ತೈವಾನಿನಲ್ಲಿ ಭಾರಿ ಭೂಕಂಪ, ಧರೆಗುರುಳಿದ ದೊಡ್ಡ ಹೋಟೆಲ್
ತೈಪೆ, ಫೆಬ್ರವರಿ 06: ತೈವಾನಿನಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, 300 ರೂಮ್ ಗಳಿದ್ದ ಹೋಟೆಲ್ ಸೇರಿದಂತೆ ಅನೇಕ ಕಟ್ಟಡಗಳು ಧರೆಗುರುಳಿವೆ.
ಮಂಗಳವಾರದಂದು ತೈವಾನಿನ ಪೂರ್ವ ಕರಾವಳಿ ಭಾಗದಲ್ಲಿ ಭೂಕಂಪ ಸಂಭವಿಸಿದೆ. ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಹುವಾಲಿನ್ ನಗರದ ಈಶಾನ್ಯ ಭಾಗದ 21 ಕಿಲೋ ಮೀಟರ್ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಕಂಡು ಬಂದಿದೆ.
Photos of latest #Taiwan earthquake shared on Line group chat. Stay safe, everyone!! https://t.co/UmXgXH1YBj pic.twitter.com/4CupAQ49sE
— Sonia Su 苏妮娅 (@SoniaSu_) February 6, 2018
ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.4ರಷ್ಟು ದಾಖಲಾಗಿದೆ. ಹೋಟೆಲ್ ಕುಸಿತದ ಬಗ್ಗೆ ತೈವಾನ್ ಸರ್ಕಾರ ಕೂಡಾ ಅಧಿಕೃತ ಹೇಳಿಕೆ ನೀಡಿದೆ.












Click it and Unblock the Notifications