4 ವರ್ಷ ಚೆನ್ನಾಗಿ ನಿದ್ದೆ ಮಾಡಬೇಕು ಅಂತಿದ್ರೆ... ಬೈಡನ್‌ಗೆ ಕಿಮ್ ಜಾಂಗ್ ಸಹೋದರಿಯ ಎಚ್ಚರಿಕೆ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್ ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಕಿಮ್‌ ಜಾಂಗ್‌ ಉನ್‌ಗೆ ಕಿಮ್ ಯೋ ಸಲಹೆಗಾರ್ತಿ ಕೂಡಾ, ಆಕೆ ಬೈಡನ್ ಹೆಸರು ಪ್ರಸ್ತಾಪಿಸದೆಯೇ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮುಂದಿನ 4 ವರ್ಷ ನೀವು ಚೆನ್ನಾಗಿ ನಿದ್ದೆ ಮಾಡಬೇಕು ಅಂತಿದ್ದರೆ, ಆರಂಭದಿಂದಲೇ ನಿದ್ದೆ ಕಳೆದುಕೊಳ್ಳುವ ಕೆಲಸಗಳನ್ನು ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಪೆಂಟಗನ್ ಮುಖ್ಯಸ್ಥ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ತಮ್ಮ ಮೊದಲ ಪ್ರವಾಸದ ಭಾಗವಾಗಿ ನಿನ್ನೆ ಜಪಾನ್‌ಗೆ ಭೇಟಿ ನೀಡಿದ್ದಾರೆ.

If You Wish To Sleep Well Kim Jongs Sisters Warning For Joe Biden

ಚೀನಾ ವಿರುದ್ಧ ಭದ್ರಕೋಟೆಯಾಗಿ ಮಿಲಿಟರಿ ಮೈತ್ರಿಯನ್ನು ಒಟ್ಟುಗೂಡಿಸಲು ಮತ್ತು ಪರಮಾಣು ಅಸ್ತ್ರ ಹೊಂದಿರುವ ಉತ್ತರ ಕೊರಿಯಾ ವಿರುದ್ಧ ಯುನೈಟೆಡ್ ಫ್ರಂಟ್‌ ಗಟ್ಟಿಗೊಳಿಸುವ ಉದ್ದೇಶದಿಂದ ಈ ಭೇಟಿ ನೀಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಉತ್ತರ ಕೊರಿಯಾದಲ್ಲಿ ಕಿಮ್ ನಂತರ ಸಹೋದರಿ ಕಿಮ್ ಯೋ ಜಾಂಗ್ ಅತ್ಯಂತ ಪ್ರಭಾವಿ ಮಹಿಳೆಯಾಗಿದ್ದಾರೆ, ಬೈಡನ್ ಆಡಳಿತದ ಉನ್ನತ ಅಧಿಕಾರಿಗಳು, ಪ್ರಮುಖ ಮಿತ್ರರಾಷ್ಟ್ರಗಳಾದ ಜಪಾನ್ ಟೋಕಿಯೋ ಹಾಗೂ ದಕ್ಷಿಣ ಕೊರಿಯಾದ ಸಿಯೋಲ್‌ಗೆ ಭೇಟಿ ಆರಂಭಿಸುವ ಹಿನ್ನೆಲೆಯಲ್ಲಿ ಕಿಮ್ ಈ ಎಚ್ಚರಿಕೆ ನೀಡಿದ್ದಾರೆ.

ಜನವರಿಯಲ್ಲಿ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳುವ ಮೊದಲು ಉತ್ತರ ಕೊರಿಯಾ ನಾಯಕ ಕಿಮ್‌ ಅಮೆರಿಕವನ್ನು ತನ್ನ ದೇಶದ ಅಗ್ರಗಣ್ಯ ಪ್ರಮುಖ ಶತ್ರು ಎಂದು ಘೋಷಿಸಿದ್ದರು.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ಕಳೆದ ವಾರ ಜಂಟಿ ಸಮರಾಭ್ಯಾಸ ಪ್ರಾರಂಭಿಸಿವೆ. ಇದರ ಬೆನ್ನಲ್ಲೇ ಉತ್ತರ ಕೊರಿಯಾದ ಅಧಿಕೃತ ಪತ್ರಿಕೆ ರೊಡಾಂಗ್ ಸಿನ್ಮುನ್‌ನಲ್ಲಿ ಕಿಮ್ ಯೋ ಹೇಳಿಕೆ ಪ್ರಕಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+