ಬ್ರುಸೆಲ್ಸ್ ನಂತರ ಇನ್ನಷ್ಟು ದಾಳಿ ಮಾಡ್ತೇವೆ: ಐಎಸ್ಐಎಸ್

Posted By:
Subscribe to Oneindia Kannada

ಬ್ರುಸೆಲ್ಸ್, ಮಾರ್ಚ್ 23: ಬೆಲ್ಜಿಯಂ ರಾಜಧಾನಿಯಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಐಎಸ್ಐಎಸ್ ಹೊತ್ತುಕೊಂಡಿದೆ. ಇನ್ನಷ್ಟು ಇದೇ ರೀತಿ ಪ್ರಬಲ ಸ್ಫೋಟ ನಡೆಸುವುದಾಗಿ ಘೋಷಿಸಿದೆ. ಈ ನಡುವೆ ದಾಳಿ ನಡೆಸಿದ ಮೂವರು ಶಂಕಿತರ ಚಿತ್ರಗಳನ್ನು ಪ್ರಕಟಿಸಲಾಗಿದೆ.

ಬಿಲ್ಜಿಯಂನ ಬ್ರುಸೆಲ್ಸ್​ನ ಜಾವೆಂಟೆಮ್ ವಿಮಾನ ನಿಲ್ದಾಣದಲ್ಲಿ ನಡೆದ ಸ್ಪೋಟದಲ್ಲಿ 35 ಜನ ಮೃತಪಟ್ಟು, 136 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ಯಾರಿಸ್​ನಲ್ಲಿ ನಡೆದ ಬಾಂಬ್ ದಾಳಿ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳ ಹಿಂದೆ ಶಂಕಿತ ಉಗ್ರರನ್ನು ಬೆಲ್ಜಿಯಂ ಪೊಲೀಸರು ಬಂಧಿಸಿದ್ದರು. ಇದಕ್ಕೆ ಪ್ರತಿಕಾರವಾಗಿ ಈ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

Huge manhunt after IS kills 35 in Brussels bombing

ಐಸಿಸ್ ಬಾಂಬ್ ದಾಳಿಗಳಿಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಗಾಗಿ ಬೆಲ್ಜಿಯಂ ಪೊಲೀಸರು 'ವಾಂಟೆಡ್ ನೋಟಿಸ್' ಜಾರಿ ಮಾಡಿದ್ದಾರೆ. ಮೂವರು ಶಂಕಿತರ ಫೊಟೋವನ್ನು ಬಿಡುಗಡೆ ಮಾಡಿರುವ ಪೊಲೀಸರು ಫೊಟೋದಲ್ಲಿ ಬಿಳಿಯ ಶರ್ಟ್ ಮತ್ತು ಜಾಕೆಟ್ ಹಾಗೂ ದಟ್ಟ ಬಣ್ಣದ ಹ್ಯಾಟ್ ಧರಿಸಿ ಲಗ್ಗೇಜ್ ಟ್ರಾಲಿಯನ್ನು ತಳ್ಳುತ್ತಾ ಬ್ರುಸೆಲ್ಸ್ ವಿಮಾನ ನಿಲ್ದಾಣದಲ್ಲಿ ಸಾಗುವ ವ್ಯಕ್ತಿ ಬಗ್ಗೆ ಮಾಹಿತಿ ಕೋರಿದ್ದಾರೆ.

ಸುಮಾರು 130ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಗಿದ್ದ ಪ್ಯಾರಿಸ್ ದಾಳಿಗಳಿಗೆ ಸಂಬಂಧಿಸಿದಂತೆ ಶಂಕಿತ ಭಯೋತ್ಪಾದಕ ಸಲಾಹ ಅಬ್ಡೆಸ್ಲಾಮ್ ಬಂಧನವಾಗಿತ್ತು. ಜೊತೆಗೆ ಹಂಗೇರಿಗೆ ಪ್ರಯಾಣಿಸಿದ್ದ 25ರ ಹರೆಯದ ನಜೀಂ ಲಾಚ್ರಾವೊಯಿಗಾಗಿ ಪ್ಯಾರಿಸ್ ದಾಳಿಗಳ ವಿಚಾರಣೆಗಾಗಿ ನೋಟಿಸ್ ಜಾರಿಯಾಗಿತ್ತು.

-
-
%u0CAC%u0CCD%u0CB0%u0CC1%u0CB8%u0CC6%u0CB2%u0CCD%u0CB8%u0CCD %u0C85%u0CB5%u0CB3%u0CBF %u0CB8%u0CCD%u0CAB%u0CCB%u0C9F%u0C95%u0CCD%u0C95%u0CC6 %u0C95%u0CBE%u0CB0%u0CA3%u0CB0%u0CBE%u0CA6 %u0CB6%u0C82%u0C95%u0CBF%u0CA4%u0CB0 %u0C9A%u0CBF%u0CA4%u0CCD%u0CB0%u0C97%u0CB3%u0CC1
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ISIS has claimed responsibility for the Brussels attacks. Belgium pressed a huge manhunt today after Islamic State bombers attacked Brussels airport and a metro train, killing around 35 people and wounding hundreds as jihadists once again struck at the heart of Europe.
Please Wait while comments are loading...