ಸುದೀರ್ಘ ಯಾತ್ರೆ ಆರಂಭಿಸಿದ ಇಮ್ರಾನ್‌ ಖಾನ್‌: ಇಸ್ಲಾಮಾಬಾದ್‌ನಲ್ಲಿ ಬಿಗಿ ಭದ್ರತೆ

ಇಸ್ಲಾಮಾಬಾದ್‌, ಅಕ್ಟೋಬರ್ 28; ಬಿಕ್ಕಟ್ಟಿನಲ್ಲಿರುವ ಶೆಹಬಾಜ್ ಷರೀಫ್ ಸರ್ಕಾರದ ಮೇಲೆ ಒತ್ತಡ ಹೇರಿ, ಸಾರ್ವತ್ರಿಕ ಚುನಾವಣೆಗೆ ಒತ್ತಾಯಿಸಲು ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಸುದೀರ್ಘ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಈ ಯಾತ್ರೆಯು ಸುಮಾರು 380 ಕಿ.ಮೀ ಕ್ರಮಸಲಿದ್ದು, ಲಾಹೋರ್‌ನಿಂದ ಇಸ್ಲಾಮಾಬಾದ್‌ವರೆಗೂ ನಡೆಯಲಿದೆ. ಇಮ್ರಾನ್‌ ಖಾನ್‌ ನೇತೃತ್ವದ ಯಾತ್ರೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಯಾತ್ರೆಯ ನಡುವೆ ಸಾರ್ವಜನಿಕ ಸಭೆಗಳು ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಇಸ್ಲಾಮಾಬಾದ್‌ನಲ್ಲಿ ಈಗಾಗಲೇ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನೂರಾರು ಕಂಟೈನರ್‌ಗಳನ್ನು ಪ್ರಮುಖ ಜಾಗಗಳಲ್ಲಿ ಇರಿಸಲಾಗಿದೆ. ಇಮ್ರಾನ್‌ ಖಾನ್‌ ಅಭಿಮಾನಿಗಳು ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡಲು ಯತ್ನಿಸಿದರೆ, ಅದನ್ನು ತಡೆಯಲು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

 Imran Khan begins long march for early elections in Pakistan

ಲಾಹೋರ್ ಲಿಬರ್ಟಿ ಚೌಕ್‌ನಿಂದ ಈ ಸುದೀರ್ಘ ಯಾತ್ರೆಯು ಆರಂಭವಾಗಿದ್ದು, ಫಿರೋಜ್‌ಪುರ ರಸ್ತೆ, ಇಚ್ಛಾ, ಆಜಾದಿ ಚೌಕ್, ಮೊಜಾಂಗ್, ಡಾಟಾ ದರ್ಬಾರ್ ಕಡೆಯಿಂದ ಮುರಿಡ್ಕೆ ಕಡೆಗೆ ಸಾಗಲಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಕಾಮೋಕಿ, ಗುಜ್ರಾನ್‌ವಾಲಾ, ದಸ್ಕಾ, ಸಂಬ್ರಿಯಾಲ್, ಲಾಲಾ ಮೂಸಾ, ಖರಿಯನ್, ಗುಜ್ಜರ್ ಖಾನ್ ಮತ್ತು ರಾವಲ್ಪಿಂಡಿ ಮೂಲಕ ಯಾತ್ರೆ ಸಾಗಲಿದೆ. ನವೆಂಬರ್‌ 4 ರಂದು ಇಸ್ಲಾಮಾಬಾದ್ ಪ್ರವೇಶಿಸುವ ನಿರೀಕ್ಷೆಯಿದೆ. ಇಸ್ಲಾಮಾಬಾದ್‌ಗೆ ಆಗಮಿಸಿದ ಮೇಲೆ, ಸರ್ಕಾರದ ವಿರುದ್ಧ ಇಮ್ರಾನ್‌ ಖಾನ್‌ ಧರಣಿ ನಡೆಸಲಿದ್ದಾರೆ.

ಇಮ್ರಾನ್‌ ಅವರು 2018ರಲ್ಲಿ ಪ್ರಧಾನಿಯಾಗಿ ನೇಮಕಗೊಂಡರು. 2022ರ ಏಪ್ರಿಲ್‌ನಲ್ಲಿ ಅವರನ್ನು ಪದಚ್ಯುತಗೊಳಿಸಲಾಯಿತು. ಶೆಹಬಾಜ್ ಷರೀಫ್ ಅವರು ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಶೆಹಬಾಜ್‌ ಸರ್ಕಾರದ ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ಇಮ್ರಾನ್‌ ಖಾನ್‌ ಹರಿಹಾಯುತ್ತಲೇ ಬಂದಿದ್ದಾರೆ. ಅವಧಿಗೂ ಮುಂಚಿತವಾಗಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಬೇಕೆಂಬುದು ಇಮ್ರಾನ್‌ ಖಾನ್ ಒತ್ತಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+