Mobile: ಮೊಬೈಲ್ ಬಳಸದೆ 8 ಗಂಟೆ ಇದ್ದರೆ 1 ಲಕ್ಷ ರೂಪಾಯಿ, ಏನಿದು ಗೇಮ್ !
ಮೊಬೈಲ್ ಇಲ್ಲದೆ ಇರುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಹಂತವನ್ನು ಎಲ್ಲರೂ ತಲುಪಿಯಾಗಿದೆ. ಕೆಲವರು ಮೊಬೈಲ್ ಬಿಟ್ಟು ಅರೆಕ್ಷಣವೂ ಇಲ್ಲದೆ ಇರುವುದೂ ಇದೆ. ಶೌಚಾಲಯಗಳಿಗೆ ಮೊಬೈಲ್ ತೆಗೆದುಕೊಂಡು ಹೋಗುವುದೂ ಇದೆ. ಆದರೆ, ಚೀನಾದ ಮಹಿಳೆಯೊಬ್ಬರು ವಿಶಿಷ್ಟ ಸ್ಪರ್ಧೆಯಲ್ಲಿ ಭಾಗವಹಿಸಿ ಬರೋಬ್ಬರಿ 1 ಲಕ್ಷ ರೂಪಾಯಿ ಗೆದಿದ್ದಾರೆ. ಎಂಟು ಗಂಟೆಗಳ ಕಾಲ ಮೊಬೈಲ್ ಫೋನ್ ಬಳಸದೆ ಶಾಂತವಾಗಿ ಮತ್ತು ಆತಂಕವಿಲ್ಲದೆ ಇರುವ ಮೂಲಕ 10,000 ಯುವಾನ್ (ಭಾರತೀಯ ರೂಪಾಯಿ ಮೌಲ್ಯದಲ್ಲಿ 1 ಲಕ್ಷ ರೂಪಾಯಿ) ಗೆದಿದ್ದಾರೆ.
ಚೀನಾದಲ್ಲಿ ಈಚೆಗೆ ವಿಶೇಷವಾದ ಸ್ಪರ್ಧೆಯೊಂದನ್ನು ಆಯೋಜಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು 8 ತಾಸುಗಳ ಕಾಲ ಮೊಬೈಲ್ ಬಳಸದೆ ಇರಬೇಕಿತ್ತು. ಅಷ್ಟೇ ಅಲ್ಲ 8 ತಾಸು ಮೊಬೈಲ್ ಬಳಸದೆ ಇರುವ ಸಮಯದಲ್ಲಿ ಶಾಂತವಾಗಿ ಹಾಗೂ ಆತಂಕಕ್ಕೆ ಒಳಗಾಗದೆ ಇರಬೇಕು ಎನ್ನುವ ಷರತ್ತುಗಳನ್ನೂ ಸಹ ಈ ಸಂದರ್ಭದಲ್ಲಿ ವಿಧಿಸಲಾಗಿತ್ತು. ಈ ಷರತ್ತುಗಳನ್ನು ಮಹಿಳೆ ಸ್ವೀಕರಿಸಿದ್ದರು, 8 ಗಂಟೆಗಳ ಕಾಲ ಮೊಬೈಲ್ ಇಲ್ಲದೆ ಕಳೆದಿದ್ದಾರೆ. ಈ ಮೂಲಕ ಸ್ಪರ್ಧೆಯಲ್ಲಿ ಬರೋಬ್ಬರಿ 1.16 ಲಕ್ಷ ರೂಪಾಯಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚಾಂಗ್‌ಕಿಂಗ್‌ನಲ್ಲಿ ನಡೆಯುತ್ತೆ ಈ ಸ್ಪರ್ಧೆ: ಚೀನಾದ ಚಾಂಗ್‌ಕಿಂಗ್‌ನಲ್ಲಿ ಈ ರೀತಿ ಭಿನ್ನವಾದ ಹಾಗೂ ವಿಚಿತ್ರವಾದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿರುತ್ತದೆ. ಇಲ್ಲಿನ ಚಾಂಗ್ಕಿಂಗ್ ಪುರಸಭೆಯಲ್ಲಿ ಶಾಪಿಂಗ್ ಸೆಂಟರ್‌ನಲ್ಲಿ ಈ ರೀತಿ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಟ್ಟು 100 ಜನ ಸ್ಪರ್ಧಿಸಿದ್ದರು. ಅದರಲ್ಲಿ 10 ಜನ ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದರು. ಅಂತಿಮೆ ಸುತ್ತಿಗೆ ಆಯ್ಕೆಯಾದ ಸ್ಪರ್ಧಿಗಳು ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಹಾಸಿಗೆಯ ಮೇಲೆ 8 ತಾಸು ಇರಬೇಕಿತ್ತು.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಅವರು ಯಾವುದೇ ಪೋನ್, ಐಪ್ಯಾಡ್ ಹಾಗೂ ಲ್ಯಾಪ್‌ಟಾಪ್ ಸೇರಿದಂತೆ ಯಾವುದೇ ಎಲೆಕ್ಟ್ರಿಕ್ ಸಾಧನಗಳನ್ನು ಬಳಸುವುದಕ್ಕೆ ಅವಕಾಶ ಇರಲಿಲ್ಲ. ಈ ಗೇಮ್‌ನ ಉದ್ದೇಶ ಸರಳವಾಗಿತ್ತು. ಸಮಯ ಸಿಕ್ಕಾಗ ವಿಶ್ರಾಂತಿ ಮಾಡಿ, ಆಯಾಗಿ ಇರಿ ಸುಮ್ಮನೆ ಪೋನ್‌ನಲ್ಲಿ ಟೈಮ್ ವೇಸ್ಟ್ ಮಾಡಬೇಡಿ ಎನ್ನುವುದು.

ನೋ ಮೊಬೈಲ್ ಪೋನ್: ಇನ್ನು ಚೀನಾದಲ್ಲಿ ನೋ ಮೊಬೈಲ್ ಪೋನ್ ಚಾಲೆಂಜ್ ಚೀನಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ. ಅಲ್ಲದೇ ಇದೀಗ ಚೀನಾದಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಕಾಂಪಿಟೇಷನ್ ಸಹ ಜಾಸ್ತಿಯಾಗುತ್ತಿದೆ. ಇನ್ನು ಈ ಸ್ಪರ್ಧೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದಾಗುತ್ತಿದ್ದು, ಭಾರತದಲ್ಲೂ ಈ ರೀತಿಯ ಕಾಂಪಿಟೇಷನ್ ಬೇಕು ಅಂತ ಜನ ಡಿಮ್ಯಾಂಡ್ ಮಾಡುತ್ತಿದ್ದಾರೆ.
ಭಾರತದಲ್ಲಿ ಮಕ್ಕಳು ಸಹ ಮೊಬೈಲ್‌ಗೆ ಅಡಿಕ್ಟ್ ಆಗುತ್ತಿದ್ದಾರೆ. ಮೊಬೈಲ್ ಕೊಡದೆ ಇದ್ದರೆ ಊಟ ಮಾಡಲ್ಲ, ಹಠ ಮಾಡುತ್ತಾರೆ ಎಂದು ಪೋಷಕರೇ ಮಕ್ಕಳಿಗೆ ಮೊಬೈಲ್ ಪೋನ್ ಕೊಟ್ಟು ಅಭ್ಯಾಸ ಮಾಡಿಸುವುದು ಇದೆ. ಈ ರೀತಿ ಮಾಡುವುದರಿಂದ ಮಕ್ಕಳು ಪೋನ್‌ಗೆ ಅಡಿಕ್ಟ್ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ನಿರಂತರವಾಗಿ ಮೊಬೈಲ್ ಬಳಸುವವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಈಗಾಗಲೇ ಎಚ್ಚರಿಸಿದ್ದಾರೆ.












Click it and Unblock the Notifications