ಪಾಕಿಸ್ತಾನ ಬಿಟ್ಟು ಓಡಿ ಹೋಗ್ತಾರಾ ಇಮ್ರಾನ್ ಖಾನ್?

ಇಸ್ಲಾಮಾಬಾದ್: ಭ್ರಷ್ಟಾಚಾರ ಆರೋಪ & ಪಾಕಿಸ್ತಾನದ ಸೇನೆ ವಿರುದ್ಧ ಮಾತನಾಡಿ ಸಂಕಷ್ಟಕ್ಕೆ ಸಿಲುಕಿರುವ ಇಮ್ರಾನ್ ಖಾನ್ ದೇಶ ಬಿಟ್ಟು ಓಡಿ ಹೋಗ್ತಾರಾ? ಹೌದು.. ಇಂಥದ್ದೊಂದು ಪ್ರಶ್ನೆ ಪಾಕ್‌ನಲ್ಲಿ ಭುಗಿಲೆದ್ದಿದೆ. ಈ ಕಾರಣಕ್ಕೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಹೊರಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿದ್ದು, ಈ ನಿರ್ಧಾರದ ವಿರುದ್ಧ ಇಮ್ರಾನ್ ಖಾನ್ ರೊಚ್ಚಿಗೆದ್ದಿದ್ದಾರೆ.

ಪಾಕಿಸ್ತಾನದಲ್ಲಿ ಎಲ್ಲಾ ಸರಿ ಇಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗ್ತಿದೆ. ಅದ್ರಲ್ಲೂ ಕಳೆದ ವರ್ಷ ಖಾನ್ ಕೊಲೆಗೆ ಪ್ರಯತ್ನ ನಡೆದಾಗ ಇಡೀ ಜಗತ್ತು ಬೆಚ್ಚಿಬಿದ್ದಿತ್ತು. ಅಲ್ಲಿಂದ ಶುರುವಾಗಿದ್ದ ತಿಕ್ಕಾಟ ಮೊನ್ನೆ ಮೊನ್ನೆ 10 ಅಮಾಯಕರ ಹೆಣ ಬೀಳಿಸಿತ್ತು. ಇಮ್ರಾನ್ ಅರೆಸ್ಟ್ ಬಳಿಕ ಶುರುವಾದ ಹಿಂಸಾಚಾರದಲ್ಲಿ 10 ಜನ ಪಾಕ್ ನೆಲದಲ್ಲಿ ಮೃತಪಟ್ಟರು. ಈ ಘಟನೆ ನಂತರ ಒಂದಿಲ್ಲೊಂದು ವಿಷಯ ಇಟ್ಟುಕೊಂಡು ಖಾನ್ (Imran Khan Arrest) ವಿರುದ್ಧ ಕೆಂಡ ಕಾರುತ್ತಿರುವ ಪಾಕಿಸ್ತಾನ ಸೇನೆ ಮತ್ತು ಪಾಕ್ ಸರ್ಕಾರ ಹೊಸ ಬಾಣ ಬಿಟ್ಟಿದೆ.

Imran Khan angry about allegations on him

ದೇಶಬಿಟ್ಟು ಓಡಿ ಹೋಗಲು ಇಮ್ರಾನ್ ಸಿದ್ಧತೆ?

ಹೌದು, ಇಂತಹದ್ದೊಂದು ಆರೋಪಕ್ಕೆ ಸ್ವತಃ ಇಮ್ರಾನ್ ಖಾನ್ ಗರಂ ಆಗಿದ್ದಾರೆ. ತಮ್ಮ ಮತ್ತು ಬೆಂಬಲಿಗರ ಮೇಲೆ ಹೊರದೇಶಕ್ಕೆ ತೆರಳದಂತೆ ನಿರ್ಬಂಧ ವಿಧಿಸಿರುವ ಬಗ್ಗೆ ಖಾನ್ ರೊಚ್ಚಿಗೆದ್ದಿದ್ದಾರೆ. ಪಾಕಿಸ್ತಾನ ಸರ್ಕಾರ ಈ ಮೂಲಕ ತಮ್ಮನ್ನು ಟಾರ್ಗೆಟ್ ಮಾಡಿದ ಎಂದು ಆರೋಪಿಸಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರ ಹಾಗೂ ಸಚಿವರು ಮಾತ್ರ ಈ ನಿರ್ಧಾರ ಸಮರ್ಥಿಸಿಕೊಂಡು ಇಮ್ರಾನ್ ಖಾನ್‌ಗೆ ಖೆಡ್ಡ ತೋಡಿರುವ ಆರೋಪ ಕೂಡ ಕೇಳಿಬರುತ್ತಿದೆ. ಇಷ್ಟೆಲ್ಲದರ ನಡುವೆ ಪಾಕ್‌ನಲ್ಲಿ ಹಿಂಸಾಚಾರ ಮತ್ತೆ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ.

33 ಖಾನ್ ಬೆಂಬಲಿಗರು ಸೇನೆ ವಶಕ್ಕೆ

ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ಆಗಿತ್ತು. ಆ ವೇಳೆ ಪಾಕಿಸ್ತಾನ ಸೇನೆಗೆ ಸೇರಿದ ಕಂಪ್ಯೂಟರ್, ಡಾಟಾ ಸೇರಿದಂತೆ ಸೇನಾ ವಸ್ತುಗಳನ್ನ ನಾಶ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ದಾರೆ. ಹೀಗೆ ಅರೆಸ್ಟ್ ಆಗಿದ್ದವರಲ್ಲಿ 33 ಜನರನ್ನು ಪಾಕಿಸ್ತಾನದ ಸೇನೆ ವಶಕ್ಕೆ ಒಪ್ಪಿಸಲಾಗಿದೆ. ಇವರನ್ನು ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಿದೆ.

Imran Khan angry about allegations on him

ಏನ್ ಗುರೂ ಇದು ಪಾಕಿಸ್ತಾನದ ಕಥೆ?

ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಅದರಲ್ಲಿ ಉಗ್ರನ ಪಟ್ಟ ಕಟ್ಟುವುದು ಕೂಡ ಒಂದಾಗಿದೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಖಾನ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಅಲ್ಲಿ ಖಾನ್ ಲಾಕ್ ಆಗಿಲ್ಲ, ಇದೀಗ ಇಮ್ರಾನ್ ಖಾನ್ ಹೊರ ಹೋಗದಂತೆ ಲಾಕ್ ಮಾಡಲಾಗಿದೆ.

5 ಸಾವಿರ ಕೋಟಿ ರೂ. ನುಂಗಿದ ಇಮ್ರಾನ್?

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದಾರೆ. ಆದ್ರೂ ಇದೇ ಪ್ರಕರಣ ಸಂಬಂಧ ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಹೀಗಾಗಿ ದೇಶ ಬಿಟ್ಟು ಈ ವ್ಯಕ್ತಿ ಓಡಿ ಹೋಗ್ತಾರೆ ಎಂದು ಆರೋಪಿಸಿ ಇಮ್ರಾನ್ ಖಾನ್ ಪಾಸ್ಪೋರ್ಟ್ ಲಾಕ್ ಮಾಡಲಾಗಿದೆಯಂತೆ.

Imran Khan angry about allegations on him

ಇದನ್ನೆಲ್ಲಾ ನೋಡಿ ನಗಬೇಕೋ.. ಅಳಬೇಕೋ ಗೊತ್ತಿಲ್ಲ. ಆದರೆ ಪಾಕಿಸ್ತಾನದ ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಹೀನಾಯ ಸ್ಥಿತಿಗೆ ತಲುಪುತ್ತಿದೆ. ಅಲ್ಲಿನ ರಾಜಕೀಯ ಪರಿಸ್ಥಿತಿ ಅತಿ ಹೀನಾಯವಾಗಿದ್ದು, ಮಾಜಿ ಪಿಎಂ ಕೂಡ ಜೀವ ಉಳಿಸಿಕೊಳ್ಳಲು ಹೊರಾಡುವ ಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ಜನ ಕೂಡ ಇದೆಲ್ಲವನ್ನೂ ನೋಡಿ ರೊಚ್ಚಿಗೆದ್ದಿದ್ದಾರೆ. ಮುಂದೆ ಇದೇ ರೀತಿ ವಾತಾವರಣ ಮುಂದುವರಿಯುವ ಲಕ್ಷಣ ಗೋಚರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+