ಇದು ನನ್ನ ಕೊನೇ ಟ್ವೀಟ್ ಇರಬಹುದು: ಇಮ್ರಾನ್ ಖಾನ್!
ಲಾಹೋರ್: ಪಾಕಿಸ್ತಾನದಲ್ಲಿ ಎಲ್ಲಾ ಉಲ್ಟಾ ಆಗ್ತಿದೆ. ಪಾಕ್ ಮಾಜಿ ಪಿಎಂಗೆ ಕಂಬಿ ಎಣಿಸುವಂತೆ ಮಾಡಲು ಅಲ್ಲಿನ ಸರ್ಕಾರ ಪಣತೊಟ್ಟಿದೆ. ಹೀಗಾಗಿ ಇಮ್ರಾನ್ ಬಂಧನಕ್ಕೆ ಏನು ಬೇಕು ಅದೆಲ್ಲ ಮಾಡುತ್ತಿದೆ ಪಾಕಿಸ್ತಾನ ಸೇನೆ & ಸರ್ಕಾರ. ಇದೀಗ ಇಮ್ರಾನ್ ಮೇಲೆ ಭಯೋತ್ಪಾದನೆ ಅಸ್ತ್ರ ಪ್ರಯೋಗಿಸಿ ಅರೆಸ್ಟ್ ಮಾಡಲು ಕುತಂತ್ರ ರೂಪಿಸಲಾಗಿದ್ದು, ಇಮ್ರಾನ್ ಕೊನೇ ಟ್ವೀಟ್ ಎಂಬ ಬಾಂಬ್ ಪ್ರಯೋಗಿಸಿದ್ದಾರೆ.
ಇಮ್ರಾನ್ ಖಾನ್ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಭಯಗೊಂಡ ರೀತಿ ಬರೆದುಕೊಂಡು ವಿಡಿಯೋ ಒಂದನ್ನ ಹಾಕಿದ್ದಾರೆ. ವಿಡಿಯೋದಲ್ಲಿ ತಮ್ಮನ್ನು ಬಂಧಿಸಲು ಪಾಕ್ ಸರ್ಕಾರ ಕುತಂತ್ರ ಮಾಡಿದೆ ಅಂತಾ ಹೇಳಿದ್ದಾರೆ. ಇಷ್ಟು ಮಾತ್ರವಲ್ಲ, ತಾವು ಮತ್ತೊಮ್ಮೆ ಅರೆಸ್ಟ್ ಆಗುವ ಮೊದಲು ಇದು ನನ್ನ ಕೊನೇ ಟ್ವೀಟ್ ಇರಬಹುದು ಎಂದಿದ್ದಾರೆ. ಹಾಗಾದ್ರೆ ಇಮ್ರಾನ್ ಖಾನ್ ಬಂಧನಕ್ಕೆ ಹೂಡಿರುವ ಕುತಂತ್ರ ಯಾವುದು? ಇಮ್ರಾನ್ ಮನೆಯ ಸುತ್ತಲೂ ಪೊಲೀಸರು ಸುತ್ತುವರಿದಿದ್ದು ಯಾಕೆ? ಬನ್ನಿ ನೋಡೋಣ.

ಇಮ್ರಾನ್ ಮತ್ತೆ ಯಾಕೆ ಅರೆಸ್ಟ್ ಆಗ್ತಾರೆ?
ಇಮ್ರಾನ್ ಖಾನ್ ವಿರುದ್ಧ ಹಲವು ಆರೋಪವಿದೆ. ಅದ್ರಲ್ಲೂ ಇಮ್ರಾನ್ ಖಾನ್ 5 ಸಾವಿರ ಕೋಟಿ ಹಗರಣ ನಡೆಸಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಮಾಡಿತ್ತು. ಹೊಸ ಗಂಭೀರ ಆರೋಪ ಇಮ್ರಾನ್ ಖಾನ್ ವಿರುದ್ಧ ಕೇಳಿಬಂದಿದ್ದು, ಉಗ್ರರಿಗೆ ಇಮ್ರಾನ್ ಮನೆಯಲ್ಲಿ ಆಶ್ರಯ ನೀಡಲಾಗಿದೆ ಎನ್ನಲಾಗಿದೆ. ಅದ್ರಲ್ಲೂ 40 ಉಗ್ರರು ಇಮ್ರಾನ್ ಮನೆಯಲ್ಲಿ ಇದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಮಾಡಿದೆ. ಹೀಗಾಗಿ ಮತ್ತೆ ಭಯ ಶುರುವಾಗಿ ಸ್ವತಃ ತಮ್ಮ ಬಂಧನಕ್ಕೆ ಕುತಂತ್ರ ನಡೆಯುತ್ತಿದೆ ಎಂದು ಇಮ್ರಾನ್ ಖಾನ್ (Imran Khan) ಆರೋಪಿಸಿದ್ದಾರೆ.
Probably my last tweet before my next arrest .
— Imran Khan (@ImranKhanPTI) May 17, 2023
Police has surrounded my house.https://t.co/jsGck6uFRj
ಇಮ್ರಾನ್ ಜೈಲಿಗೆ ತಳ್ಳಲು ಹೊಸ ಕುತಂತ್ರ?
ಹೌದು, ಇಂತಹದ್ದೊಂದು ಆರೋಪವನ್ನ ತಳ್ಳಿ ಹಾಕುವಂತಿಲ್ಲ. ಯಾಕೆ ಗೊತ್ತಾ ಈಗಾಗಲೇ ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನದ ಕೇಂದ್ರ ಸರ್ಕಾರ ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಹಲವು ಬಾರಿ ಪಿತೂರಿ ಮಾಡಿದೆ. ಇದ್ರಲ್ಲಿ ಇದೂ ಕೂಡ ಒಂದು ಎಂದು ಆರೋಪಿಸಲಾಗುತ್ತಿದೆ. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಮಾಡಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಹಾಗೆ ಪಾಕ್ ಸೇನೆ & ಐಎಸ್‌ಐ ಬಗ್ಗೆ ಮಾತನಾಡಿದ ಇಮ್ರಾನ್‌ಗೆ (Imran Khan Arrest) ಪಾಠ ಕಲಿಸಬಹುದು ಎಂಬ ಕುತಂತ್ರ ಅಡಗಿರಬಹುದು.

ಖಾನ್ ಮನೆ ಸುತ್ತಲೂ ಪೊಲೀಸರ ದಂಡು!
ಪಾಕಿಸ್ತಾನದ ಲಾಹೋರ್‌ನಲ್ಲಿ ಜಮಾನ್ ಪಾರ್ಕ್ ಎಂಬ ಪ್ರದೇಶ ಇದ್ದು, ಇದೇ ಜಾಗದಲ್ಲಿ ಇಮ್ರಾನ್ ಖಾನ್ ಮನೆ ಇದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಇಮ್ರಾನ್ ಖಾನ್‌ಗೆ ಸೇರಿದ ಜಮಾನ್ ಪಾರ್ಕ್‌ನ ಮನೆಯನ್ನ ಇದೀಗ ಸುತ್ತುವರಿದಿದ್ದಾರೆ. ಈ ಮೂಲಕ ಇಮ್ರಾನ್ ಖಾನ್‌ಗೆ ಹೊಸ ಕಂಟಕ ಶುರುವಾಗಿದೆ. 40 ಉಗ್ರರನ್ನು ನಮ್ಮ ವಶಕ್ಕೆ ಒಪ್ಪಿಸಿ, ಇಲ್ಲವಾದಲ್ಲಿ ನಿಮ್ಮ ಮನೆ ಒಳಗೆ ನುಗ್ಗುತ್ತೇವೆ ಎಂದು ಪಂಜಾಬ್ ಸರ್ಕಾರ ಮತ್ತು ಪಂಜಾಬ್ ಪ್ರಾಂತ್ಯದ ಪೊಲೀಸರು ಇಮ್ರಾನ್ ಖಾನ್‌ಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಏನಪ್ಪಾ ಇದು ಇಮ್ರಾನ್ ಖಾನ್?
ನಿನ್ನೆಯಷ್ಟೇ ತಮ್ಮ ಮೇಲಿರುವ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ನೀಡುವಂತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಲಾಹೋರ್ ಹೈಕೋರ್ಟ್ ಮೊರೆ ಹೋಗಿದ್ದರು. ಇಮ್ರಾನ್ ಅರ್ಜಿ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಕಳೆದ ವಾರ ಅರೆಸ್ಟ್ ಆಗಿ ಜೈಲು ಸೇರಿದ್ದ ಇಮ್ರಾನ್ ಖಾನ್, ಮೊನ್ನೆ ಮೊನ್ನೆ ತಾನೆ ರಿಲೀಸ್ ಆಗಿದ್ದರು. ಹೀಗೆ ರಿಲೀಸ್ ಆಗುತ್ತಿದ್ದಂತೆ ಅಲರ್ಟ್ ಆಗಿ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ನೋಡಿದರೆ ಇಮ್ರಾನ್ ಖಾನ್ ಮನೆಯೊಳಗೆ 40 ಉಗ್ರರು ಅಡಗಿರುವ ಆರೋಪ ಕೇಳಿಬಂದಿದೆ.
ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರ
ಇಮ್ರಾನ್ ವಿರುದ್ಧ ಪಾಕಿಸ್ತಾನ ಸೇನೆ & ಪಾಕಿಸ್ತಾನ ಗುಪ್ತಚರ ಸಂಸ್ಥೆ ISI ಮಸಲತ್ತು ನಡೆಸುತ್ತಿರುವ ಆರೋಪವಿದೆ. ಈ ಸಂದರ್ಭದಲ್ಲಿ ಪಾಕ್ ಸರ್ಕಾರ ಕೂಡ ಇವರ ಜೊತೆ ಕೈಜೋಡಿಸಿದ ಗಂಭೀರ ಆರೋಪ ಕೇಳಿಬರುತ್ತಿದೆ. ಮೇ 9ರ ನಂತರ ಖಾನ್ ಬೆಂಬಲಿಗರು ನಡೆಸಿರುವ ಹಿಂಸೆಗೆ ಅವರನ್ನೇ ಹೊಣೆ ಮಾಡೋಕೆ ಎಲ್ಲಾ ತಯಾರಿ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಾಮೀನು ಪಡೆಯಲು ಇಮ್ರಾನ್ ಖಾನ್ ಲಾಹೋರ್ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರವಾಗಲಿದೆ.












Click it and Unblock the Notifications