Breaking; ತಕ್ಷಣ ಶಸ್ತ್ರಾಸ್ತ್ರ ಕೆಳಗಿಡಿ ಉಕ್ರೇನ್ ಸೈನಿಕರಿಗೆ ರಷ್ಯಾ ಕರೆ
ಮಾಸ್ಕೋ, ಏಪ್ರಿಲ್ 19; ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಷ್ಯಾದ ಯುದ್ಧ ನೌಕೆ ಮೇಲೆ ಸಹ ಉಕ್ರೇನ್ ದಾಳಿ ನಡೆಸಿದೆ. ಈ ನಡುವೆ ರಷ್ಯಾ ಉಕ್ರೇನ್‌ಗೆ ಕರೆಯೊಂದನ್ನು ನೀಡಿದೆ.
ತಕ್ಷಣ ಎಲ್ಲಾ ಶಸ್ತ್ರಾಸ್ತ್ರ ಕೆಳಗಿಡಿ ಎಂದು ರಷ್ಯಾ ಉಕ್ರೇನ್ ಸೈನಿಕರಿಗೆ ಮಂಗಳವಾರ ಕರೆ ಕೊಟ್ಟಿದೆ. ಡೋನ್ಬಾಸ್ ಆಕ್ರಮಿಸಿಕೊಳ್ಳಲು ರಷ್ಯಾ ಪ್ರಯತ್ನ ನಡೆಸಿದೆ ಎಂಬ ಉಕ್ರೇನ್ ಅಧ್ಯಕ್ಷರ ಹೇಳಿಕೆ ಬಳಿಕ ಈ ಕರೆ ನೀಡಲಾಗಿದೆ.

ಮಂಗಳವಾರ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮಂಗಳವಾರ ತೀವ್ರಗೊಂಡಿದೆ. ಮಾರಿಯಾಪೋಲ್ ವಶಕ್ಕೆ ಪಡೆಯಲು ರಷ್ಯಾ ಸೇನೆ ಪ್ರಯತ್ನ ನಡೆಸಿದೆ. ಡೋನ್ಬಾಸ್ ಮೇಲೆ ಸಹ ದಾಳಿ ಮಾಡಲಾಗುತ್ತಿದೆ.
ರಷ್ಯಾ ಉಕ್ರೇನ್ ಪಶ್ಚಿಮ ಗಡಿಯಲ್ಲಿರುವ ಲಿವ್ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. "ನಾವು ದೇಶವನ್ನು ರಕ್ಷಿಸಿಕೊಳ್ಳಲು ಕೊನೆಯ ತನಕ ಹೋರಾಟ ನಡೆಸುತ್ತೇವೆ" ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಸ್ಕಿ ಹೇಳಿದ್ದಾರೆ.
ರಷ್ಯಾದ ರಕ್ಷಣಾ ಸಚಿವಾಲಯ ಮಾರಿಯುಪೋಲ್ ರಕ್ಷಣೆಗೆ ನಿಂತವರು ಮಧ್ಯಾಹ್ನದಿಂದ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಉತ್ತಮ ಎಂದು ಮಂಗಳವಾರ ಎಚ್ಚರಿಕೆ ನೀಡಿರುವುದು ದಾಳಿಯನ್ನು ತೀವ್ರಗೊಳಿಸುವ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉಕ್ರೇನ್‌ನಿಂದ ಪಡೆಗಳನ್ನು ರಷ್ಯಾ ವಾಪಸ್ ಕರೆಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಯುದ್ಧ ತೀವ್ರಗೊಳಿಸುವ ಸೂಚನೆ ನೀಡಲಾಗಿದೆ. ಉಕ್ರೇನ್ ಮೇಲೆ ದಾಳಿ ತೀವ್ರವಾಗಲಿದೆ ಎಂದು ಈಗಾಗಲೇ ಅಮೆರಿಕ ಎಚ್ಚರಿಕೆ ನೀಡಿತ್ತು.












Click it and Unblock the Notifications