ಹಾಲಿವುಡ್ ಅಂಗಳಕ್ಕೆ ಬೆಂಕಿ, ಸುದ್ದಿ ಕೇಳಿ ವಿಲವಿಲ ಒದ್ದಾಡಿದ ಅಭಿಮಾನಿಗಳು... Hollywood Hills
'ಹಾಲಿವುಡ್' ಅಂದ್ರೆ ಇಡೀ ಜಗತ್ತಿನ ಸಿನಿಮಾ ರಂಗದ ಕಿಂಗ್ ಇದ್ದಂತೆ. ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಸುವ 'ಹಾಲಿವುಡ್' ಸಿನಿಮಾ ಇಂಡಸ್ಟ್ರಿ ಜಗತ್ತಿನಾದ್ಯಂತ ಹವಾ ಇಟ್ಟಿದೆ. ಒಬ್ಬ ಸಾಮಾನ್ಯ ಹಾಲಿವುಡ್ ನಟನಾದರೆ ಸಾಕು ಕೋಟಿ ಕೋಟಿ ರೂಪಾಯಿ ಹಣ ಹುಡುಕಿಕೊಂಡು ಬರುತ್ತೆ ಅನ್ನೋ ಮಾತು ಕೂಡ ಇದೆ. ಆದರೆ, ಚಿನ್ನದ ಮೊಟ್ಟೆ ಇಡುವ ಕೋಳಿ 'ಹಾಲಿವುಡ್' ಸಿನಿಮಾ ಇಂಡಸ್ಟ್ರಿ ಹೃದಯಕ್ಕೇ ಇದೀಗ ಬೆಂಕಿ ಬಿದ್ದಿದೆ!
ಹೌದು, ಪಶ್ಚಿಮ ಅಮೆರಿಕದ ಕರಾವಳಿ ಭಾಗದ ಮರಳುಗಾಡು ಪ್ರದೇಶದಲ್ಲಿ ಇದೀಗ ಭಾರೀ ದೊಡ್ಡ ಕಾಡ್ಗಿಚ್ಚು ಹಬ್ಬಿಕೊಂಡಿದೆ. ಹೀಗೆ ಕಾಡಿನ ಬೆಂಕಿ ಇದೀಗ ನಾಡನ್ನು ಸುಡುತ್ತಾ ಇದ್ದು, ಲಕ್ಷಾಂತರ ಜನರು ಜೀವ ಭಯದಲ್ಲಿ ಊರು ಬಿಡುತ್ತಿದ್ದಾರೆ. ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಕಾಡಿನ ಬೆಂಕಿ ತೀವ್ರವಾಗಿ ಹರಡುತ್ತಿದೆ. ಈಗಾಗಲೇ 1,00,000 ಜನರನ್ನ ಶಿಫ್ಟ್ ಮಾಡಲು ಆದೇಶ ನೀಡಲಾಗಿದೆ. ಇಂತಹ ಸಮಯದಲ್ಲೇ, ಹಾಲಿವುಡ್ ಹೃದಯಕ್ಕೂ ಬೆಂಕಿ ಬಿದ್ದಿದೆ.

ಹಾಲಿವುಡ್ ಬೆಟ್ಟಕ್ಕೆ ಬಿತ್ತು ಬೆಂಕಿ!
ಅಮೆರಿಕದ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ ಕಣ್ಣ ಮುಂದೆ ಮನೆಗಳಿಗೆ ಬೆಂಕಿ ಬಿದ್ದಿದ್ದರೂ ಆ ಮನೆಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಜನರು ಕೂಡ ಕಣ್ಣೀರು ಹಾಕುತ್ತಲೇ ತಮ್ಮ, ತಮ್ಮ ಮನೆ ಬಿಟ್ಟು ಓಡಿ ಹೋಗುತ್ತಿದ್ದಾರೆ. ಇನ್ನೊಂದು ಕಡೆ ಜಗತ್ತಿನ ಅತ್ಯಂತ ಶ್ರೀಮಂತ ಸಿನಿಮಾ ಇಂಡಸ್ಟ್ರಿ 'ಹಾಲಿವುಡ್' ಕೂಡ ಕಾಡಿನ ಬೆಂಕಿಯಲ್ಲಿ ಧಗಧಗ ಹೊತ್ತಿ ಉರಿಯುತ್ತಿದೆ. ಹೀಗೆ ಕಣ್ಣ ಮುಂದೆಯೇ ಸುಮಾರು 5 ಜನರ ಜೀವ ಹೋಗಿದ್ದು, 2,000ಕ್ಕೂ ಹೆಚ್ಚು ಕಟ್ಟಡಗಳು ಇದೀಗ ನಾಶವಾಗಿ ಹೋಗಿವೆ.
ಅಮೆರಿಕದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ
ಚಳಿಗಾಲದ ಸಮಯದಲ್ಲಿ ಈ ರೀತಿಯಾಗಿ ಕಾಡ್ಗಿಚ್ಚು ಹೊತ್ತಿಕೊಂಡ ಪರಿಣಾಮ ಅಮೆರಿಕದ ಜನರು ನಲುಗಿ ಹೋಗಿದ್ದಾರೆ. ಈಗಾಗಲೇ ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ನಾಶವಾಗಿದ್ದು, ಕಾಡಿಗೆ ಬೆಂಕಿ ಬಿದ್ದ ನಂತರ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ. ಇಷ್ಟೆಲ್ಲದರ ನಡುವೆ ಮತ್ತೊಂದು ಮಾಹಿತಿ ಕೂಡ ಹೊರಬಿದ್ದು ಸಂಚಲನ ಸೃಷ್ಟಿಯಾಗಿದೆ!
ಅದು ಏನಂದ್ರೆ ಈಗ ಅಮೆರಿಕದ ಪಶ್ಚಿಮ ಭಾಗದಲ್ಲಿ ಭಾರಿ ಘೋರವಾಗಿ ಶೀತಗಾಳಿ ಬೀಸುತ್ತಿದ್ದು ಈ ಗಾಳಿ ವೇಗ ಇನ್ನಷ್ಟು ಹೆಚ್ಚಾಗುವ ಭಯ ಕಾಡುತ್ತಿದೆ. ಗಾಳಿಯ ವೇಗ ಹೆಚ್ಚಾದಷ್ಟು ಬೆಂಕಿ ಇನ್ನಷ್ಟು ಕಾಡು ಪ್ರದೇಶಕ್ಕೆ ಹಬ್ಬುವ ಭಯ ಕಾಡ್ತಿದೆ. ಲಾಸ್ ಏಂಜಲೀಸ್ & ಕ್ಯಾಲಿಫೋರ್ನಿಯಾ ನಿವಾಸಿಗಳು ತಮ್ಮ ಜೀವ ಉಳಿಸಿಕೊಳ್ಳಲು ಓಡಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.












Click it and Unblock the Notifications