್ ಕೇಂದ್ರ ಸರ್ಕಾರ ಇಮ್ರಾನ್‌ರ ಟಾರ್ಗೆಟ್ ಮಾಡಲು ಪಿತೂರಿ ಮಾಡಿದೆ ಎಂಬ ಆರೋಪವಿದೆ. ಉಗ್ರನ ಪಟ್ಟ ಕಟ್ಟುವುದು ಕೂಡ ಒಂದು ಪ್ಲ್ಯಾನ್, ಅನ್ನೋ ಮಾತು ಈ ಹಿಂದೆ ಓಡಾಡಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ, ಒಳಗೆ ಹಾಕಿದರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು ಅನ್ನೋ ಪ್ಲ್ಯಾನ್ ಇತ್ತು. ಅಲ್ಲದೆ ಭ್ರಷ್ಟಾಚಾರದ ಪ್ರಕರಣ ಕೂಡ ಇದೇ ರೀತಿ ಬೇಕು ಅಂತಲೇ ಹಾಕಿದ್ದಾರೆ ಅನ್ನೋದು ಇಮ್ರಾನ್ ಬೆಂಬಲಿಗರ ಆರೋಪ. ಇದರ ಜೊತೆಗೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಪಾಕಿಸ್ತಾನದ ಚುನಾವಣೆಗೂ, ಇಮ್ರಾನ್ ಖಾನ್ ಸ್ಪರ್ಧಿಸಲು ಆಗಲ್ಲ ಅನ್ನೋದು ಈಗ ಪಕ್ಕಾ ಆಗಿದೆ.












Click it and Unblock the Notifications