ಪಾಕ್ ಯುವತಿಯರನ್ನು ಚೀನಾದಲ್ಲಿ ವೇಶ್ಯಾವಾಟಿಕೆಗೆ ಮಾರುತ್ತಿದ್ದ ದೊಡ್ಡ ಜಾಲ ಬಯಲು

ಪಾಕಿಸ್ತಾನ ಪೊಲೀಸರು ಅಂತರರಾಷ್ಟ್ರೀಯ ಮಟ್ಟದ ಮಾನವ ಸಾಗಣೆ ಜಾಲವನ್ನು ಭೇದಿಸಿದ್ದಾರೆ. ವೇಶ್ಯಾವಾಟಿಕೆ ಜಾಲಕ್ಕೆ ಸೇರಿದ ಹನ್ನೆರಡು ಮಂದಿ ಶಂಕಿತರನ್ನು ಪಾಕ್ ಆಧಿಕಾರಿಗಳು ಬಂಧಿಸಿದ್ದಾರೆ. ಈ ಜಾಲದ ಕೆಲಸ ಏನೆಂದರೆ, ಪಾಕಿಸ್ತಾನಿ ಮಹಿಳೆಯರನ್ನು ಚೀನಾಕ್ಕೆ ಸಾಗಿಸಿ, ಅಲ್ಲಿ ವೇಶ್ಯಾವಾಟಿಕೆ ದಂಧೆಗೆ ನೂಕುವುದು. ಹಾಗೆ ಕರೆದೊಯ್ಯುವಾಗ ಮದುವೆ ಅಗಿರುವುದಾಗಿ ಸಾಕ್ಷ್ಯ ಸೃಷ್ಟಿಸುವುದು.

ಬಂಧಿತರಲ್ಲಿ ಎಂಟು ಮಂದಿ ಚೀನಾ ದೇಶದವರು ಹಾಗೂ ನಾಲ್ವರು ಪಾಕಿಸ್ತಾನಿಗಳು ಇದ್ದಾರೆ. ಪಾಕಿಸ್ತಾನಿ ಮಹಿಳೆಯರನ್ನು ಚೀನಾಗೆ ಸಾಗಣೆ ಮಾಡಿ, ಅಲ್ಲಿ ವೇಶ್ಯವಾಟಿಕೆಗೆ ದೂಡುತ್ತಿರುವುದು ಹೆಚ್ಚಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಈ ತಂಡವನ್ನು ಬಂಧಿಸಿದ್ದೇವೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಈ ತಂಡದ ಮುಖ್ಯ ಗುರಿ ಪಾಕಿಸ್ತಾನದಲ್ಲಿ ಇರುವ ಕ್ರಿಶ್ಚಿಯನ್ ಸಮುದಾಯ ಆಗಿತ್ತು. ಮಾನವ ಹಕ್ಕುಗಳ ಸಂಘಟನೆಗಳು ಈ ಬಗ್ಗೆ ಎಚ್ಚರಿಕೆ ನೀಡಿ, ಮಹಿಳೆಯರು ಹಾಗೂ ಯುವತಿಯರನ್ನು ಚೀನಾಗೆ ಸಾಗಿಸುತ್ತಿದ್ದಾರೆ ಎಂದು ತಿಳಿಸಿದ್ದರಿಂದ ಜಾಗ್ರತೆ ವಹಿಸಲಾಗಿತ್ತು. ಚೀನಾಗೆ ಹೀಗೆ ಮದುವೆಯ ನೆಪದಲ್ಲಿ ಏಷ್ಯಾದ ವಿವಿಧ ದೇಶಗಳಿಂದ ಮಹಿಳೆಯರ ಸಾಗಣೆ ನಡೆಯುತ್ತದೆ.

Human trafficking racket busted in Pakistan

ಮಹಿಳೆಯರನ್ನು ಸಾಗಣೆ ಮಾಡಿ, ಅವರ ಅಂಗಗಳನ್ನು ಮಾರಾಟ ಮಾಡಲಾಗುತ್ತದೆ ಎಂಬುದು ಆಧಾರರಹಿತ ಹಾಗೂ ದಾರಿ ತಪ್ಪಿಸುವ ವರದಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವಾರ ಫೈಸಲಾಬಾದ್ ನಲ್ಲಿ ನಡೆದ ವಿವಾಹವೊಂದಕ್ಕೆ ತೆರಳಿದ್ದಾಗ ಪ್ರಕರಣವು ತೆರೆದುಕೊಂಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾದ ಪುರುಷ, ಮಹಿಳೆ, ಮದುವೆ ಮಾಡಿಸುವ ನಕಲಿ ವ್ಯಕ್ತಿಯನ್ನು ಕ್ರಿಶ್ಚಿಯನ್ ಯುವತಿಯ ಮದುವೆ ವೇಳೆ ಬಂಧಿಸಲಾಗಿತ್ತು. ಆ ವೇಳೆ ತಂಡದ ಸದಸ್ಯರು ಬಾಯಿ ಬಿಟ್ಟ್ ಪ್ರಕಾರ, ಪಾಕಿಸ್ತಾನದ ಮೂವತ್ತಾರು ಯುವತಿಯರನ್ನು ಮದುವೆ ನೆಪದಲ್ಲಿ ಚೀನಾಗೆ ಕಳುಹಿಸಿದ್ದಾಗಿ ಮತ್ತು ವೇಶ್ಯಾವಾಟಿಕೆಗೆ ಬಳಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಆ ಯುವತಿಯರ ಪೈಕಿ ಬಹುಪಾಲು ಕ್ರಿಶ್ಚಿಯನ್ನರಾಗಿದ್ದು, ಪೂರ್ವ ಪಂಜಾಬ್ ಪ್ರಾಂತ್ಯದ ವಿವಿಧ ಜಿಲ್ಲೆಗೆ ಸೇರಿದವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+