ತಕ್ಷಣದಿಂದಲೇ ಭಾರತ ಹಾಗೂ ಪಾಕ್ ನಡುವೆ ಸಂಘರ್ಷಕ್ಕೆ ಬ್ರೇಕ್: ಡೊನಾಲ್ಡ್ ಟ್ರಂಪ್ ಟ್ವೀಟ್!
ಕಳೆದ ಮೂರು ದಿನಗಳಿಂದಲೂ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ಭವಿಸಿದ್ದ ಉದ್ವಿಗ್ನತೆ ಕೊನೆಗೂ ಅಮೆರಿಕ ಮಧ್ಯ ಪ್ರವೇಶ ಮಾಡಿದ ನಂತರ ಅಂತ್ಯವಾಗುತ್ತಿದೆ. ಈ ಮೂಲಕ ಏಷ್ಯಾದ ಎರಡು ರಾಷ್ಟ್ರಗಳ ನಡುವೆ ನಡೆಯಬಹುದಾಗಿದ್ದ ಯುದ್ಧಕ್ಕೆ ಬ್ರೇಕ್ ಬಿದ್ದಿದೆ. ಭಾರತ ಹಾಗೂ ಪಾಕಿಸ್ತಾನ ಎರಡೂ ನ್ಯೂಕ್ಲಿಯರ್ ರಾಷ್ಟ್ರಗಳಾಗಿವೆ. ಈ ಎರಡೂ ರಾಷ್ಟ್ರಗಳ ನಡುವೆ ಕಳೆದ ಮೂರು ದಿನಗಳಿಂದ ಭಾರೀ ದೊಡ್ಡ ಮಟ್ಟದ ಯುದ್ಧ ಕ್ಷಿಪಣಿ ಹಾಗೂ ಡ್ರೋನ್‌ಗಳ ವಿನಿಮಯವಾಗಿತ್ತು. ಇದೀಗ ಮುಂದಿನ ದಿನಗಳಲ್ಲಿ ಎದುರಾಗಬಹುದಾಗಿದ್ದ ಯುದ್ಧಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಚಾರವಾಗಿ ಟ್ವೀಟ್ ಮಾಡಿದ್ದು ವಿಷಯ ಖಚಿತಪಡಿಸಿದ್ದಾರೆ.
ಅಮರಿಕ ಮಧ್ಯ ಪ್ರವೇಶ ಮಾಡುವುದರೊಂದಿಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆಗೆ ಪೂರ್ಣ ವಿರಾಮ ಬಿದ್ದಂತಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಕಳೆದ ಮೂರು ದಿನಗಳಿಂದಲೂ ಸಂಘರ್ಷ ಏರ್ಪಟ್ಟಿತ್ತು. ಎರಡೂ ದೇಶಗಳ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಮಧ್ಯಪ್ರವೇಶ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಆದರೆ, ಈ ಬೇಡಿಕೆಯನ್ನು ಅಮೆರಿಕ ನಿರಾಕರಿಸಿತ್ತು. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಪ್ರವೇಶ ಮಾಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಈ ಸಂತೋಷದ ವಿಷಯವನ್ನು ಹಂಚಿಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್‌ನಲ್ಲಿ ಏನಿದೆ ?
ಅಮೆರಿಕದ ಮಧ್ಯ ಪ್ರವೇಶ ಹಾಗೂ ಸುದೀರ್ಘ ಚರ್ಚೆಯ ನಂತರ ನಾನು ಈ ವಿಷಯವನ್ನು ಘೋಷಿಸುವುದಕ್ಕೆ ಸಂತೋಷಿತನಾಗಿದ್ದೇನೆ. ಭಾರತ ಹಾಗೂ ಪಾಕಿಸ್ತಾನ ದೇಶಗಳು ಸಂಘರ್ಷವನ್ನು ಅಂತ್ಯ ಮಾಡುವುದಕ್ಕೆ ಒಪ್ಪಿಕೊಂಡಿವೆ ಎಂದು ಅವರು ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳಿಗೂ ಅಭಿನಂದನೆಗಳು ಅಂತ ಅವರು ಹೇಳಿದ್ದಾರೆ.
ಎರಡೂ ದೇಶಗಳಿಗೆ ಥ್ಯಾಂಕ್ಸ್ ಸಾಮಾನ್ಯ ಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ಈ ಎರಡೂ ದೇಶಗಳು ಪ್ರದರ್ಶನ ಮಾಡಿವೆ. ಎರಡೂ ದೇಶಗಳಿಗೂ ಈ ವಿಷಯದಲ್ಲಿ ಥ್ಯಾಂಕ್ಸ್ ಹೇಳುವುದಕ್ಕೆ ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.
ಮಧ್ಯ ಪ್ರವೇಶಕ್ಕೆ ನಿರಾಕರಿಸಿದ್ದ ಅಮೆರಿಕ!
ಇನ್ನು ನೆನ್ನೆಯಷ್ಟೇ ಈ ವಿಚಾರವಾಗಿ ಮಾತನಾಡಿದ್ದ ಅಮೆರಿಕ, ಭಾರತ ಹಾಗೂ ಪಾಕಿಸ್ತಾನದ ನಡುವೆ ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಇದು ನಮಗೆ ಸಂಬಂಧಿಸಿದ್ದಲ್ಲ. ಈ ವಿಚಾರದಲ್ಲಿ ನಾವು ಮೂಗು ತೂರಿಸುವುದಿಲ್ಲ ಎಂದು ಹೇಳಿತ್ತು. ಎರಡೂ ದೇಶಗಳಿಗೆ ನಾವು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಎಂದು ಹೇಳಲು ಸಾಧ್ಯವಿಲ್ಲ. ಎರಡೂ ರಾಷ್ಟ್ರಗಳು ನ್ಯೂಕ್ಲಿಯರ್ ಬಾಂಬ್ ಹೊಂದಿರುವ ದೇಶಗಳು ಎನ್ನುವುದು ನಮಗೆ ತಿಳಿದಿದೆ. ಎರಡೂ ರಾಷ್ಟ್ರಗಳ ನಡುವಿನ ಬೆಳವಣಿಗೆಯನ್ನು ನಾವು ಅತ್ಯಂತ ಸೂಕ್ಷ್ಮದಿಂದ ಗಮನಿಸುತ್ತಿದ್ದೇವೆ ಎಂದು ಅಮೆರಿಕ ಹೇಳಿತ್ತು.












Click it and Unblock the Notifications