ಕೆರೆಯ ನೀರನ್ನು ಕೆರೆಗೆ ಚೆಲ್ಲಿ, ಬರುವ ಲಾಭ ಪಡೆದುಕೊಳ್ಳಿ!

ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ಅಮೆರಿಕ ಮಗುವನ್ನು ಚಿವುಟಿ, ತೊಟ್ಟಿಲು ಕೂಡ ತೂಗುತ್ತಿದೆ ಎಂಬ ಆರೋಪ ಇದೆ. ಅಮೆರಿಕ ನಾಯಕರ ನಡೆ ಈ ಆರೋಪಗಳಿಗೆ ತಕ್ಕಂತೆ ಇದೆ. ಈಗ ಕೂಡ ಅಷ್ಟೇ ಅಮೆರಿಕ ಮಹತ್ವದ ನಿರ್ಧಾರ ಕೈಗೊಂಡು, ಇಸ್ರೇಲ್ ಸೇನೆಯ ಪರ ಬ್ಯಾಟ್ ಬೀಸಲು ಮುಂದಾಗಿದೆ. ಅಮೆರಿಕದ ಈ ನಡೆಯಿಂದ ಮಧ್ಯಪ್ರಾಚ್ಯ ಮತ್ತಷ್ಟು ಹೊತ್ತಿ ಉರಿಯುವ ಮುನ್ಸೂಚನೆ ಸಿಗುತ್ತಿದೆ.

ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವೆ ಭೀಕರ ದಾಳಿ ನಡೆಯುತ್ತಿದೆ. ಈ ಪರಿಸ್ಥಿತಿಯ ಅಬ್ಬರಕ್ಕೆ ಸಿಲುಕಿ ಸಾಮಾನ್ಯ ಜನರು ನಲುಗಿ ಹೋಗಿದ್ದಾರೆ. ಆದರೆ ಇಸ್ರೇಲ್ ಸೇನೆ ಮಾತ್ರ ಯುದ್ಧ ಮತ್ತಷ್ಟು ಪ್ರಬಲಗೊಳಿಸಿ, ಹಮಾಸ್ ಉಗ್ರರ ಸರ್ವನಾಶಕ್ಕೆ ತೊಡೆತಟ್ಟಿ ನಿಂತಿದೆ. ಹೀಗೆ ಕಗ್ಗಂಟಾಗಿ ನಿಂತ ಸಮಯದಲ್ಲೇ ಪೆಂಟಗಾನ್ ರೂಪಿಸಿರುವ ರಣತಂತ್ರವು ಸಂಚಲನ ಸೃಷ್ಟಿ ಮಾಡಿದೆ. ಹಾಗಾದರೆ ಅಮೆರಿಕ ಈಗ ಹೇಳಿರೋ ಆ ಪ್ರಮುಖ ವಿಚಾರ ಏನು? ಈಗ ಅಮೆರಿಕ ಕೈಗೊಳ್ಳುತ್ತಿರುವ ನಡೆಯಿಂದ ಯುದ್ಧದಲ್ಲಿ ಏನೇನು ಬದಲಾವಣೆ ಆಗುತ್ತೆ?

If America done this then Hamas & Israel war will become more deadly

ಕೆರೆಯ ನೀರನ್ನು ಕೆರೆಗೆ ಚೆಲ್ಲಿ!

ಅಷ್ಟಕ್ಕೂ ಶತ್ರುಗಳು ನಡೆಸುವ ಕ್ಷಿಪಣಿ ದಾಳಿಯಿಂದ ರಕ್ಷಣೆ ಪಡೆಯಲು ಇಸ್ರೇಲ್ ಸೇನೆಯ ಬಳಿ 'ಐರನ್ ಡೋಮ್' ಕ್ಷಿಪಣಿ ರಕ್ಷಣಾ ವ್ಯವಸ್ಥೆ ಇದ್ದು, ಹೀಗಾಗಿ ಹಮಾಸ್ ಉಗ್ರ ಪಡೆಯ ಭೀಕರ ದಾಳಿಯನ್ನೂ ಇಸ್ರೇಲ್ ಮೊನ್ನೆ ಮೊನ್ನೆ ಹಿಮ್ಮೆಟ್ಟಿಸಿದೆ. ಪರಿಸ್ಥಿತಿ ಹೀಗಿದ್ದಾಗ ತನ್ನ ಬಳಿ ಇರುವ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಇನ್ನಷ್ಟು ಪ್ರಬಲವಾಗಬೇಕು ಎಂದು ಇಸ್ರೇಲ್ ಚಿಂತನೆ ನಡೆಸುತ್ತಿತ್ತು. ಇದೀಗ ಇಸ್ರೇಲ್‌ಗೆ ಬಲ ತುಂಬುವ ರೀತಿ ಅಮೆರಿಕ ಕೂಡ ಚಿಂತನೆ ನಡೆಸಿದೆ.

ಅಮೆರಿಕ ಏನು ಮಾಡುತ್ತಿದೆ ಗೊತ್ತಾ?

ಹೌದು ಈ ಹಿಂದೆ ಇಸ್ರೇಲ್‌ ಸೇನೆಯಿಂದ ಖರೀದಿ ಮಾಡಿದ್ದ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನ ಇಸ್ರೇಲ್‌ಗೆ ಮರಳಿಸಲು ಅಮೆರಿಕ ಚಿಂತನೆ ನಡೆಸಿದೆ. ಈ ಮೂಲಕ ಸ್ನೇಹಿತ ಇಸ್ರೇಲ್ ನೆರವಿಗೆ ನಿಲ್ಲಲು ಅಮೆರಿಕ ಸನ್ನದ್ಧವಾಗಿದೆ. ಇಸ್ರೇಲ್ ಬಳಿ, ಅಮೆರಿಕದ ಸೇನೆ 2 ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಮಾಡಿತ್ತು. ಈಗ ಇಸ್ರೇಲ್ ಸೇನೆ, ಸಮಸ್ಯೆ ಸುಳಿಗೆ ಸಿಲುಕಿರುವ ಕಾರಣ ಅವರಿಗೆ ಸಹಾಯ ಮಾಡಲು ಅಮೆರಿಕ ಮುಂದಾಗಿದೆ ಅನ್ನೋ ಮಾತು ಕೇಳಿಬಂದಿದೆ. ಇನ್ನು ಅಮೆರಿಕದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಇನ್ನೂ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮರಳಿಸುವ ನಿರ್ಧಾರ ಅಂತಿಮವಾಗಿಲ್ಲ.

ಗಾಜಪಟ್ಟಿ ಸಹಾಯಕ್ಕೆ ನಿಂತ ಈಜಿಪ್ಟ್

ಎಲ್ಲವನ್ನು ಕಳೆದುಕೊಂಡು ಅಕ್ಷರಶಃ ನರಕದಲ್ಲಿ ನರಳುತ್ತಿರುವ ಗಾಜಾ ಜನರ ಪಾಲಿಗೆ ಈಜಿಪ್ಟ್ ಈಗ ಕೊನೇ ಅವಕಾಶ. ಗಾಜಾಪಟ್ಟಿ ಉತ್ತರದಲ್ಲಿ ಇರುವ 2 ಗಡಿ ಪ್ರದೇಶ ಇಸ್ರೇಲ್‌ ಭೂ ಭಾಗದ ಜೊತೆಗೆ ಸಂಪರ್ಕ ಹೊಂದಿದೆ. ಅವೆರಡನ್ನೂ ಇಸ್ರೇಲ್ ಇದೀಗ ಮುಚ್ಚಿ ಹಾಕಿದ್ದು, ಹೀಗಿದ್ದಾಗ ದಕ್ಷಿಣದಲ್ಲಿ ಈಜಿಪ್ಟ್ ಮೂಲಕ ಗಾಜಾ ನಗರದಿಂದ ಹೊರ ಹೋಗಲು ಹಾಗೂ ಅಗತ್ಯ ವಸ್ತುಗಳ ತರಿಸಿಕೊಳ್ಳಲು ಏಕೈಕ ಮಾರ್ಗ ಉಳಿದಿದ್ದು, ಅದರ ರಿಪೇರಿಗೆ ದಿಢೀರ್ ಈಜಿಪ್ಟ್ ಮುಂದಾಗಿದೆ.

If America done this then Hamas & Israel war will become more deadly

ಹಮಾಸ್ ಉಗ್ರರು & ಇಸ್ರೇಲ್ ಸೇನೆ ಮಧ್ಯೆ ಯುದ್ಧ ಶುರುವಾದ ಬಳಿಕ ಜೀವಹಾನಿ ಜೋರಾಗಿದೆ. ಸಾವಿರಾರು ಜನ ಬಲಿಯಾಗಿ, ಲೆಕ್ಕವಿಲ್ಲದಷ್ಟು ಜನ ಆಸ್ಪತ್ರೆಗೆ ಸೇರಿದ್ದಾರೆ. ಈ ಪರಿಸ್ಥಿತಿಯಲ್ಲಿ ಗಾಜಾಪಟ್ಟಿ ಜನರಿಗೆ ಹೊರಗೆ ಹೋಗುವಂತೆ ಇಸ್ರೇಲ್ ಸೇನೆ ಆದೇಶ ನೀಡಿದ್ದು, ಸಾಮಾನ್ಯ ಜನ ಗಾಜಾಪಟ್ಟಿ ಬಿಟ್ಟು ಹೊರಗೆ ಹೋದ ನಂತರ, ಹಮಾಸ್ ಉಗ್ರ ಪಡೆಗೆ ಶಾಕ್ ಕೊಡಲು ಇಸ್ರೇಲ್ ಕಾಯುತ್ತಿದೆ. ಇದೇ ಸಮಯದಲ್ಲಿ ಈಜಿಪ್ಟ್ ಕೂಡ ಗಾಜಾಪಟ್ಟಿ ಜನರ ನೆರವಿಗೆ ನಿಂತಿದ್ದು, ಮತ್ತೊಂದು ಕಡೆ ಹಮಾಸ್ ಉಗ್ರರ ವಿರುದ್ಧದ ಹೋರಾಟಕ್ಕೆ ಅಮೆರಿಕ ಸಾಥ್ ನೀಡುತ್ತಿದೆ. ಹೀಗಾಗಿ ಹಮಾಸ್ ಉಗ್ರರು ಹಾಗೂ ಇಸ್ರೇಲ್ ವಾರ್ ಮತ್ತಷ್ಟು ಭೀಕರವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+